ಮಾಟ ಮಂತ್ರ ವಾಮಾಚಾರ ಆಗಿದ್ದರೆ ಈ ಲಕ್ಷಣಗಳು ಕಾಣಿಸುತ್ತವೆ…ನಿಮಗೂ ಹೀಗೆ ಆಗ್ತಾ ಇದ್ಯಾ ನೋಡಿ

ಮಾಟ ವಾಮಾಚಾರ ಆಗಿದ್ದರೆ ಈ ಲಕ್ಷಣಗಳು ಕಾಣಿಸುತ್ತವೆ…..!!

WhatsApp Group Join Now
Telegram Group Join Now

ದೇವರು ನಮ್ಮ ದೇಹಕ್ಕೆ ಅನೇಕ ಗುಣಗಳನ್ನು ಕೊಟ್ಟಿದ್ದಾನೆ. ನಮ್ಮ ದೇಹಕ್ಕೆ ಯಾವುದೇ ರೀತಿಯಾದಂತಹ ಹೊರಗಿನ ಶಕ್ತಿಯ ಪ್ರಭಾವ ಉಂಟಾದರೆ ದೇಹವು ಅದನ್ನು ವಿರೋಧಿಸುತ್ತದೆ. ದೇಹದಲ್ಲಿ ಯಾವು ದೇ ಕಾಯಿಲೆ ಇದ್ದರೆ ದೇಹವು ಪ್ರತಿರೋಧಿಸುವುದಕ್ಕೆ ಪ್ರಾರಂಭಿಸುತ್ತದೆ. ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗವಾದರೂ ದೇಹವು ಅದರ ಶಕ್ತಿ ಇರುವವರೆಗೂ ಸಹ ಎದುರಿಸುತ್ತದೆ.

ಆದರೆ ಈ ವ್ಯಕ್ತಿಯ ಶಕ್ತಿಗಿಂತಲೂ ಅದರ ಪ್ರಾಬಲ್ಯವೇ ಹೆಚ್ಚಾದಾಗ ಅದರ ಪರಿಣಾಮವು ತುಂಬಾ ಪ್ರಬಲವಾಗುತ್ತದೆ. ಆ ವ್ಯಕ್ತಿಯ ರಕ್ತದೊತ್ತಡವು ಸಹ ಹೆಚ್ಚಾಗುತ್ತದೆ. ಹಾಗೂ ಇದು ನಾಡಿಯ ವೇಗವನ್ನು ಸಹ ಹೆಚ್ಚಿಸುತ್ತದೆ. ದುಷ್ಟ ಶಕ್ತಿಗಳು ರಾತ್ರಿ ಸಮಯದಲ್ಲಿ ಸಂಪೂರ್ಣ ವಾಗಿ ಸಕ್ರಿಯವಾಗುತ್ತವೆ. ತಾಂತ್ರಿಕ ಸಮಯ ಮತ್ತು ತಾಂತ್ರಿಕ ಕ್ರಿಯೆಗಳಿಗೆ ರಾತ್ರಿ ಸಮಯ ಹೆಚ್ಚು ಸೂಕ್ತ ಎಂದು ಪರಿಗಣಿಸುವುದಕ್ಕೆ ಇದೇ ಕಾರಣವಾಗಿದೆ.

ರಾತ್ರಿ ಸಮಯವೂ ಆ ಶಕ್ತಿಯು ತನ್ನ ಪ್ರಾಬಲ್ಯವನ್ನು ಸಾಧಿಸುವುದಕ್ಕೆ ಪ್ರಯತ್ನಿಸುತ್ತದೆ. ಅಂತಹ ಸಮಯದಲ್ಲಿ ಯಾರ ಮೇಲೆ ತಂತ್ರ ಪ್ರಯೋಗ ನಡೆದಿರುತ್ತದೆಯೋ ಆ ವ್ಯಕ್ತಿ ನಿದ್ರೆ ಮಾಡುತ್ತಿದ್ದರೆ ಅವನು ಇದ್ದಕ್ಕಿದ್ದಂತೆ ಕಿರುಚಾಡುತ್ತಾ ಎಚ್ಚರವಾಗುತ್ತಾನೆ. ಅಥವಾ ಅವನು ಭಯಾನಕ ಕನಸುಗಳನ್ನು ಕಾಣುವುದಕ್ಕೆ ಪ್ರಾರಂಭಿಸುತ್ತಾನೆ ಹಾಗಾಗಿ ಪದೇಪದೇ ನೀವು ಇಂತಹ ಕನಸುಗಳನ್ನು ಕಾಣುತ್ತಿದ್ದರೆ ಅದರ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.

ಇಂತಹ ಕನಸುಗಳನ್ನು ಎಂದಿಗೂ ನಿರ್ಲಕ್ಷಿಸಲು ಹೋಗಬೇಡಿ. ಒಬ್ಬ ವ್ಯಕ್ತಿಯ ಮೇಲೆ ತಂತ್ರ ಪ್ರಯೋಗವಾಗಿದ್ದರೆ ಆ ವ್ಯಕ್ತಿಯು ದೈಹಿಕ ಮತ್ತು ಮಾನಸಿಕ ಸಮಸ್ಯೆಯನ್ನು ಅನುಭವಿಸುವುದಕ್ಕೆ ಪ್ರಾರಂಭಿಸಿದ್ದಾನೆ ಎಂದು ಹೇಳಲಾಗುತ್ತದೆ. ಅವನ ಆಲೋಚನೆಗಳು ಇದ್ದಕ್ಕಿದ್ದಂತೆ ಅಲೆದಾಡುವುದಕ್ಕೆ ಪ್ರಾರಂಭವಾಗುತ್ತದೆ. ತಂತ್ರ ಪ್ರಯೋಗದಿಂದ ಆ ವ್ಯಕ್ತಿಯ ನೈಜ ಗುಣ ನಾಶವಾಗುವುದಕ್ಕೆ ಪ್ರಾರಂಭವಾಗುತ್ತದೆ. ಈ ಕಾರಣದಿಂದಾಗಿ ಅವನು ದೈಹಿಕ ಅಥವಾ ಮಾನಸಿಕ ಸ್ಥಿತಿಯು ಹಾಳಾಗುತ್ತದೆ.

ಮತ್ತು ಆ ವ್ಯಕ್ತಿ ದುರ್ಬಲನಾಗುವುದಕ್ಕೆ ಪ್ರಾರಂಭಿಸುತ್ತಾನೆ. ಹಾಗೆಯೇ ವಾಮಾಚಾರ ಪ್ರಯೋಗವಾಗಿದೆ ಎಂದರೆ ದೈಹಿಕ ಬದಲಾವಣೆಗಳು ಮೊದಲ ಹಂತದಲ್ಲಿಯೇ ಗೋಚರವಾಗುತ್ತದೆ. ವಿಪರೀತವಾಗಿ ಕೂದಲು ಉದುರುತ್ತದೆ ಮುಖದಲ್ಲಿ ವಿಕಾರತೆ ಕಾಣಿಸುತ್ತದೆ ನಿತ್ಯವೂ ಗಮನಿಸುತ್ತಿರುವವರಿಗೆ ಈ ಬದಲಾವಣೆ ಬಹುಬೇಗನೆ ಗೊತ್ತಾಗುತ್ತದೆ. ಮುಖದಲ್ಲಿ ಒಂದು ರೀತಿಯ ಜೀವಕಳೆ ಎನ್ನುವುದು ಇಲ್ಲವಾಗುತ್ತಾ ಹೋಗುತ್ತದೆ. ಊಟದಲ್ಲಿ ಪದೇಪದೇ ಕೂದಲು ಸಿಗುತ್ತದೆ.

ಇದು ಯಾವ ಪರಿಯಲ್ಲಿ ಅಂದರೆ ಖಂಡಿತವಾಗಿಯೂ ಅನುಮಾನ ಹುಟ್ಟುವುದಕ್ಕೆ ಕಾರಣವಾಗುತ್ತದೆ. ಆಹಾರದಲ್ಲಿ ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಕೂದಲು ಸಿಗುವುದು ಸಾಮಾನ್ಯ. ಆದರೆ ವಾಮಾಚಾರ ಪ್ರಯೋಗ ಆಗಿದ್ದರೆ ಅದರ ಪರಿಣಾಮವೇ ಬೇರೆ ಆಗಿರುತ್ತದೆ. ಮನೆಯಲ್ಲಿ ನೀವು ಹೆಚ್ಚು ಓಡಾಡುವ ಸ್ಥಳದಲ್ಲಿ ಪೊಟ್ಟಣ ಕಟ್ಟಿರುವಂತೆ ಕುಂಕುಮ, ಅರಿಶಿಣ, ನಿಂಬೆ ಹಣ್ಣು, ಭಸ್ಮ, ದಾರಾ ಸುತ್ತಿದ ಮಡಿಕೆ, ಸೂಜಿ ಚುಚ್ಚಿದ ಗೊಂಬೆ ಇವೆಲ್ಲವೂ ಕಂಡರೆ ಒಂದು ರೀತಿಯ ಅನುಮಾನ ಮೂಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]