ಅಂದು ಕೋಟಿಗಟ್ಟಲೆ ಸಂಪಾದಿಸುತ್ತಿದ್ದ OYO ದಿಡೀರನೆ ಪತನವಾಗಿದ್ದು ಹೇಗೆ…? ಯುವ ಪ್ರೇಮಿಗಳ ಅಡ್ಡವಾಗುತ್ತಿದೆಯೇ OYO ?
OYO ಎಂಬ ಸಂಸ್ಥೆಯನ್ನು ಶುರು ಮಾಡಿದ್ದು ರಿತೇಶ್ ಅಗರ್ವಾಲ್ ಎಂಬ ಹುಡುಗ. ಈ ಹುಡುಗನಿಗೆ ಟ್ರಾವೆಲ್ ಮಾಡುವುದು ಎಂದರೆ ತುಂಬಾ ಇಷ್ಟ. ಟ್ರಾವೆಲ್ ಮಾಡುವಾಗ ತುಂಬಾ ಮುಖ್ಯವಾದದ್ದು ನಾವು ಉಳಿದುಕೊಳ್ಳುವಂತಹ ಜಾಗಗಳು ಅಂದರೆ ರೂಮ್ ಗಳು. ತುಂಬಾ ಕಷ್ಟಆದಾಗ.
ಈ ಹುಡುಗನಿಗೆ ಹೋಟೆಲ್ ಗಳ ಬಗ್ಗೆ ಇರುವ ಸಮಸ್ಯೆಗಳು ಗೊತ್ತಾಗು ತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಏನು ಎನ್ನುವಾಗ ಆಗ ಆತನಿಗೆ OYO ದ ಐಡಿಯಾ ಹೊಳೆಯುತ್ತದೆ. ರಿತೇಶ್ ಅಗರ್ವಾಲ್ ಅವರ ಈ ಐಡಿಯಾ 2013ರಲ್ಲಿ OYO ಗೆ ಜನ್ಮ ನೀಡುತ್ತದೆ. ಹೆಚ್ಚಿನ ಜನಕ್ಕೆ ಈ OYO ಎನ್ನುವ ಹೆಸರಿನ ಪೂರ್ಣ ವಿವರ ಗೊತ್ತಿಲ್ಲ.
ಇಲ್ಲಿ OYO ಎಂದರೆ ಆನ್ ಯುವರ್ ಓನ್ ಎಂದರ್ಥ. ಆರಂಭ ದಲ್ಲಿಯೇ ರಿತೇಶ್ OYO ರೂಮ್ ಗಳು ಬೇರೆ ರೂಮ್ ಗಳಿಗಿಂತ ವಿಭಿನ್ನವಾಗಿರಬೇಕು, ಹಾಗೂ ಎಲ್ಲದಕ್ಕಿಂತ ಮುಖ್ಯವಾಗಿ ಸ್ವಚ್ಛವಾಗಿರು ವಂತಹ ರೂಮ್ ಗಳನ್ನು ಕೊಡಬೇಕು ಎಂದು ನಿರ್ಧಾರ ಮಾಡಿದ್ದರು. OYO ಪ್ರಾರಂಭ ಮಾಡಿರುವುದರ ಪ್ರಮುಖ ಉದ್ದೇಶವೇ ಇದಾಗಿತ್ತು. ಇದಕ್ಕಾಗಿ ಬೇರೆ ಬೇರೆ ಹೋಟೆಲ್ ಗಳ ಜೊತೆ ರಿತೇಶ್ ಒಪ್ಪಂದವನ್ನು ಮಾಡಿಕೊಳ್ಳುತ್ತಾರೆ.
ಈ ರೀತಿ ಒಪ್ಪಂದವನ್ನು ಮಾಡಿಕೊಂಡಾಗ ಇದ್ದಂತಹ ಮೊದಲ ಕಂಡಿಷನ್ ಏನು ಎಂದರೆ. ಮೊದಲನೆಯದು ಕಡಿಮೆ ಬೆಲೆ ಹಾಗೂ ಎರಡನೆಯದು ಸ್ವಚ್ಛತೆ. ಕೆಲವೊಂದು ಹೋಟೆಲ್ ಗಳಲ್ಲಿ ಸೌಲಭ್ಯಗಳು ಚೆನ್ನಾಗಿರುತ್ತಿತ್ತು ಆದರೆ ಅದು ಗ್ರಾಹಕರ ವರೆಗೆ ತಲುಪುತ್ತಿರಲಿಲ್ಲ. ಇಂತಹ ಹೋಟೆಲ್ ಗಳನ್ನು OYO ಫ್ಲ್ಯಾಟ್ ಫಾರ್ಮ್ ಗಳ ಮೂಲಕ ಪರಿಚಯ ಮಾಡಿಕೊಡಲಾಗುತ್ತದೆ. ಇನ್ನು ಮದುವೆಯಾಗದ ಕಪಲ್ ಗಳು ಒಂದು ರೂಮ್ ಬುಕ್ ಮಾಡಬೇಕು ಎಂದರೆ.
ತುಂಬಾ ಕಷ್ಟ ಇತ್ತು. ಅವರನ್ನು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದರು. ಇಂತಹ ಒಂದು ಸಮಸ್ಯೆ OYO ದಲ್ಲಿ ಇರಬಾರದು ಎಂದು ರೂಮ್ ಬುಕ್ ಆದ ಮೇಲೆ ಯಾರನ್ನು ಯಾರೂ ಕೂಡ ಪ್ರಶ್ನೆ ಮಾಡುತ್ತಿರಲಿಲ್ಲ. ಇದು ಕೂಡ OYO ಜನಪ್ರಿಯತೆಯನ್ನು ಹೆಚ್ಚಿಸುತ್ತದೆ. ಕೇವಲ ಇದಿಷ್ಟಕ್ಕೆ OYO ಜನಪ್ರಿಯತೆಯನ್ನು ಪಡೆಯಲಿಲ್ಲ. ಬೇರೆ ಕಡೆ ಇಲ್ಲದ ಕೆಲವೊಂದು ಸೌಲಭ್ಯಗಳು ಕೂಡ
OYO ರೂಂನಲ್ಲಿ ಸಿಗುವುದಕ್ಕೆ ಪ್ರಾರಂಭವಾಗುತ್ತದೆ. ಅಂದರೆ ಫ್ರೀ ವೈಫೈ, ಎಸಿ, ಬೆಳಗಿನ ತಿಂಡಿ ಈ ರೀತಿಯ ಸೌಲಭ್ಯಗಳು ಸಿಕ್ಕಾಗ ಸಹಜವಾಗಿ ಪ್ರತಿಯೊಬ್ಬ ಗ್ರಾಹಕರು OYO ದತ್ತ ಮುಖ ಮಾಡುತ್ತಾರೆ. ಈ ರೀತಿ OYO ದ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ದೊಡ್ಡ ದೊಡ್ಡ ಕಂಪನಿಗಳಿಂದ ಫಂಡಿಂಗ್ ಕೂಡ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.