ಆ ಕಾಲದಲ್ಲಿ ಬರೀ ಒಂದು ದಿನಕ್ಕೆ ನಾಲ್ಕು ಲಕ್ಷ ಇತ್ತು ನನ್ನ ಪೇಮೆಂಟ್..ನಟ ಕೋಮಲ್ ಬಿಚ್ಚಿಟ್ಟ ಸತ್ಯ

ಆ ಕಾಲದಲ್ಲಿ ಒಂದು ದಿನಕ್ಕೆ ನಾಲ್ಕು ಲಕ್ಷ ಇತ್ತು ನನ್ನ ಸಂಭಾವನೆ ಎಂದ ಹಾಸ್ಯ ನಟ ಕೋಮಲ್…

WhatsApp Group Join Now
Telegram Group Join Now

ಕೋಮಲ್ ಕರ್ನಾಟಕದಲ್ಲಿ ಹಾಸ್ಯಕ್ಕೆ ಹೆಸರಾಂತ ನಟ.30 ವರ್ಷಗಳ ಕಾಲ ಸಿನಿಮಾ ಇಂಡಸ್ಟ್ರಿಯಲ್ಲಿ ಪಳಗಿರುವ ಕೋಮಲ್ ಅವರು ಈವರೆಗೆ ನೂರಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರನ್ನು ನಕ್ಕು ನಗಿಸಿದ್ದಾರೆ. ಗೋವಿಂದಾಯ ನಮಃ, ಕರೋಡ್ಪತಿ ಮುಂತಾದ ಹಾಸ್ಯ ಸಿನಿಮಾಗಳಲ್ಲಿ ಹಾಸ್ಯನಾಯಕನಾಗಿದ್ದಾರೆ. ಬಹುತೇಕ ಕನ್ನಡದ ಎಲ್ಲಾ ಹೀರೋಗಳ ಸಿನಿಮಾದಲ್ಲೂ ಕೂಡ ಹೀರೋ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡು ಪಕ್ಕದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೋಮಲ್ ಅವನು ನಿಧಾನವಾಗಿ ಸಿನಿಮಾ ಇಂಡಸ್ಟ್ರಿಯಿಂದ ದೂರ ಆಗುತ್ತಿದ್ದಾರಾ ಎನ್ನುವ ಅನುಮಾನಗಳು ಕಾಡುತ್ತಿವೆ.

ಯಾಕೆಂದರೆ ಇತ್ತೀಚೆಗೆ ಕೋಮಲ್ ಅವರು ಯಾವ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿಲ್ಲ ಆದರೆ ಅವರ ಬಹು ನಿರೀಕ್ಷಿತ ಚಿತ್ರ ಉಂಡೆನಾಮ ಸದ್ಯದಲ್ಲೇ ಪ್ರೇಕ್ಷಕರು ಎದುರು ಬರುತ್ತಿದೆ. ಇದಕ್ಕೆ ಸಂಬಂಧಪಟ್ಟ ಒಂದು ಸಂದರ್ಶನದಲ್ಲಿ ಮಾತನಾಡಿದ ಕೋಮಲ್ ಅವರು ಇದರ ಬಗ್ಗೆ ಕೇಳಿದ ಪ್ರಶ್ನೆಗೆ ಕೊಟ್ಟ ಉತ್ತರ ಈ ರೀತಿ ಇತ್ತು. ಹೌದು ನನ್ನ ಸಿನಿ ಜರ್ನಿಗೆ 30 ವರ್ಷ ಹಾಗಿದೆ. 1992 ರಲ್ಲಿ ಸೂಪರ್ ನನ್ ಮಗ ಸಿನಿಮಾ ಮೂಲಕ ಬಂದೆ, ಹೇಗೆ ಇಷ್ಟು ವರ್ಷ ಕಳೆಯಿತು ಎಂದು ಗೊತ್ತೇ ಆಗಲಿಲ್ಲ. ಜನರು ನನ್ನನ್ನು ಆ ಬ್ರಾಂಡ್ ಅಲ್ಲಿ ಒಪ್ಪಿಕೊಂಡಿದ್ದಾರೆ.

ಈಗ ಅದನ್ನು ಕಳೆದುಕೊಳ್ಳುವುದಕ್ಕೆ ಇಷ್ಟ ಇಲ್ಲ. ಜನರಿಗೆ ಅವರ ನಿರೀಕ್ಷೆಗೆ ತಕ್ಕ ಹಾಗೆ ಖುಷಿ ಕೊಡಬೇಕು ಎನ್ನುವ ಕಾರಣಕ್ಕೆ ನನ್ನ ಕೆಲಸದಲ್ಲಿ ಇನ್ನಷ್ಟು ಹೊಸತನ ತರಲು, ಶಕ್ತಿ ತುಂಬಲು ಪ್ರಯತ್ನ ಮಾಡುತ್ತಲೇ ಇರುತ್ತೇನೆ, ಅದಕ್ಕಾಗಿ ಕಲಿಯುತ್ತಾನೆ ಇರುತ್ತೇನೆ. ಜನರಿಗೆ ಹತ್ತಿರವಾಗುವಂತಹ ಪಾತ್ರಗಳು ಅವರನ್ನು ಬೇಗ ಮುಟ್ಟುತ್ತವೆ ಅಂತಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರಿಂದ ಜನ ಇನ್ನೂ ನನ್ನನ್ನು ನೆನಪಿಟ್ಟುಕೊಂಡಿದ್ದಾರೆ, ಇಷ್ಟಪಡುತ್ತಿದ್ದಾರೆ. ಈಗಂತೂ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ದೊಡ್ಡ ಕಾಂಪಿಟೇಶನ್ ಇದೆ.

ಆದರೆ ಆ ಕಾರಣಕ್ಕಾಗಿ ನಾನು ಇಂಡಸ್ಟ್ರಿಯಿಂದ ದೂರ ಉಳಿದಿಲ್ಲ ಅಥವಾ ಸಿನಿಮಾಗಳಲ್ಲಿ ನಡೆಸುತ್ತಿಲ್ಲ ಎಂದು ಅಲ್ಲ, ಸಂಭಾವನೆ ವಿಚಾರವಾಗಿ ನನಗೆ ಒಪ್ಪಿಗೆ ಆಗುತ್ತಿಲ್ಲ. ಯಾಕೆಂದರೆ ನಾನು ಆ ಕಾಲದಲ್ಲೇ ಒಂದು ದಿನಕ್ಕೆ 4 ಲಕ್ಷ ಸಂಭಾವನೆ ತೆಗೆದುಕೊಳ್ಳುತ್ತಿದ್ದವನು. ಒಂದು ಏರಿಯಾದ ಏಳು ಥಿಯೇಟರ್ ಗಳಲ್ಲೂ ಕೂಡ ನನ್ನ ನಟನೆ ಸಿನಿಮಾ ಇರುತ್ತಿತ್ತು. ದತ್ತ, ಹುಡುಕಾಟ, ಚೆಲುವಿನ ಚಿತ್ತಾರ ಆ ಸಮಯದಲ್ಲೇ ಈ ರೀತಿ ಇತ್ತು. ನಿಜ ಹೇಳಬೇಕು ಎಂದರೆ ಸಿನಿಮಾ ಇಂಡಸ್ಟ್ರಿಯಲ್ಲಿ ಹಾಸ್ಯ ನಟರಿಗೆ ಸಂಭಾವನೆ ಹೆಚ್ಚಿಸಿದ್ದೆ ನಾನು, ಯಾಕೆಂದರೆ ಹಾಸ್ಯ ಮಾಡುವುದು ಬಹಳ ಕಷ್ಟ. ಅದು ಕೂಡ ಅಭಿನಯವೇ ಅಲ್ಲವೇ, ಜನ ನಮ್ಮನ್ನು ಸಿನಿಮಾದಲ್ಲಿ ನೋಡಲು ಇಷ್ಟಪಡುತ್ತಿದ್ದಾರೆ ಎಂದರೆ ನಮಗೂ ಆ ರೀತಿ ಸಂಭಾವನೆ ಬೇಕು ಎಂದು ಧ್ವನಿ ಎತ್ತಿದವನೇ ನಾನು.

[irp]