ಗುರುಬಲ ಯಾರಿಗೆ ಏಪ್ರಿಲ್ 21 ಗುರು ರಾಶಿ ಪರಿವರ್ತನೆ, ಹಣ, ಕಂಕಣ ಬಲ...ಒಂದು ವರ್ಷದ ಗುರು ಫಲ...ನಿಮ್ಮ ರಾಶಿಗೆ ಹೇಗಿದೆ ಅದೃಷ್ಟ ನೋಡಿ.. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಗುರುಬಲ ಯಾರಿಗೆ……? ಏಪ್ರಿಲ್ 21 ಗುರು ರಾಶಿ ಪರಿವರ್ತನೆ, ಹಣ, ಕಂಕಣ ಬಲ…|| ಒಂದು ವರ್ಷದ ಗುರು ಫಲ…..||

ಇದೇ ಏಪ್ರಿಲ್ 21ನೇ ತಾರೀಖಿನಂದು ಗುರು ತನ್ನ ರಾಶಿ ಪಥವನ್ನು ಬದಲಿಸಿ ಮೀನ ರಾಶಿಯಿಂದ ಮೇಷ ರಾಶಿಗೆ ಪರಿವರ್ತನೆ ಯಾಗಲಿದೆ. ಗುರು ಗ್ರಹವು ಈ ಜ್ಯೋತಿಷ್ಯದಲ್ಲಿ ಬಹಳಷ್ಟು ಪ್ರಾಮುಖ್ಯತೆಯನ್ನು ಹೊಂದಿರುವಂತಹ ಗ್ರಹವಾಗಿದ್ದು, ಸೌರಮಂಡಲದಲ್ಲಿಯೂ ಕೂಡ ಬೃಹತ್ ಗ್ರಹವಾಗಿದೆ.

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬರಿಗೂ ಕೂಡ ಗುರುವಿನ ಬಲ ಚೆನ್ನಾಗಿದ್ದರೆ ಯಾವುದೇ ರೀತಿಯ ಕೆಲಸಗಳು ಅಥವಾ ಯಾವುದೇ ರೀತಿಯ ವಿಚಾರಗಳು ಅವರು ಅಂದುಕೊಂಡಂತೆ ನೆರವೇರುತ್ತದೆ ಎಂದು ಹೇಳುತ್ತಾರೆ. ಹಾಗೇನಾದರೂ ಗುರು ನಿಮ್ಮ ರಾಶಿಯಲ್ಲಿ ಉಚ್ಚನಾಗಿದ್ದರೆ ಗುರುವಿನಿಂದ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರಿಗೂ ಗುರುವಿನ ಬಲ ಚೆನ್ನಾಗಿರುವುದು ಬಹಳ ಮುಖ್ಯವಾಗಿರುತ್ತದೆ.

ಗುರುಬಲ ಎನ್ನುವುದು ಕೇವಲ ವೈಯಕ್ತಿಕವಾಗಷ್ಟೇ ಪರಿಣಾಮ ಬೀರುವುದಲ್ಲದೆ ಇದು ಸಾರ್ವತ್ರಿಕವಾಗಿ ವಿಶ್ವದ ಮೇಲೆ ಇದು ತನ್ನ ಪರಿಣಾಮವನ್ನು ಬೀರುತ್ತದೆ. ಹಾಗಾದರೆ ಈ ಒಂದು ಗುರುವಿನ ರಾಶಿ ಪರಿವರ್ತನೆಯಿಂದ ಯಾವೆಲ್ಲ ರಾಶಿಯವರಿಗೆ ಶುಭ ಫಲ ಹಾಗೆ ಯಾವೆಲ್ಲ ರಾಶಿಯವರಿಗೆ ಅಶುಭ ಫಲಗಳು ಉಂಟಾಗುತ್ತದೆ ಹೀಗೆ ಗುರುವಿನ ಪರಿವರ್ತನೆ ಯಾರಿಗೆಲ್ಲ ಶುಭವಾಗುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

ಮೊದಲನೆಯದಾಗಿ ಗುರು ಮೇ 1, 2024ರ ವರೆಗೆ ಮೇಷ ರಾಶಿಯ ಲ್ಲಿಯೇ ಅಂದರೆ ಒಂದು ವರ್ಷಗಳ ವರೆಗೆ ಅಲ್ಲಿ ಇರುತ್ತಾನೆ ಅದರಲ್ಲೂ ಗುರುವು ಒಂದು ವರ್ಷಗಳ ಕಾಲ ದೀರ್ಘವಾಗಿ ಇರುತ್ತದೆ. ಹಾಗಾದರೆ ಮೇಷ ರಾಶಿಯವರಿಗೆ ಯಾವುದೆಲ್ಲ ರೀತಿಯಲ್ಲಿ ಈ ವರ್ಷ ಪರಿವರ್ತನೆ ಬೀರುತ್ತದೆ ಎಂದು ನೋಡುವುದಾದರೆ. ಮೇಷ ರಾಶಿಯವರಿಗೆ ಗುರು ಜನ್ಮ ರಾಶಿಗೆ ಬಂದಾಗ ಹಾಗೂ ಶನಿ ಜನ್ಮ ರಾಶಿಗೆ ಬಂದಾಗ ಅಷ್ಟು ಒಳ್ಳೆಯದಲ್ಲ…

ಇದರಿಂದ ಮೇಷ ರಾಶಿಯವರ ಕೆಲಸ ಕಾರ್ಯಗಳಲ್ಲಿ ವಿಳಂಬ ಉಂಟಾ ಗುವುದು, ಅವಮಾನಗಳು ಅಪಮಾನಗಳು ಆಗುವಂಥದ್ದು, ಅದರಲ್ಲೂ ಶುಭ ಕಾರ್ಯಕ್ರಮಗಳಲ್ಲಿ ವಿವಾಹಗಳಲ್ಲಿ ವಿಳಂಬ ಉಂಟಾಗುವುದು ಹೀಗೆ ನಾನಾ ರೀತಿಯಲ್ಲಿ ಮೇಷ ರಾಶಿಯವರಿಗೆ ತೊಂದರೆಗಳು ಸಂಭವಿಸುತ್ತದೆ. ಆದರೆ ದೈನಂದಿನ ಕೆಲಸ ಕಾರ್ಯಗಳಲ್ಲಿ ಕೆಲವೊಂದಷ್ಟು ಒಳ್ಳೆಯ ಸೂಚನೆಗಳು ಸಹ ಇರುತ್ತದೆ ಆದರೆ ನಿಮ್ಮ ಛಲವನ್ನು ಯಾವತ್ತಿಗೂ ಬಿಡಬೇಡಿ.

ಹಾಗೇನಾದರೂ ನೀವು ಹೊಸ ವ್ಯಾಪಾರ ವ್ಯವಹಾರ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದರೆ ಆ ಪ್ರಯತ್ನವನ್ನು ನಿಲ್ಲಿಸಬೇಡಿ ಬದಲಿಗೆ ಅದು ನಿಧಾನಗತಿಯಲ್ಲಿ ನಡೆಯುತ್ತದೆ ಹೊರತು ಅದರಿಂದ ಯಾವುದೇ ರೀತಿಯ ತೊಂದರೆಗಳು ನಷ್ಟಗಳು ಸಂಭವಿಸುವುದಿಲ್ಲ. ನಿಮಗೆ ಗುರುವಿನ ಬಲ ಇಲ್ಲದೆ ಇರಬಹುದು ಆದರೆ ಮಿಕ್ಕ ಎಲ್ಲಾ ಗ್ರಹಗಳ ಬಲವು ನಿಮಗೆ ಇರುತ್ತದೆ. ಹಾಗಾಗಿ ಹೆದರಿಕೊಳ್ಳುವಂತಹ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *