ಈ ವಸ್ತುವನ್ನು ಅಡುಗೆ ಮನೆಯಲ್ಲಿ ನೇತುಹಾಕಿದರೆ ಹಣಕಾಸಿನ ಸಮಸ್ಯೆ ಆಗುತ್ತೆ……..||
ವಾಸ್ತು ಶಾಸ್ತ್ರದಲ್ಲಿ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಅಡುಗೆ ಮನೆಗೆ ಬಹಳ ಪ್ರಾಶಸ್ತ್ಯವನ್ನು ನೀಡಲಾಗಿದೆ. ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಎಲ್ಲಾ ವಿಷಯಗಳ ಬಗ್ಗೆಯೂ ಗಮನಹರಿಸುವುದು ಮುಖ್ಯವಾಗಿರುತ್ತದೆ. ಇಲ್ಲವಾದಲ್ಲಿ ಮನೆಯಲ್ಲಿ ವಾಸ್ತುದೋಷಗಳು ಹೆಚ್ಚಾಗುತ್ತದೆ. ಜೊತೆಗೆ ಕೆಲವು ಸಮಸ್ಯೆಗಳು ಕೂಡ ಬರುವುದಕ್ಕೆ ಪ್ರಾರಂಭವಾಗುತ್ತದೆ. ಆದ್ದರಿಂದ ವಾಸ್ತುವಿನ ದೃಷ್ಟಿಯಿಂದ.
ಅಡುಗೆ ಮನೆಯಲ್ಲಿ ಗಮನಿಸಬೇಕಾದಂತಹ ಅಂಶಗಳು ಯಾವುದು ಎನ್ನುವುದನ್ನು ತಿಳಿದುಕೊಳ್ಳೋಣ. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಎಂದಿಗೂ ಚಪ್ಪಲಿಗಳನ್ನು ಧರಿಸಬಾರದು. ಇದರಿಂದ ವ್ಯಕ್ತಿಯು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಇದಲ್ಲದೆ ಎಂದಿಗೂ ಚಾಕು ಕತ್ತರಿ ಅಥವಾ ಚೂಪಾದ ಪದಾರ್ಥಗಳನ್ನು ಅಡುಗೆ ಮನೆಯ ಗೋಡೆಯ ಮೇಲೆ ತೂಗಿ ಹಾಕಬಾರದು. ಇದು ಅನೇಕ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಪ್ರತಿ ಬಾರಿ ಆಹಾರವನ್ನು ತಯಾರಿಸಿದಾಗಲೆಲ್ಲ ಆ ಆಹಾರವನ್ನು ಪ್ರತ್ಯೇಕವಾಗಿ ಶುದ್ಧ ಪಾತ್ರೆಗಳಲ್ಲಿ ಇರಿಸಬೇಕು. ನೀವು ತಯಾರಿಸಿದಂತಹ ಅಡುಗೆಯನ್ನು ಶುದ್ಧವಾದ ತಟ್ಟೆಯಲ್ಲಿ ಹಾಕಿ ಅದನ್ನು ಹಸುವಿಗೆ ನೀಡಿ ನಂತರ ಮನೆಯಲ್ಲಿರುವ ಸದಸ್ಯರು ಆಹಾರವನ್ನು ಸೇವಿಸಬೇಕು. ಈ ವಿಧಾನ ಅನುಸರಿಸಲು ಸಾಧ್ಯವಾಗದೇ ಇದ್ದರೆ ನೀವು ಆಹಾರವನ್ನು ಸೇವಿಸುವ ಮುನ್ನ ಒಂದು ತಟ್ಟೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆಹಾರ ಪದಾರ್ಥವನ್ನು ಹಾಕಿ.
ಪಕ್ಕದಲ್ಲಿ ಇಡಬೇಕು ಹೀಗೆ ಮಾಡುವುದರಿಂದ ಜೀವನದಲ್ಲಿ ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳಲಾಗುತ್ತದೆ. ಅಲ್ಲದೆ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ. ಹಾಲನ್ನು ಅಡುಗೆ ಮನೆಯಲ್ಲಿ ಇಡುವಾಗ ವಿಶೇಷ ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ಹಾಲನ್ನು ಎಂದಿಗೂ ತೆರೆದಿಡಬಾರದು ಅದನ್ನು ಬೇರೊಂದು ತಟ್ಟೆಯಿಂದ ಮುಚ್ಚಿಡುವಂತಹ ಅಭ್ಯಾಸವನ್ನು ಮಾಡಿಕೊಳ್ಳಿ. ಇಲ್ಲವಾದರೆ ತೆರೆದಿಟ್ಟಂತಹ ಪಾತ್ರೆಯಲ್ಲಿರುವ ಹಾಲು ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡಬಹುದು.
ಅದು ಯಾವುದೇ ರೀತಿಯ ಆರ್ಥಿಕ ದೈಹಿಕ ಮತ್ತು ಮಾನಸಿಕ ತೊಂದರೆಗಳಾಗಿರಬಹುದು. ವಾಸ್ತುಶಾಸ್ತ್ರದ ಪ್ರಕಾರ ಅಡುಗೆಮನೆಯಲ್ಲಿ ಆಹಾರವನ್ನು ಸೇವನೆ ಮಾಡುವುದು ಅನೇಕ ಗ್ರಹ ದೋಷಗಳಿಂದ ಮುಕ್ತಿಯನ್ನು ನೀಡುತ್ತದೆ ಆದರೆ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆ ಯಲ್ಲಿ ಊಟ ಮಾಡಲು ಕುಳಿತುಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ. ಅಡುಗೆ ಮನೆಯ ಮಧ್ಯ ಭಾಗದಲ್ಲಿ ಎಂದಿಗೂ ಕುಳಿತುಕೊಂಡು ಊಟ ಮಾಡಬಾರದು.
ಹಾಗೂ ಆಹಾರ ಸೇವನೆ ಮಾಡುವಾಗ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನತ್ತ ಮುಖ ಮಾಡಿ ಆಹಾರ ಸೇವನೆ ಮಾಡಬೇಡಿ. ಇದು ಶುಭಕರವಲ್ಲ. ಅಡುಗೆ ಮನೆಯಲ್ಲಿರುವ ಗ್ಯಾಸ್ ಸ್ಟವ್ ಹೊರಗಿನವರಿಗೆ ಯಾವುದೇ ಕಾರಣಕ್ಕೂ ಗೋಚರಿಸಿದಂತೆ ಇರಬೇಕು. ಅಡುಗೆ ಮನೆಯಲ್ಲಿ ಯಾವ ತ್ತಿಗೂ ಕೆಲವು ತಪ್ಪುಗಳನ್ನು ಮಾಡಬಾರದು ಈ ರೀತಿ ಮಾಡುವುದರಿಂದ ಅಡುಗೆಮನೆ ಮಲಿನವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.