ಮೇಷ ರಾಶಿ:- ಮಾತನಾಡುವಾಗ ನಿಮ್ಮ ಮಾತಿನ ಮೇಲೆ ಗಮನಹರಿಸು ವುದು ಉತ್ತಮ. ಇಲ್ಲವಾದರೆ ನಿಮ್ಮ ಮಾತುಗಳು ದೊಡ್ಡ ತೊಂದರೆಗೆ ಸಿಲುಕಿಸುತ್ತದೆ. ಈ ದಿನ ಕಚೇರಿಯಲ್ಲಿ ಹೆಚ್ಚಿನ ಕೆಲಸದ ಹೊರೆ ಹೊಂದಿ ರುತ್ತೀರಿ. ವ್ಯಾಪಾರಸ್ಥರು ಈ ದಿನ ಆರ್ಥಿಕ ಲಾಭವನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಿಗ್ಗೆ 10 ರಿಂದ ಮಧ್ಯಾನ 1:15ರವರೆಗೆ.
ವೃಷಭ ರಾಶಿ:- ಉದ್ಯೋಗಿಗಳಿಗೆ ಇಂದು ಬಹಳ ಮುಖ್ಯವಾದ ದಿನವಾಗಿರಲಿದೆ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಮನೆಯ ಸದಸ್ಯರೊಂದಿಗೆ ಸಂಬಂಧವೂ ಸಾಮರಸ್ಯದಿಂದ ಕೂಡಿರುತ್ತದೆ. ಪ್ರೇಮಿಗಳಿಗೆ ಮನೆಯವರ ಸಮ್ಮತಿ ಸಿಗುವುದು. ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15ರವರೆಗೆ
ಮಿಥುನ ರಾಶಿ:- ಇಂದು ಬಹಳ ಮನರಂಜನೆಯ ದಿನವಾಗಿರಲಿದೆ. ಈ ದಿನ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಉತ್ತಮ ಸಮಯವ ನ್ನು ಕಳೆಯುತ್ತೀರಿ. ಇದರಿಂದ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ. ವ್ಯಾಪಾರಸ್ಥರಿಗೆ ದೊಡ್ಡ ವ್ಯವಹಾರ ಮಾಡಲು ಅವಕಾಶ ಸಿಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 5:30 ರಿಂದ ರಾತ್ರಿ 8:45 ರವರೆಗೆ.
ಕಟಕ ರಾಶಿ:- ನಕಾರಾತ್ಮಕ ಗ್ರಹಗಳ ಪ್ರಭಾವದಿಂದ ನಿಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಗಳು ಇರಬಹುದು. ಈ ದಿನ ಜನರೊಂದಿಗೆ ವಿವಾದವನ್ನು ಸಹ ಮಾಡಬಹುದು. ಅನಗತ್ಯ ಖರ್ಚುಗಳನ್ನು ತಪ್ಪಿಸಿ. ವ್ಯಾಪಾರಸ್ಥರು ಹಣಕಾಸಿನ ಅಡಚಣೆಯನ್ನು ಎದುರಿಸಬೇಕಾಗುತ್ತದೆ.
ವಯಕ್ತಿಕ ಸಮಸ್ಯೆಗಳನ್ನು ಸ್ನೇಹಿತರೊಂದಿಗೆ ಹೇಳಿಕೊಂಡರೆ ಅದಕ್ಕೆ ಪರಿಹಾರ ಸಿಗಲಿದೆ. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಬೆಳಿಗ್ಗೆ 6:15 ರಿಂದ 9:30ವರೆಗೆ.
ಸಿಂಹ ರಾಶಿ:- ಕೆಲಸದ ಸ್ಥಳಗಳಲ್ಲಿ ನೀವು ಉತ್ತಮ ಫಲಿತಾಂಶವನ್ನು ಪಡೆಯಬಹುದು. ಕಚೇರಿಯಲ್ಲಿನ ಮೇಲಾಧಿಕಾರಿಗಳು ನಿಮ್ಮ ಕಾರ್ಯ ಕ್ಷಮತೆಯನ್ನು ಮೆಚ್ಚಿಕೊಳ್ಳುತ್ತಾರೆ. ಹಣದ ಪರಿಸ್ಥಿತಿ ಉತ್ತಮವಾಗಿರು ತ್ತದೆ. ಆರೋಗ್ಯದ ದೃಷ್ಟಿಯಿಂದ ಈ ದಿನ ಸಾಮಾನ್ಯವಾಗಿರುತ್ತದೆ. ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಮಧ್ಯಾಹ್ನ 12:30 ರಿಂದ 3:45 ರವರೆಗೆ.
ಕನ್ಯಾ ರಾಶಿ:- ಆರೋಗ್ಯದ ಬಗ್ಗೆ ಇಂದು ಗಂಭೀರವಾಗಿರಬೇಕು. ನಿಮ್ಮ ಪ್ರೀತಿ ಪಾತ್ರರೊಂದಿಗೆ ನಿಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಿ. ನಿಮ್ಮ ಕೆಲಸದ ಸ್ಥಳಗಳಲ್ಲಿ ಹೆಚ್ಚು ಶ್ರಮವಹಿಸಬೇಕಾಗುತ್ತದೆ. ಪೋಷಕ ರೊಂದಿಗಿನ ಸಂಬಂಧವು ಬಲವಾಗಿರುತ್ತದೆ. ನಿಮ್ಮ ಭಾವನೆಯನ್ನು ಸಂಗಾತಿಗೆ ಅರ್ಥ ಮಾಡಿಸಲಿದ್ದೀರಿ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕಿತ್ತಳೆ ಬಣ್ಣ ಸಮಯ – ಬೆಳಗ್ಗೆ 11:15 ರಿಂದ ಮಧ್ಯಾನ 2:30 ರವರೆಗೆ
ತುಲಾ ರಾಶಿ:- ಇಂದು ನೀವು ಜಾಗರೂಕತೆಯಿಂದ ಇರಬೇಕು. ಕಚೇರಿಯಲ್ಲಿ ನಿಮ್ಮ ಎಲ್ಲಾ ಕೆಲಸವು ಸಮಯಕ್ಕೆ ಪೂರ್ಣಗೊಳ್ಳಲಿದ್ದು ಅದು ನಿಮಗೆ ಹೆಚ್ಚಿನ ಸಮಾಧಾನ ನೀಡುತ್ತದೆ. ಕುಟುಂಬದಲ್ಲಿನ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತದೆ. ಸಂಗಾತಿಯು ತುಂಬಾ ರೋಮಾಂಚಕ ಮನಸ್ಥಿತಿಯಲ್ಲಿ ಇರುತ್ತಾರೆ. ಆರೋಗ್ಯಕ್ಕೆ ಸಂಬಂಧಿಸಿ ದಂತೆ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 5 ರವರೆಗೆ
ವೃಶ್ಚಿಕ ರಾಶಿ:- ಉದ್ಯೋಗಸ್ಥರಿಗೆ ಕಾರ್ಯನಿರತ ದಿನವಾಗಿರಲಿದೆ. ಕಚೇರಿಯಲ್ಲಿ ಏಕಕಾಲದಲ್ಲಿ ಅನೇಕ ಕೆಲಸದ ಜವಾಬ್ದಾರಿಯನ್ನು ಹೊಂದಬಹುದು. ಆಹಾರಕ್ಕೆ ಸಂಬಂಧಿಸಿದ ವ್ಯಾಪಾರ ಮಾಡುವವರು ಈ ದಿನ ಆರ್ಥಿಕ ಲಾಭವನ್ನು ಪಡೆಯಬಹುದು. ನಿಮ್ಮ ಕೋಪವನ್ನು ನಿಯಂತ್ರಿಸುವುದು ತುಂಬಾ ಒಳ್ಳೆಯದು. ಸ್ನೇಹಿತರೊಂದಿಗೆ ಸಂತೋಷದ ಕ್ಷಣವನ್ನು ಕಳೆಯುತ್ತೀರಿ. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಸಂಜೆ 4:15 ರಿಂದ 7.30 ರವರೆಗೆ.
ಧನಸ್ಸು ರಾಶಿ:- ಈ ದಿನ ಸಮತೋಲಿತವಾಗಿ ವರ್ತಿಸಬೇಕಾಗುತ್ತದೆ. ಇಲ್ಲದಿದ್ದರೆ ಇತರರ ಮುಂದೆ ನೀವು ನಾಚಿಕೆಯನ್ನು ಪಡಬೇಕಾಗುತ್ತದೆ. ಹಣಕಾಸಿನ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳ ಬೇಕಾಗುತ್ತದೆ. ಕಚೇರಿಯ ವಾತಾವರಣವು ಉತ್ತಮವಾಗಿರುತ್ತದೆ. ವೃತ್ತಿ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತದೆ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 6:45 ರಿಂದ ರಾತ್ರಿ 10 ಗಂಟೆಯವರೆಗೆ.
ಮಕರ ರಾಶಿ:- ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಾಣಬಹುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರುತ್ತದೆ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಬೆಳಿಗ್ಗೆ 7:30 ರಿಂದ 10:45 ರವರೆಗೆ.
ಕುಂಭ ರಾಶಿ:- ವ್ಯಾಪಾರಸ್ಥರಿಗೆ ಎಂದು ಹೆಚ್ಚು ಕೆಲಸ ಇರುತ್ತದೆ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಕೆಲಸಗಳು ಅಪೂರ್ಣಗೊಳ್ಳುತ್ತದೆ ಇದರಿಂದ ಹೆಚ್ಚು ಒತ್ತಡವನ್ನು ಅನುಭವಿಸಬೇಕಾಗುತ್ತದೆ. ಕುಟುಂಬ ಜೀವನವು ಏರಿಳಿತದಿಂದ ಕೂಡಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಸಾಮರಸ್ಯದಿಂದ ಕೂಡಿರುತ್ತದೆ. ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 8:45 ರಿಂದ 12 ಗಂಟೆವರೆಗೆ.
ಮೀನ ರಾಶಿ:- ಇದ್ದಕ್ಕಿದ್ದಂತೆ ಕೆಲವು ಕಷ್ಟದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ವಿವಾಹಿತ ದಂಪತಿಯು ಸಂಗಾತಿಯೊಂದಿಗೆ ಸಲಹೆಯನ್ನು ಪಡೆಯುವುದು ಉತ್ತಮ. ಈ ದಿನ ಮಿಶ್ರಫಲದ ದಿನವಾಗಿರಲಿದೆ. ಮನೆಯ ಜವಾಬ್ದಾರಿಗಳನ್ನು ಪೂರ್ಣಗೊಳಿಸಲು ಹೆಚ್ಚು ಖರ್ಚು ಮಾಡಬಹುದು. ವ್ಯವಹಾರದಲ್ಲಿ ಲಾಭಗಳನ್ನು ಪಡೆಯುತ್ತೀರಿ. ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 2:45 ರವರೆಗೆ.