ಈ ಸ್ವಿಗಿ, ಜೊಮ್ಯಾಟೋಗಳ ಹಿಂದಿನ ಕರಾಳ ಸತ್ಯ ಗೊತ್ತಾ…..??
ಭಾರತದಲ್ಲಿ ಪಾಪ್ಯುಲರ್ ಆದ ಜೊಮ್ಯಾಟೋ ಸಂಸ್ಥೆಯು 2008ರಲ್ಲಿ ದೀಪೇಂದ್ರ ಗೋಯಲ್ ಎನ್ನುವವರಿಂದ ಈ ಸಂಸ್ಥೆ ಪ್ರಾರಂಭ ವಾಯಿತು. ಇವರು ಆಗ ದೆಹಲಿಯ IIT ಯಲ್ಲಿ ಓದುತ್ತಿದ್ದರು. ಅಲ್ಲೆಲ್ಲೋ ಪಿಜಿಯಲ್ಲಿ ಇದ್ದುಕೊಂಡಂತಹ ಇವರು ದೈನಂದಿನ ಊಟವನ್ನು ಕೆಲವೊಂದು ರೆಸ್ಟೋರೆಂಟ್ ಗಳಿಗೆ ಆರ್ಡರ್ ಕೊಟ್ಟು ತರಿಸಿಕೊಳ್ಳಬೇಕಾಗಿತ್ತು.
ಆಗ ಆನ್ಲೈನ್ ಅಷ್ಟು ವ್ಯಾಪಕವಾಗಿ ಇರದ ಕಾರಣ ರೆಸ್ಟೋರೆಂಟ್ ಗಳಲ್ಲಿ ಎಲ್ಲೋ ಕೆಲವೊಂದು ಮಾತ್ರವೇ ಹೋಂ ಡೆಲಿವರಿಯ ಆಪ್ಷನ್ ಇರಿಸಿಕೊಂಡಿದ್ದವು. ಮಿಕ್ಕ ಕೆಲವೊಂದು ರೆಸ್ಟೋರೆಂಟ್ ಗಳಿಗೆ ಹೋಗಿ ನಾವು ಅಲ್ಲಿ ಪಾರ್ಸಲ್ ತರುವ ಅಥವಾ ನಾವೇ ಅಲ್ಲಿ ಆಹಾರ ಸೇವಿಸಿ ಬರುವ ಅವಕಾಶ ಇತ್ತು. ತಮಗೆ ಇಷ್ಟವಾಗುವ ರೆಸ್ಟೋರೆಂಟ್ ಗಳಲ್ಲಿ ತಮಗೆ ಇಷ್ಟವಾದ ಆಹಾರಗಳನ್ನು ಆರ್ಡರ್ ಮಾಡುವುದೇ ದುಸ್ತರವಾಗಿದ್ದವು.
ಇದು ಕೇವಲ ದೀಪೇಂದ್ರ ಅವರ ಒಬ್ಬರ ಸಮಸ್ಯೆಯಾಗಿರಲಿಲ್ಲ. ಅವರ ಹಾಗೆ ಓದುತ್ತಿದ್ದ ಹಾಗೂ ಕೆಲಸ ಮಾಡುತ್ತಿದ್ದ ಅನೇಕರ ಸಮಸ್ಯೆಯಾ ಗಿತ್ತು. ಇದನ್ನು ಗಮನಿಸಿದಂತಹ ದೀಪೇಂದ್ರ ಜನ ಕುಳಿತಲ್ಲಿಯೇ ತಮಗೆ ಇಷ್ಟವಾದ ರೆಸ್ಟೋರೆಂಟ್ ನಿಂದ ತಮಗೆ ಇಷ್ಟವಾದ ಆಹಾರವನ್ನು ಬುಕ್ ಮಾಡಿ ಸೇವಿಸಲು ಅನುಕೂಲವಾಗುವಂತೆ ಒಂದು ಆನ್ಲೈನ್ ವೆಬ್ಸೈಟ್ ಶುರು ಮಾಡಿದರೆ ಹೇಗೆಂದು ಯೋಚಿಸಿದ್ದರು. ಅದರಂತೆ ಅವರು ಆರಂಭದಲ್ಲಿ
ಫುಡಿಬೇ ಎಂಬ ಹೆಸರಿನ ಆನ್ಲೈನ್ ವೆಬ್ಸೈಟ್ ಅನ್ನು ಶುರು ಮಾಡಿದರು. ಇದೇ ಮುಂದೆ 2010ರಲ್ಲಿ ಜೊಮ್ಯಾಟೋ ಎಂಬ ಹೆಸರನ್ನು ಪಡೆಯಿತು. ಆಗೆಲ್ಲ ಹೆಚ್ಚಾಗಿ ಈಗಿನಂತೆ ಯಾರು ನೆಟ್ ಬಳಸದೆ ಇದ್ದ ಕಾರಣ ಹೆಚ್ಚು ಆರ್ಡರ್ ಗಳೇ ಬರುತ್ತಿರಲಿಲ್ಲ. ಆಗ ನೆಟ್ ಡಾಟಾ ಸಹ ಈಗಿನಷ್ಟು ಅಗ್ಗವಾಗಿ ಇರಲಿಲ್ಲ. ಮುಂದೆ ಜಿಯೋದ ಪರಿಚಯವಾಗಿ ಎಲ್ಲರಿಗೂ ಉಚಿತವಾಗಿ ನೆಟ್ ಅಗ್ಗವಾಗಿ ದೊರೆತದ್ದರಿಂದ.
ಅನೇಕರು ಮೊಬೈಲ್ ಗಳಲ್ಲಿ ಆಪ್ ಗಳನ್ನು ಬಳಸುವುದರತ್ತ ಆಸಕ್ತಿ ಯನ್ನು ತೋರಿದರು. ಇದು ಜೊಮ್ಯಾಟೋ ಸಂಸ್ಥೆಗೆ ಭಾರತದ ವಲಯ ದಲ್ಲಿ ಉತ್ತಮ ಸ್ಟಾರ್ಟ್ ನೀಡಿತು. ಅದಕ್ಕಿದ್ದ ಇನ್ನೊಂದು ಬೆನಿಫಿಟ್ ಎಂದರೆ ಆ ಸಮಯದಲ್ಲಿ ಭಾರತದಲ್ಲಿ ಇದಕ್ಕೆ ಪರ್ಯಾಯವಾಗಿ ಇನ್ನೊಬ್ಬ ಕಾಂಪಿಟೇಟರ್ ಇರಲೇ ಇಲ್ಲ. ಇದು ಸಹ ಅವರು ಇಲ್ಲಿ ಏಳಿಗೆಯನ್ನು ಪಡೆಯುವುದಕ್ಕೆ ಕಾರಣವಾಯಿತು.
ಆದರೆ ಇದು ಸಹ ಹೆಚ್ಚು ಸಮಯ ನಡೆಯಲಿಲ್ಲ. ಇದಕ್ಕೆ ಕಾರಣ 2014ರಲ್ಲಿ ಸ್ವಿಗ್ಗಿ ಸಂಸ್ಥೆಯು ಅದಾಗಲೇ ಭಾರತಕ್ಕೆ ಕಾಲಿಟ್ಟಿತು. ಆರಂಭದಲ್ಲಿ ಭಾರತಕ್ಕೆ ಸ್ವಿಗ್ಗಿಗೆ ಕೇವಲ 25 ರೆಸ್ಟೋರೆಂಟ್ ಗಳು ಮಾತ್ರ ಲಿಸ್ಟ್ ಆಗಿದ್ದವು. ಆದರೆ 2019ರ ವೇಳೆಗೆ ಅವುಗಳ ಸಂಖ್ಯೆ ಸುಮಾರು 40 ಸಾವಿರ ದಾಟಿತು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.