2023 ಗುರು ಬದಲಾವಣೆ ಯಾವ ರಾಶಿಗೆ ಗುರುಬಲ/ರಾಜಯೋಗ…!
ಏಪ್ರಿಲ್ 22ನೇ ತಾರೀಖು ಶನಿವಾರ ಬೆಳಗ್ಗೆ 9:45ಕ್ಕೆ ಗುರು ಬದಲಾವಣೆ ಯಾಗುವಂಥದ್ದು ಮೀನ ರಾಶಿಯಿಂದ ಮೇಷ ರಾಶಿಗೆ. ಹಾಗಾದರೆ ಈ ಒಂದು ಗುರು ಬದಲಾವಣೆಯಿಂದ ಯಾವ ರೀತಿಯಾದಂತಹ ಫಲಗಳು ಸಿಗುತ್ತದೆ ಎಂದು ನೋಡುವುದಾದರೆ. ಗುರು ಮೇಷ ರಾಶಿಗೆ ಬಂದಾಗ ಎಲ್ಲ ಇದ್ದು ಏನು ಇಲ್ಲ ಎನ್ನುವ ಪರಿಸ್ಥಿತಿ ಉಂಟಾಗುತ್ತದೆ.
ಹಾಗಾದರೆ ಗುರು ಬದಲಾವಣೆಯಿಂದ ಮೇಷ ರಾಶಿಯವರಿಗೆ ಯಾವ ರೀತಿಯ ಬದಲಾವಣೆಗಳು ಉಂಟಾಗುತ್ತದೆ ಎಂದು ನೋಡುವುದಾದರೆ ಜನ್ಮ ಗುರು ಜನ್ಮ ರಾಶಿಗೆ ಬಂದಾಗ ಅವರಿಗೆ ತುಂಬಾ ರೀತಿಯ ಸಮಸ್ಯೆ ಗಳು ಉಂಟಾಗುವಂತದ್ದು. ನೀವು ಯಾವುದೇ ರೀತಿಯ ಕೆಲಸವನ್ನು ಮಾಡಬೇಕು ಎಂದು ಹೋದರು ಅವೆಲ್ಲವೂ ನೆರವೇರದೆ ಇರುವಂತದ್ದು. ಒಂದು ತಿಂಗಳ ಕಾಲ ನೀವು ಯಾವುದೇ ರೀತಿ ಹಣಕಾಸಿನ ವ್ಯವಹಾರವನ್ನು ಮಾಡದೇ ಇರುವುದು ಉತ್ತಮ.
ಹಾಗಾದರೆ ಇದಕ್ಕೆ ಪರಿಹಾರಾರ್ಥವಾಗಿ ಏನನ್ನು ಮಾಡುವುದು ಎಂದು ನೋಡುವುದಾದರೆ ಯಾವುದಾದರೂ ಹರಿಯುತ್ತಿರುವಂತಹ ನದಿಯ ಬಳಿ ಹೋಗಿ ತೆಂಗಿನಕಾಯಿಯನ್ನು ಬಿಡಬೇಕು ಈ ರೀತಿ ಮಾಡುವುದ ರಿಂದ ನಿಮಗೆ ಕಾಣಿಸಿಕೊಳ್ಳುವಂತಹ ಸಮಸ್ಯೆಗಳು ದೂರವಾಗುತ್ತದೆ. ಎರಡನೆಯ ರಾಶಿ ವೃಷಭ ರಾಶಿ 12ನೇ ಮನೆಯಲ್ಲಿ ಗುರು ಕುಳಿತು ಕೊಂಡಿರುವುದರಿಂದ ಹಣಕಾಸಿನಲ್ಲಿ ಸ್ವಲ್ಪ ಮಟ್ಟಿಗೆ ತೊಂದರೆಗಳು ಕಾಣಿಸಿಕೊಳ್ಳುವಂಥದ್ದು ಸರಿಯಾಗಿ ನಿದ್ರೆ ಬರದೇ ಇರುವುದು.
ಇವರು ಪರಿಹಾರಾರ್ಥಕವಾಗಿ ಶಿವನ ದೇವಸ್ಥಾನಕ್ಕೆ ಹೋಗಿ 300 ಗ್ರಾಂ ಕಡಲೆ ಬೆಳೆಯನ್ನು ಕೊಟ್ಟು ಬರುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಮಿಥುನ ರಾಶಿ, ನಿಮ್ಮ ಜೀವನದಲ್ಲಿ ನೋಡದೆ ಇರುವಂತಹ ಯಶಸ್ಸು ನಿಮಗೆ ಈ ಒಂದು ತಿಂಗಳಲ್ಲಿ ಬರುವಂತದ್ದು, ಜೊತೆಗೆ ನಿಮ್ಮ ಉದ್ಯೋಗದಲ್ಲಿ ಬಡ್ತಿ ಹೆಚ್ಚಾಗುವಂತದ್ದು. ಮನೆಯಲ್ಲಿ ಶುಭ ಸಮಾರಂಭಗಳು ನೆರವೇರುವುದು,
ಮನೆಗೆ ಬಂಧು ಮಿತ್ರರ ಆಗಮನ. ಅದರಲ್ಲೂ ನೀವು ಈ ಸಮಯದಲ್ಲಿ ಯಾವುದೇ ರೀತಿಯ ಕೆಟ್ಟ ಮಾತುಗಳು ಕೆಟ್ಟ ನಡವಳಿಕೆಯನ್ನು ನಡೆದು ಕೊಳ್ಳುವುದನ್ನು ತಪ್ಪಿಸಿ. ಜೊತೆಗೆ ಇವರು ಒಂದು ತಾಮ್ರದ ಚೊಂಬಿಗೆ ಹೆಸರುಕಾಳನ್ನು ತುಂಬಿ ಅದರ ಮೇಲೆ ತಾಮ್ರದ ತಟ್ಟೆಯನ್ನು ಮುಚ್ಚಿ ಶಿವನ ದೇವಸ್ಥಾನಕ್ಕೆ ಕೊಡುವುದರಿಂದ ಇನ್ನು ಹೆಚ್ಚಿನ ರಾಜಯೋಗ ವನ್ನು ಪಡೆದುಕೊಳ್ಳಬಹುದು. ಇದನ್ನು ಯಾವುದಾದರೂ ಬುಧವಾರ ಅಥವಾ ಶನಿವಾರದಂದು ಮಾಡುವುದು ಶ್ರೇಷ್ಠ.
ಕರ್ಕಾಟಕ ರಾಶಿ, ಕರ್ಕಾಟಕ ರಾಶಿಯವರಿಗೆ ಈ ಒಂದು ವರ್ಷ ಅಷ್ಟಾಗಿ ಚೆನ್ನಾಗಿರುವುದಿಲ್ಲ ಯಾವುದೇ ದೊಡ್ಡ ವ್ಯಾಪಾರ ವ್ಯವಹಾರ ಮಾಡ ಬೇಕು ಎಂದಿದ್ದರೆ ಅದನ್ನು ಮುಂದಿನ ವರ್ಷಕ್ಕೆ ಮುಂದೂಡುವುದು ಉತ್ತಮ. ಹಾಗೂ ಹಿರಿಯರಿಗೆ ಹೆಚ್ಚು ಗೌರವ ಕೊಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಹೆಚ್ಚು ಕೋಪಗಳು ಬರುತ್ತದೆ ಆದ್ದರಿಂದ ನಿಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಂಡಿರುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.