ಇಷ್ಟು ದಿನ ಪಟ್ಟ ಪ್ರತಿ ಸಂಕಷ್ಟಗಳು ದೂರವಾಗಿ ಈ 4 ರಾಶಿಗೆ ಅನೇಕ ಮೂಲಗಳಿಂದ ಧನಾಗಮನ ಸಾಯಿಬಾಬಾರ ಕೃಪೆಯಿಂದ ದಿನಫಲ ನೋಡಿ..

ಮೇಷ ರಾಶಿ:- ಉದ್ಯೋಗಿಗಳು ಇಂದು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸಲು ಈ ದಿನ ಸಾಧ್ಯವಾಗುತ್ತದೆ. ಕೆಲಸ ಮಾಡುವ ಜನರಿಗೆ ಈ ದಿನ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗ ಳೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಿಗ್ಗೆ 6:00ಯಿಂದ 12 ಗಂಟೆಯವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ:- ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಸುಧಾರಣೆ ಕಂಡುಬರುತ್ತದೆ. ಇಂದು ನೀವು ದೊಡ್ಡ ಆರ್ಥಿಕ ಲಾಭವನ್ನು ಸಹ ಗಳಿಸಬಹುದು. ಈ ಹಿಂದೆ ತೆಗೆದುಕೊಂಡ ನಿರ್ಧಾರಗಳು ಈ ದಿನ ಪ್ರಯೋಜನವಾಗುತ್ತದೆ. ಇಂದು ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳುತ್ತದೆ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಸಂಜೆ 5:30 ರಿಂದ ರಾತ್ರಿ 7:00ವರೆಗೆ.

ಮಿಥುನ ರಾಶಿ:- ನಿಮ್ಮ ಮನಸ್ಥಿತಿಯಲ್ಲಿ ಈ ದಿನ ಬದಲಾವಣೆಯನ್ನು ಕಾಣಬಹುದು. ಇಂದು ನೀವು ಹೆಚ್ಚು ಕೋಪಗೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ. ಕೋಪವು ನಿಮ್ಮ ಕೆಲಸವನ್ನು ಹಾಳುಮಾಡುತ್ತದೆ. ಅನಗತ್ಯ ವಿಷಯಗಳಲ್ಲಿ ನಿಮ್ಮ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಬೇಕಾಗುತ್ತದೆ. ಹಣವನ್ನು ಸಂಪಾದನೆ ಮಾಡಲು ಈ ದಿನ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುತ್ತೀರಿ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಕಟಕ ರಾಶಿ:- ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳ ಬೇಕಾಗುತ್ತದೆ. ಇಲ್ಲದಿದ್ದರೆ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದು ಕೊಳ್ಳುವ ಸಾಧ್ಯತೆ ಇರುತ್ತದೆ. ಈ ದಿನ ನಿಮ್ಮ ದಾಂಪತ್ಯ ಜೀವನವು ಸಂತೋಷದಿಂದ ಕೂಡಿರುತ್ತದೆ. ವ್ಯಾಪಾರಿಗಳಿಗೆ ಆರ್ಥಿಕ ಸ್ಥಿತಿ ಸುಧಾರಿಸಬಹುದು.ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಿಗ್ಗೆ 10:30 ರಿಂದ 11 ಗಂಟೆಯವರೆಗೆ

ಸಿಂಹ ರಾಶಿ:- ಪ್ರೀತಿಯ ವಿಷಯದಲ್ಲಿ ಇಂದು ಬಹಳ ವಿಶೇಷವಾದ ದಿನವಾಗಿರುತ್ತದೆ. ಬಹಳ ಸಮಯದ ನಂತರ ಸಂಗಾತಿಯೊಂದಿಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿರುವವರು ಈ ದಿನ ಉತ್ತಮವಾದ ಲಾಭ ಪಡೆಯಬಹುದು. ಇಂದು ನೀವು ಕೆಲವು ಪ್ರಭಾವಿ ಜನರನ್ನು ಭೇಟಿಯಾಗುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 7:00 ವರೆಗೆ.

ಕನ್ಯಾ ರಾಶಿ:- ಈ ದಿನ ಕೆಲವು ಕೌಟುಂಬಿಕ ವಿಷಯಗಳ ಬಗ್ಗೆ ಚಿಂತೆ ಮಾಡುತ್ತೀರಿ. ನಿಮ್ಮ ಜೀವನ ಸಂಗಾತಿಯ ತಿಳುವಳಿಕೆಯಿಂದ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ನೀವು ಯಾವುದೇ ಕೆಲಸವನ್ನು ಅಪೂರ್ಣವಾಗಿ ಬಿಡಬೇಡಿ. ಈ ದಿನ ದೊಡ್ಡ ಹಾಗೂ ಬಹು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 5:30 ರಿಂದ ರಾತ್ರಿ 9 ಗಂಟೆಯವರೆಗೆ.

ತುಲಾ ರಾಶಿ:- ಕೆಲಸದಲ್ಲಿ ಇಂದು ಕೆಲವು ಸವಾಲುಗಳು ಎದುರಾಗ ಬಹುದು. ನಿಮ್ಮ ಸಮಸ್ಯೆಗಳು ತಾತ್ಕಾಲಿಕವಾಗಿ ಇರುತ್ತದೆ ಹಾಗಾಗಿ ನೀವು ಚಿಂತೆ ಮಾಡುವ ಅಗತ್ಯ ಇರುವುದಿಲ್ಲ. ನೀವು ಸಕಾರಾತ್ಮಕವಾಗಿ ಇರಲು ಪ್ರಯತ್ನಿಸಿ, ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಬೆಂಬಲ ಪಡೆಯಲು ಪ್ರಯತ್ನ ಮಾಡಿ. ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಿಗ್ಗೆ 6:00ಯಿಂದ 9 ಗಂಟೆಯವರೆಗೆ.

ವೃಶ್ಚಿಕ ರಾಶಿ:- ನೀವೇನಾದರೂ ವ್ಯಾಪಾರ ಮಾಡುತ್ತಿದ್ದರೆ ನಿಮಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ. ಇಂದು ನೀವು ದೊಡ್ಡ ವ್ಯವಹಾರವನ್ನು ಮಾಡಲು ಅವಕಾಶ ಪಡೆಯಬಹುದು. ಸಣ್ಣ ವ್ಯಾಪಾರಿಗಳು ಕೂಡ ಈ ದಿನ ನಿರೀಕ್ಷೆಗೆ ತಕ್ಕಂತೆ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ನಿರ್ಲಕ್ಷತೆಯನ್ನು ವಹಿಸಬೇಡಿ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ

ಧನಸ್ಸು ರಾಶಿ:- ಇಂದು ನಿಮಗೆ ಹೆಚ್ಚು ಕೆಲಸದ ಹೊರೆ ಇರುತ್ತದೆ. ವ್ಯಾಪಾರಸ್ಥರು ಉತ್ತಮ ಲಾಭ ಗಳಿಸುವಂತೆ ಎಲ್ಲಾ ಅವಕಾಶಗಳನ್ನು ಪಡೆದುಕೊಳ್ಳುವಿರಿ. ನಿಮ್ಮ ತಂದೆಯಿಂದ ಆರ್ಥಿಕ ಸಹಾಯವನ್ನು ಪಡೆಯಬಹುದು. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ಪಡೆದು ಕೊಳ್ಳಲು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಿಗ್ಗೆ 7:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಮಕರ ರಾಶಿ:- ನೀವು ಮಾಡುವ ಕೆಲಸವನ್ನು ಆತುರದಿಂದ ಮಾಡಬೇಡಿ ಬದಲಿಗೆ ಯೋಚನೆ ಮಾಡಿ ಮಾಡುವುದು ಉತ್ತಮ. ಇಲ್ಲದಿದ್ದರೆ ದೊಡ್ಡ ನಷ್ಟವನ್ನು ಅನುಭವಿಸಬಹುದು. ಉದ್ಯೋಗಿಗಳಿಗೆ ಈ ದಿನ ಒತ್ತಡ ವನ್ನು ಉಂಟು ಮಾಡುವ ಸಾಧ್ಯತೆ ಇದೆ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಂಬಂಧ ಉಳಿಸಿಕೊಳ್ಳಲು ಪ್ರಯತ್ನಿಸಿ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 5:00ಯಿಂದ ರಾತ್ರಿ 8.30 ರವರೆಗೆ.

ಕುಂಭ ರಾಶಿ:- ನಿಮ್ಮ ವೃತ್ತಿಪರ ಜೀವನದಲ್ಲಿ ದೊಡ್ಡ ಸುಧಾರಣೆ ಯಾಗುವ ಸಾಧ್ಯತೆ ಇದೆ. ನಿಮ್ಮ ಕಠಿಣ ಪರಿಶ್ರಮದ ಫಲಿತಾಂಶ ಪಡೆಯುತ್ತೀರಿ. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ದಿನ ಉತ್ತಮ ದಿನವಾಗಿರುತ್ತದೆ. ವ್ಯಾಪಾರಸ್ಥರು ಈ ದಿನ ಪ್ರಯಾಣಿಸುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 5:00ಯಿಂದ ರಾತ್ರಿ 9:30ವರೆಗೆ.

ಮೀನ ರಾಶಿ:- ವ್ಯವಹಾರಕ್ಕೆ ಸಂಬಂಧಿಸಿದ ಜನರು ಈ ದಿನ ಉತ್ತಮ ವಾದ ಫಲಿತಾಂಶವನ್ನು ಪಡೆಯುತ್ತಾರೆ. ನೀವು ಶೀಘ್ರದಲ್ಲಿ ಆರ್ಥಿಕ ಲಾಭಗಳಿಸುವ ಬಲವಾದ ಸಾಧ್ಯತೆ ಇದೆ. ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಈ ದಿನ ಒಳ್ಳೆಯ ಸುದ್ದಿ ನಿರೀಕ್ಷಿಸಬಹುದು. ನಿಮ್ಮ ಸಂಗಾತಿಯೊಂದಿಗೆ ಅಸಭ್ಯವಾಗಿ ವರ್ತಿಸುವುದನ್ನು ತಪ್ಪಿಸಿ. ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 7:00ವರೆಗೆ.

[irp]