ಮನೆಗೆ ಹಾವು ಬಂದರೆ ಅದರ ಫಲ ಏನು..ನೀವು ಅರಿಯದ ದೊಡ್ಡ ಸತ್ಯ ಇದು ನೋಡಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಮನೆಗೆ ಹಾವು ಬಂದರೆ ಏನು ಫಲ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ…

ಭಾರತೀಯರು ಹಾವುಗಳಿಗೆ ದೇವರ ಸ್ಥಾನ ಕೊಟ್ಟಿದ್ದಾರೆ. ಹಾವುಗಳನ್ನು ಸಾಕ್ಷಾತ್ ಸುಬ್ರಹ್ಮಣ್ಯ ಎಂದೇ ನಂಬಲಾಗುತ್ತದೆ. ದೇವರು ಹಾವುಗಳಿಗಾಗಿಯೇ ನಾಗಲೋಕ ಎನ್ನುವ ಪ್ರತ್ಯೇಕ ಲೋಕವನ್ನು ಸೃಷ್ಟಿಸಿದ್ದಾರೆ ಎನ್ನುವುದನ್ನು ಪುರಾಣಗಳಲ್ಲಿ ಕೇಳಿಕೊಂಡು ನಂಬಿಕೊಂಡು ಬಂದಿದ್ದೇವೆ. ಮತ್ತು ಈ ಭೂಮಿ ಮೇಲೆ ಮನುಷ್ಯರಿಗೆ ಹೇಗೆ ವಾಸಿಸುವ ಹಕ್ಕು ಇದೆಯೋ ಹಾಗೆ ಎಲ್ಲಾ ಪ್ರಾಣಿ ಪಕ್ಷಿಗಳಿಗೂ ಕೂಡ ಬದುಕಲು ಹಕ್ಕು ಇದೆ.

ಅದರಲ್ಲೂ ಸರ್ಪಗಳಿಗೆ ಎಂದರೆ ಹಾವುಗಳಿಗೆ ತೊಂದರೆ ಕೊಟ್ಟರೆ ಒಳ್ಳೆಯದಾಗುವುದಿಲ್ಲ. ನೀವು ಸರ್ಪ ದೋಷ ಎನ್ನುವುದರ ಬಗ್ಗೆ ಕೇಳಿರಬಹುದು. ಕೆಲವರು ಈ ರೀತಿ ಹೇಳುವುದನ್ನು ಕೇಳಿರಬಹುದು ನಾನು ಯಾವುದೇ ಹಾವನ್ನು ಹೊಡೆದಿಲ್ಲ, ಕೊಂದಿಲ್ಲ, ತೊಂದರೆ ಕೊಟ್ಟಿಲ್ಲ ಆದರೂ ನನ್ನ ಜಾತಕದಲ್ಲಿ ಸರ್ಪದೋಷ ಬಂದಿದೆಯಲ್ಲ ಯಾಕೆ ಎಂದು. ಇದಕ್ಕೆ ಜ್ಯೋತಿಷ್ಯರಿಂದ ಸಿಗುವ ಉತ್ತರ ಬಗ್ಗೆಯೂ ಕೂಡ ಎಲ್ಲರಿಗೂ ಗೊತ್ತಿದೆ.


ಈ ಜನ್ಮದಲ್ಲಿ ಅಥವಾ ಕಳೆದ ಜನ್ಮದಲ್ಲಿ ಮಾಡಿದ ಕೃತ್ಯದ ಫಲ ಈ ಕಷ್ಟ ಅನುಭವಿಸಬೇಕಾಗುತ್ತದೆ. ಅಲ್ಲದೆ ನಿಮ್ಮ ಕುಟುಂಬದಲ್ಲಿ ಬೇರೆ ಯಾರಾದರೂ ಸದಸ್ಯರು ನಿಮ್ಮ ತಾತ ಅಥವಾ ನಿಮ್ಮ ತಂದೆ, ನಿಮ್ಮ ಚಿಕ್ಕಪ್ಪ, ದೊಡ್ಡಪ್ಪ, ಅಣ್ಣ ಹೀಗೆ ಯಾರೇ ಈ ರೀತಿ ಕೃತ್ಯ ಮಾಡಿದರು ಅದರ ಪಾಪ ನಿಮಗೂ ಅಂಟಿಕೊಂಡಿರುತ್ತದೆ ಎಂದು ಹೇಳುತ್ತಾರೆ. ಅಷ್ಟಕ್ಕೂ ನಾಗದೋಷ ಎಂದರೆ ಏನು ಗೊತ್ತಾ?

ಸರ್ಪ ವಧಾ ಅಂದರೆ ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೇ ಹಾವನ್ನು ಹೊಡೆದು ಹಾಕಿರುವುದು. ಸರ್ಪಾಂಡ ವಧಾ ಅಂದರೆ ಹಾವಿನ ಮೊಟ್ಟೆಗಳನ್ನು ನಾಶ ಮಾಡುವುದು. ಸರ್ಪ ಖೇಲಿ ದರ್ಶನ ಅಂದರೆ ಸರ್ಪಗಳು ಮಿಲನ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಾಗ ನೀವು ನೋಡಿದ್ದರೆ ಅದು ದೋಷವಾಗುತ್ತದೆ. ಹಾಗೆಯೇ ಸರ್ಪಗಳ ವಾಸಸ್ಥಳಗಳನ್ನು ನಾಶ ಮಾಡುವುದು ಕೂಡ ಮತ್ತು ಸರ್ಪಗಳಿಗೆ ತೊಂದರೆ ಕೊಡುವಂತ ಎಲ್ಲಾ ಕೆಲಸಗಳು ಕೂಡ ದೋಷಗಳೆನಿಸಿಕೊಳ್ಳುತ್ತವೆ.

ಇನ್ನು ಕೆಲವರು ಹೇಳುತ್ತಾರೆ ನಮ್ಮ ಮನೆಗೆ ಪದೇಪದೇ ಹಾವುಗಳು ಬರುತ್ತಿರುತ್ತವೆ, ಎಷ್ಟೋ ಬಾರಿ ಹಿಡಿಸಿ ಬೇರೆ ಕಡೆ ಬಿಟಿಸಿದ್ದೇವೆ ಆದರೂ ಕೂಡ ಇದು ತಪ್ಪಿಲ್ಲ ಎಂದು ಹೇಳುತ್ತಿರುತ್ತಾರೆ. ಇದಕ್ಕೆ ಮುಖ್ಯ ಕಾರಣವಾಗುವ ದೋಷಗಳು ಯಾವುದೆಂದರೆ ನಾಗನೀತಿ ವಿರೋಧನ, ಮಲಿನೀಕರಣ ದೋಷ, ಗೃಹಕೋಷ್ಠ ನಿರ್ಮಾಣ ಎಂದು ಹೇಳುತ್ತಾರೆ. ಅಂದ್ರೆ ಸರ್ಪಗಳು ಓಡಾಡುವ ಹಾದಿಯನ್ನು ಹಾಳು ಮಾಡಿದರೆ ಮಲಿನ ಮಾಡಿದರೆ ಈ ದೋಷ ಅಂಟುತ್ತದೆ.

ಹಲವರು ಈ ರೀತಿ ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಹಾವು ಕಾಣಿಸಿಕೊಂಡರೆ ಹೋಮ ಹವನ ಮಾಡಿ ಪೂಜೆ ಮಾಡಿಸುತ್ತಾರೆ ಆ ದೋಷವನ್ನು ಪರಿಹಾರ ಮಾಡಿ ಕಳೆದುಕೊಳ್ಳುವುದಕ್ಕೆ ಬಯಸುತ್ತಾರೆ. ಕೆಲ ಸೂಚನೆಗಳನ್ನು ಕೂಡ ಕೊಡಲು ಈ ರೀತಿ ಹಾವುಗಳು ನಮ್ಮ ಕಣ್ಣ ಮುಂದೆ ಕಾಣಿಸಿಕೊಳ್ಳುತ್ತವೆ ಎಂದು ಕೂಡ ನಂಬಲಾಗುತ್ತದೆ. ಈ ಎಲ್ಲ ವಿಚಾರಗಳ ಪೂರ್ತಿ ಮಾಹಿತಿಗಾಗಿ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

By admin

Leave a Reply

Your email address will not be published. Required fields are marked *