ಶ್ರೀ ರಾಘವೇಂದ್ರ ಸ್ವಾಮಿಗಳ ಈ ಪವಾಡಗಳನ್ನು ಕೇಳಿದರೆ ಸಾಕು ನಿಮ್ಮ ಸರ್ವ ಪಾಪಗಳು ಕಳೆಯುತ್ತದೆ..

ಶ್ರೀ ರಾಘವೇಂದ್ರ ಸ್ವಾಮಿಗಳ ಈ ಪವಾಡಗಳನ್ನು ಕೇಳಿದರೆ ಸಾಕು, ಎಲ್ಲಾ ಪಾಪವು ಪರಿಹಾರ ಆಗುತ್ತದೆ.

WhatsApp Group Join Now
Telegram Group Join Now

ರಾಯರನ್ನು ಮೆಚ್ಚಿಸಲು ಮಂತ್ರಗಳನ್ನು , ಶ್ಲೋಕಗಳನ್ನು ಪಠಿಸುವ ಅಗತ್ಯ ಇಲ್ಲ. ಹೋಮಹವನಗಳನ್ನು ನಡೆಸುವ ಅವಶ್ಯಕತೆ ಇಲ್ಲ. ಶುದ್ಧ ಮನಸ್ಸಿನಿಂದ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಎಂದು ಭಕ್ತಿಯಿಂದ ಬೇಡಿಕೊಂಡರೆ ಸಾಕು. ಅದೆಂತಹದೇ ಕಷ್ಟ ಬಂದಿದ್ದರೂ ಕೂಡ ಸ್ಪಟಿಕದಂತಹ ಶಕ್ತಿ ತುಂಬುತ್ತದೆ. ಆದ್ರೆ ಸಂಪೂರ್ಣವಾಗಿ ರಾಯರ ಭಕ್ತಿಗೆ ಶರಣಾಗಬೇಕು. ಮನಸ್ಸಿನ ತುಂಬಾ ನಂಬಿಕೆ ತುಂಬಿರಬೇಕು ಅಷ್ಟೇ.

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ, ಭಜತಾ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ನಮಃ ಎಂದರೆ ಸತ್ಯ, ಧರ್ಮದ ಜೀವಂತ ಉದಾಹರಣೆಯಾಗಿರುವ ಶ್ರೀ ರಾಘವೇಂದ್ರ ಶ್ರೀಗಳ ಆರಾಧನೆಯು ಕಲ್ಪವೃಕ್ಷ ಮತ್ತು ಕಾಮಧೇನು ಯಾವ ಅನುಗ್ರಹವನ್ನು ನೀಡುತ್ತದೆಯೋ ಅದೇ ಅನುಗ್ರಹವನ್ನು ಕೂಡ ರಾಯರು ಕರುಣಿಸುತ್ತಾರೆ ಎನ್ನುವುದು ಇದರ ಅರ್ಥ. ಇದು ಅಕ್ಷರಶಃ ಸತ್ಯವೂ ಕೂಡ.


ರಾಯರ ನೆನೆಯೋಣ, ಗುರುರಾಯರ ನೆನೆಯೋಣ ಈ ಸಾಲುಗಳು ಎಷ್ಟು ಜನಜನಿತವಾಗಿದೆ ಎಂದರೆ ಕೆಲವರಿಗೆ ರಾಯರನ್ನು ನೆನೆಯದೆ ದಿನವೇ ಪ್ರಾರಂಭವಾಗುವುದಿಲ್ಲ. ರಾಯರ ಆರಾಧನೆಯಲ್ಲಿ ಪಾಲ್ಗೊಂಡರೆ ಜನ್ಮವೇ ಸಾರ್ಥಕವಾಗುತ್ತದೆ. ಕಲಿಯುಗದ ಕಾಮಧೇನು, ಕಲಿಯುಗದ ಕಲ್ಪತರು ಪ್ರಖಂಡ ವಿದ್ವಾಂಸ, ಸಾಹಿತ್ಯ ಲೋಲ, ಸರಸ್ವತಿ ಪುತ್ರ, ಸಂಗೀತದ ಹರಿಕಾರ ಹೀಗೆ ರಾಘವೇಂದ್ರ ಸ್ವಾಮಿಗಳನ್ನು ಭಕ್ತಿಯಿಂದ ಹಲವಾರು ನಾಮಧೇಯಗಳಲ್ಲಿ ಪೂಜಿಸಲಾಗುತ್ತದೆ.

ಭಕ್ತರ ಭವ ಭಯಗಳನ್ನು ನೀಗಿಸುತ್ತಿರುವ, ನೀನೇ ಗತಿ ತಂದೆ ಎಂದು ಬರುವವರ ಕಷ್ಟಕಾರ್ಪಣ್ಯಗಳನ್ನು ಪರಿಹಾರ ಮಾಡುತ್ತಾ ಭಕ್ತಾಧಿಗಳ ಮನೆಮನಗಳನ್ನು ಬೆಳಗುತ್ತಿದ್ದಾರೆ. ಶ್ರೀ ರಾಘವೇಂದ್ರ ಸ್ವಾಮಿಗಳು. ಶ್ರೀ ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾಗಿ ಇಲ್ಲಿಗೆ 352 ವರ್ಷಗಳಾಗಿವೆ. ಆದರೂ ರಾಘವೇಂದ್ರ ಸ್ವಾಮಿಗಳ ಕರುಣೆ ಕೃಪಾಕಟಾಕ್ಷ ಬೇಡಿ ಬರುವ ಭಕ್ತಾಧಿಗಳ ಪಾಲಿಗೆ ರಕ್ಷೆಯಾಗಿದೆ.

ರಾಯರು ತಮ್ಮನ್ನು ನಂಬಿದ ಭಕ್ತರನ್ನು ಕಾಪಾಡುವ ಸಲುವಾಗಿ ಪವಾಡಗಳನ್ನು ಮಾಡಿದ್ದಾರೆ. ಅವುಗಳ ಬಗ್ಗೆ ಪ್ರತಿಯೊಬ್ಬ ರಾಯರ ಭಕ್ತರು ಕೂಡ ತಿಳಿದುಕೊಳ್ಳಲು ಹಾತೊರೆಯುತ್ತಾರೆ. ರಾಯರ ಪವಾಡಗಳ ಬಗ್ಗೆ ಕೇಳಿದರೆ ಸಾಕು ಎಷ್ಟೋ ಜನ್ಮದ ಪಾಪಗಳು ಕೂಡ ಪರಿಹಾರ ಆಗುತ್ತವೆ ಎನ್ನುವ ನಂಬಿಕೆಗಳು ಕೂಡ ಇವೆ. ಅವುಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡಲಾಗಿದೆ.

ಶ್ರೀ ಗುರು ರಾಘವೇಂದ್ರ ಸ್ವಾಮಿಗಳು 1595ರಂದು ಮನ್ಮಥ ನಾಮ ಸಂವತ್ಸರ, ಫಾಲ್ಗುಣ ಶುದ್ಧ ಸಪ್ತಮಿಯ ಗುರುವಾರದಂದು ತಮಿಳುನಾಡಿನ ಭುವನಗಿರಿಯಲ್ಲಿ ಬೀಗಮುದ್ರೆ ಮನೆತನದ ಗೋಪಮ್ಮ ಹಾಗೂ ತಿಮ್ಮಣ್ಣ ಭಟ್ಟ ದಂಪತಿಗೆ ತಿರುಪತಿ ತಿಮ್ಮಪ್ಪನ ಹರಕೆಯಿಂದ ಜನ್ಮವೆತ್ತುತ್ತಾರೆ. ಮಗುವಿಗೆ ಮೊದಲು ವೆಂಕಟನಾಥ ಎಂದು ಹೆಸರಿಡಲಾಗಿತ್ತು. ವೆಂಕಟನಾಥನಿಗೆ ಪ್ರಾಥಮಿಕ ಗುರುಗಳು ಅಕ್ಕ ವೆಂಕಟಾಂಬಿಕೆ ಪತಿ ಲಕ್ಷ್ಮಿನರಸಿಂಹ ಆಚಾರ್ಯರು. ಮುಂದಿನ ಹೆಚ್ಚಿನ ವಿದ್ಯಾಭ್ಯಾಸ ಸುಧೀಂದ್ರ ತೀರ್ಥರಿಂದ ನಡೆಯಿತು. ವೆಂಕಟನಾಥ ರಾಘವೇಂದ್ರಾಯರಾಗಿ ಇಂದು ಭಕ್ತಾದಿಗಳ ಮೇಲೆ ತೋರುತ್ತಿರುವ ಕೃಪೆಯ ಬಗ್ಗೆ ಮತ್ತು ಅವರ ಪವಾಡಗಳ ಬಗ್ಗೆ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ

[irp]