ಧನು ರಾಶಿ ಮೇ 2023 ಮಾಸ ಭವಿಷ್ಯ…….!!
ಧನಸ್ಸು ರಾಶಿಯವರ ಮೇ ತಿಂಗಳ ಮಾಸ ಭವಿಷ್ಯ ಯಾವ ರೀತಿ ಇರುತ್ತದೆ ಎಂದು ನೋಡುವುದಕ್ಕೂ ಮೊದಲು ಗ್ರಹಗಳ ಬದಲಾವಣೆ ಯಾವ ರೀತಿ ಇರುತ್ತದೆ ಎಂದು ಈ ಕೆಳಗಿನಂತೆ ತಿಳಿಯೋಣ. ಎರಡನೇ ತಾರೀಕು ಶುಕ್ರ ಮಿಥನ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ. ಹಾಗೂ 10ನೇ ತಾರೀಖು ಕುಜ ಕರ್ಕಾಟಕ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ.
ಇನ್ನು 15ನೇ ತಾರೀಖು ರವಿ ವೃಷಭ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಇನ್ನು 30ನೇ ತಾರೀಖು ಕಟಕ ರಾಶಿಗೆ ಶುಕ್ರನು ಪ್ರವೇಶ ಮಾಡುತ್ತಿದ್ದಾನೆ. ಹಾಗಾದರೆ ಈ ಎಲ್ಲ ಗ್ರಹಗಳ ಬದಲಾವಣೆ ಧನಸ್ಸು ರಾಶಿಯವರಿಗೆ ಯಾವ ರೀತಿಯಾಗಿ ಪರಿಣಾಮ ಬೀರುತ್ತದೆ ಹಾಗೂ ಯಾವ ರೀತಿಯ ಲಾಭಗಳು, ಹಾಗೆ ಯಾವ ರೀತಿಯ ನಷ್ಟಗಳು, ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದಂತೆ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಧನಸ್ಸು ರಾಶಿಯವರಿಗೆ ರವಿ 5 ಮತ್ತು 6 ನೇ ಮನೆಯಲ್ಲಿ ಸಂಚಾರ ವನ್ನು ಮಾಡಿದರೆ ಕುಜ 7 ಮತ್ತು 8ನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಅದೇ ರೀತಿಯಾಗಿ ಬುಧ 5ನೇ ಮನೆಯಲ್ಲೂ ಗುರು 5ನೇ ಮನೆಯಲ್ಲಿಯೂ ಶುಕ್ರ 7 ಮತ್ತು 8ನೇ ಮನೆಯಲ್ಲಿಯೂ ಹಾಗೂ ಶನಿ 3ನೇ ಮನೆಯಲ್ಲಿಯೂ.
ರಾಹು 5ನೇ ಮನೆಯಲ್ಲಿ ಹಾಗೂ ಕೇತು 11 ನೇ ಮನೆಯಲ್ಲಿ ಮುಂದುವರೆಯುತ್ತಾರೆ. ಹಾಗಾದರೆ ಧನುಷ ರಾಶಿಯವರಿಗೆ ಈ ಒಂದು ಮಾಸ ಎಷ್ಟು ಲಾಭದಾಯಕವಾಗಿರುತ್ತದೆ ಎಂದು ನೋಡುವುದಾದರೆ ಮೊದಲನೆಯದಾಗಿ ನಿಮಗೆ ದೊಡ್ಡ ದೊಡ್ಡ ಅಧಿಕಾರಗಳು ಸಿಗುವಂತಹ ಹಾಗೂ ರಾಜಯೋಗ ಎನ್ನುವುದು ಪ್ರಾಪ್ತವಾಗುತ್ತದೆ. ಅದರಲ್ಲೂ ಸೋಲನ್ನು ಅನುಭವಿಸಿದಂತಹ ರಾಜಕಾರಣಿಗಳಿಗೆ ಹೊಸ ಬೆಳಕು ಮೂಡುವಂತದ್ದು. ಒಳ್ಳೆಯ ರೀತಿಯ ಪರಿವರ್ತನೆಯಂತೂ ಕಂಡುಬರುತ್ತದೆ.
ಹಾಗೆಯೇ ಧನಸ್ಸು ರಾಶಿಯವರಿಗೆ ಈ ತಿಂಗಳಿನಲ್ಲಿ ಮಾಡುವಂತಹ ಎಲ್ಲಾ ಕೆಲಸಗಳಲ್ಲಿಯೂ ಕೂಡ ಲಾಭ ಸಿಗುವಂತದ್ದು. ಪ್ರೇಮಿಗಳಿಗೆ ಶುಭವಾದ ವಾತಾವರಣ ಇರುವಂಥದ್ದು. ಹಾಗೆ ಪ್ರೇಮ ವಿವಾಹದ ಸಾಧ್ಯತೆಗಳು ಕೂಡ ಇದೆ. ಆದರೆ ಅಣ್ಣ ತಮ್ಮಂದಿರ ಮಧ್ಯೆ ವೈ ಮನಸ್ಸುಗಳು ಜಾಸ್ತಿಯಾಗುತ್ತದೆ. ಹಾಗೆಯೇ ದಾಯಾದಿಗಳ ನಡುವೆ ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ. ಹಾಗೂ ಆಸ್ತಿಯ ವಿಚಾರದಲ್ಲಿ ನಿಮಗೆ ನೆಮ್ಮದಿ ಎನ್ನುವುದು ಸಿಗುವುದಿಲ್ಲ.
ಹಾಗೂ ನಿಮಗೆ ಆಸ್ತಿ ಸಿಕ್ಕಿದ್ದರೂ ಸಹ ಅದರಲ್ಲಿ ನಿಮಗೆ ಸಂತೋಷ ಎನ್ನುವುದು ಸಿಗುವುದಿಲ್ಲ ಇದಕ್ಕೆ ಕಾರಣ ಏನು ಎಂದರೆ ಪಂಚಮ ಸ್ಥಾನದಲ್ಲಿ ಉಂಟಾಗಿರುವಂತಹ ಗುರು ರಾಹು ಚಾಂಡಾಳ ಯೋಗ. ಧನಸ್ಸು ರಾಶಿಯವರು ನೋಡುವುದಕ್ಕೆ ಒರಟುತನದವರಾಗಿದ್ದರೂ ಮನಸ್ಸಿನೊಳಗೆ ತುಂಬಾ ಒಳ್ಳೆಯ ಹಾಗೂ ಮೃದು ಸ್ವಭಾವದವರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.