ರಾಹುಗ್ರಸ್ತ ಸೂರ್ಯಗ್ರಹಣ ಯಾವ ರಾಶಿಗೆ ಸೂರ್ಯ ಗ್ರಹಣದ ಪ್ರಭಾವ ಬೀರುತ್ತೆ..ನೋಡಿ.ಈ ಒಂದು ತಪ್ಪು ಮಾಡಬೇಡಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ರಾಹುಗ್ರಸ್ತ ಸೂರ್ಯಗ್ರಹಣ 20-04-2023…..||

ಇದೆ ಏಪ್ರಿಲ್ 20ನೇ ತಾರೀಖು ರಾಹುಗ್ರಸ್ತ ಸೂರ್ಯಗ್ರಹಣ ನಡೆಯುತ್ತಿದ್ದು ಈ ಒಂದು ಗ್ರಹಣದ ಸಂದರ್ಭದಲ್ಲಿ ಯಾವ ರೀತಿಯ ಪರಿಣಾಮಗಳು ಬೀರುತ್ತದೆ. ಹಾಗೂ ಸೂರ್ಯ ಗ್ರಹಣದ ಪ್ರಭಾವದಿಂದ ಯಾವ ರಾಶಿಯವರಿಗೆ ಒಳ್ಳೆಯದಾಗುತ್ತದೆ ಹಾಗೂ ಯಾವ ರಾಶಿಯವರಿಗೆ ಕೆಟ್ಟದಾಗುತ್ತದೆ ಹಾಗೂ ಇದು ಯಾವೆಲ್ಲ ರೀತಿಯ ಪರಿಣಾಮವನ್ನು ಬೀರುತ್ತದೆ. ಹೀಗೆ ಈ ವಿಷಯವಾಗಿ ಸಂಬಂಧಿಸಿದ.

ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. 20ನೇ ತಾರೀಖು ಸೂರ್ಯಗ್ರಹಣ ನಡೆಯುತ್ತಿದ್ದು ಇದರ ಪ್ರಭಾವದಿಂದಾಗಿ ನಮ್ಮ ಕರ್ನಾಟಕ ರಾಜ್ಯದ ಮೇಲೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುತ್ತಿಲ್ಲ ಎಂದೇ ಹೇಳಬಹುದು. ಅದರಲ್ಲೂ ಕೆಲವೊಂದಷ್ಟು ಪ್ರಮುಖವಾಗಿ ಪ್ರಕೃತಿ ವಿಕೋಪ ಅಂದರೆ ಮಳೆ ಹೆಚ್ಚಾಗುವಂತದ್ದು ಗಾಳಿ ಹೆಚ್ಚಾಗುವಂತದ್ದು, ಕ್ರಿಮಿ ಕೀಟಗಳಿಂದ ರೋಗಗಳು ಹೆಚ್ಚಾಗುವಂತದ್ದು, ಸಮುದ್ರದಲ್ಲಿ ಕೆಲವೊಂದಷ್ಟು ಏರಿಳಿತಗಳು.


ಹೀಗೆ ಈ ಒಂದು ಸಾಮಾನ್ಯವಾಗಿರುವಂತಹ ಪರಿಣಾಮಗಳನ್ನು ನಾವು ಕಾಣಬಹುದು. ಆದರೆ ದೊಡ್ಡ ಮಟ್ಟದಲ್ಲೇನು ಇದರಿಂದ ನಷ್ಟಗಳು ಸಮಸ್ಯೆಗಳು ಉಂಟಾಗುವುದಿಲ್ಲ. ಈ ಒಂದು ಗ್ರಹಣ ಸಂಭವಿಸುವಂಥದ್ದು ಯಾವಾಗ ಎಂದು ನೋಡುವುದಾದರೆ ಶೋಭಕೃತ್ ನಾಮ ಸಂವತ್ಸರದ ಉತ್ತರಾಯಣ ವಸಂತ ಋತು ಚೈತ್ರ ಮಾಸ ಬಹುಳ ಪಕ್ಷ ಅಂದರೆ ಕೃಷ್ಣ ಪಕ್ಷ ಅಮಾವಾಸ್ಯೆಯ ದಿನ ದಿನಾಂಕ 20 ಏಪ್ರಿಲ್ 2023 ನೇ ತಾರೀಖಿನಂದು ನಡೆಯುತ್ತಿರುವಂತದ್ದು.

ಅದರಲ್ಲೂ ವಿಶೇಷವಾಗಿ ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ಈ ಗ್ರಹಣ ಸಂಭವಿಸುತ್ತಿದೆ. 4 ಲಗ್ನದಲ್ಲಿ ಈ ಗ್ರಹಣ ಸಂಭವಿಸುತ್ತಿದೆ. ಮೇಷ ಲಗ್ನದಲ್ಲಿ ಪ್ರಾರಂಭವಾಗಿ ವೃಷಭ ಲಗ್ನ ಮಿಥುನ ಲಗ್ನ ಕರ್ಕಾಟಕ ಲಗ್ನದ ಮಧ್ಯ ಭಾಗದವರೆಗೂ ಈ ಒಂದು ಗ್ರಹಣ ಎನ್ನುವುದು ಸಂಭವಿಸುತ್ತಿದೆ. ಗ್ರಹಣದ ಸಮಯ ನೋಡುವುದಾದರೆ ಬೆಳಗ್ಗೆ 7 ಗಂಟೆ 4 ನಿಮಿಷದಿಂದ

ಮಧ್ಯಾಹ್ನ 12 ಗಂಟೆ 29 ನಿಮಿಷದವರೆಗೂ ಒಟ್ಟಾರೆಯಾಗಿ ಸರಿ ಸುಮಾರು ಐದೂವರೆ ಗಂಟೆಗಳ ಕಾಲ ಈ ಗ್ರಹಣ ಸಂಭವಿಸುತ್ತಿದೆ. ಭೂಮಿಗೆ ಸೂರ್ಯನಿಗೆ ಮಧ್ಯದಲ್ಲಿ ಚಂದ್ರ ಬರುವುದನ್ನು ನಾವು ಸೂರ್ಯ ಗ್ರಹಣ ಎಂದು ಕರೆಯುತ್ತೇವೆ. ಹಾಗೂ ಗ್ರಹಣದ ಸಂದರ್ಭದಲ್ಲಿ ಪ್ರತಿಯೊಬ್ಬರು ಅನುಸರಿಸಬೇಕಾದ ಮುಖ್ಯ ವಿಷಯ ಏನು ಎಂದರೆ ಆ ಒಂದು ಸಂದರ್ಭದಲ್ಲಿ ಯಾರು ಕೂಡ ಆಹಾರವನ್ನು ಸೇವನೆ ಮಾಡಬಾರದು.

ಹಾಗೇನಾದರೂ ಗರ್ಭಿಣಿ ಸ್ತ್ರೀಯರು ಮಕ್ಕಳು ಇದ್ದರೆ ಅವರು ಗ್ರಹಣದ ಮೋಕ್ಷ ಸಮಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಫಲಹಾರವನ್ನು ಸೇವನೆ ಮಾಡುವುದು ಉತ್ತಮ. ಹಾಗೆಯೇ ಗ್ರಹಣ ಮುಗಿದ ನಂತರ ಪ್ರತಿಯೊಬ್ಬರೂ ಸ್ನಾನ ಮಾಡಿ ದೇವರ ಮುಂದೆ ದೀಪವನ್ನು ಹಚ್ಚಿ ಆನಂತರ ಆಹಾರವನ್ನು ಸೇವನೆ ಮಾಡುವುದು ಉತ್ತಮ. ಈ ಎಲ್ಲಾ ನಿಯಮಗಳನ್ನು ಅನುಸರಿಸುವುದರಿಂದ ನಿಮಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *