ಆಸ್ತಿ ವಿಭಾಗದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೆ ಏನಾಗುತ್ತೆ ತಿಳಿಯಿರಿ…

ಆಸ್ತಿ ವಿಭಾಗದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೆ ಏನಾಗುತ್ತೆ? ತಿಳಿಯಿರಿ!!

WhatsApp Group Join Now
Telegram Group Join Now

ಬಹಳ ಹಿಂದಿನ ಕಾಲದಿಂದಲೂ ಕೂಡ ಆಸ್ತಿ ವಿಚಾರವಾಗಿ ಕೆಲವೊಂದಷ್ಟು ಗೊಂದಲದ ಪ್ರಶ್ನೆಗಳು ಎಲ್ಲರಲ್ಲಿಯೂ ಕೂಡ ಇರುತ್ತದೆ ಅಂದರೆ ತಂದೆಯ ಆಸ್ತಿ ಕೇವಲ ಗಂಡು ಮಕ್ಕಳಿಗೆ ಸೇರುವಂತದ್ದ ಅಥವಾ ಹೆಣ್ಣು ಮಕ್ಕಳಿಗೂ ಸೇರಬೇಕ ಈವಿಷಯವಾಗಿ ಎಲ್ಲರಲ್ಲಿಯೂ ಕೂಡ ಒಂದು ಗೊಂದಲದ ಪ್ರಶ್ನೆ ಇದೆ.ಆದರೆ ಅದೇ ವಿಷಯವಾಗಿ ಈ ದಿನ ಅಂದರೆ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲು ಸೇರುತ್ತದೆ.

ಹಾಗೂ ತಂದೆಯ ಆಸ್ತಿ ಹಾಗೂ ತಂದೆಗೆ ಅವರ ಪಿತ್ರಾರ್ಜಿತ ಆಸ್ತಿ ಏನಾದರೂ ಇದ್ದರೆ ಅದರಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಸೇರುತ್ತದ ಅಥವಾ ಸೇರುವುದಿಲ್ಲವ ಎನ್ನುವ ವಿಷಯವಾಗಿ ಈ ದಿನ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಚರ್ಚಿಸೋಣ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ 2005ರ ನಂತರ ನ್ಯಾಯಾಲಯದಲ್ಲಿ ಒಂದು ತೀರ್ಮಾನವನ್ನು ಹೊರಡಿಸಿದ್ದು ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಪಾಲು ಇದೆ ಎಂದೇ ಆದೇಶವನ್ನು ಹೊರಡಿಸಿತು

ಆನಂತರ 2005ರ ಮೇಲೆ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ತನ್ನ ತಂದೆಯ ಆಸ್ತಿಯಲ್ಲಿ ಸಮಾನವಾದ ಆಸ್ತಿ ಸಿಗುತ್ತದೆ ಎಂದು ಎಲ್ಲರೂ ಕೂಡ ತಿಳಿದುಕೊಂಡಿದ್ದರು.ಆದರೆ ಈ ವಿಷಯದಲ್ಲಿ ಹೆಣ್ಣು ಮಕ್ಕಳು ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ನಿಮ್ಮ ತಂದೆಯ ಸ್ವಯಂ ಆಸ್ತಿ ಅಂದರೆ ಸ್ವಂತ ಸಂಪಾದನೆಯಿಂದ ಸಂಪಾದನೆ ಮಾಡಿದಂತಹ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಸಮನಾದ ಅಧಿಕಾರ ಇರುತ್ತದೆ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಅದೇ ರೀತಿ ತಂದೆಗೆ ಅವರ ತಂದೆ ಅಂದರೆ ಪಿತ್ರಾರ್ಜಿತ ಆಸ್ತಿ ಏನಾದರೂ ಅವರ ಹೆಸರಿನಲ್ಲಿ ಇದ್ದರೆ ಅದೇನಾದರೂ 2005ರ ಹಿಂದೆಯೇ ವಿಭಾಗವಾಗಿದ್ದರೆ ಆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಾದಂತಹ ಹಕ್ಕು ಇರುವುದಿಲ್ಲ. ತದನಂತರ 2005ರ ನಂತರ ಪಿತ್ರಾರ್ಜಿತ ಆಸ್ತಿಯಲ್ಲಿಯೂ ಕೂಡ ಹೆಣ್ಣು ಮಕ್ಕಳಿಗೆ ಸಮನಾದ ಪಾಲು ಕೊಡಬೇಕು ಎಂಬ ಆದೇಶವನ್ನು ಹೊರಡಿಸಿದ ನಂತರವೇ ಹೆಣ್ಣು ಮಕ್ಕಳಿಗೂ ಕೂಡ ಆಸ್ತಿಯಲ್ಲಿ ಸಮನಾದ ಪಾಲುಗಳನ್ನು ಹಂಚುತ್ತಿದ್ದಾರೆ.

ಹಾಗೂ ಕೆಲವೊಮ್ಮೆ ಈ ವಿಚಾರವಾಗಿ ತಂದೆ 2005ರ ನಂತರ ಮರಣವನ್ನು ಹೊಂದಿದ್ದರೆ ಅವರು ತಮ್ಮ ಆಸ್ತಿಯನ್ನು ಯಾರ ಹೆಸರಿನಲ್ಲಿ ಮಾಡಿರದೆ ಇದ್ದರೂ ಸಹ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮನಾದ ಹಕ್ಕು ಇರುತ್ತದೆ.ಬದಲಿಗೆ ಅವನ ಹೆಂಡತಿ ಹಾಗೂ ಮಗನ ಅಂದರೆ ದೊಡ್ಡ ಮಗನ ಹೆಸರಿನಲ್ಲಿ ಇದ್ದರೆ ಆಸ್ತಿ ಅವರಿಗೆ ಸೇರುವುದಿಲ್ಲ ಬದಲಿಗೆ ಆಸ್ತಿಗೆ ಸಂಬಂಧಿಸಿದ ಕೆಲವೊಂದು ವಿಚಾರಕ್ಕೆ ಅವರ ಹೆಸರನ್ನು ಸೇರಿಸಿರುತ್ತಾರೆ ಹೊರತು ಎಲ್ಲಾ ಆಸ್ತಿ ಅವರಿಗೆ ಸೇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">