ಧನಸ್ಸು ರಾಶಿ ನಿಮ್ಮ ಗೆಲುವು ಪಕ್ಕಾ ಅದು ಯಾವಾಗ ತಿಳ್ಕೋಳಿ..ಮೇ ಮಾಸ ಭವಿಷ್ಯ - Karnataka's Best News Portal

ಧನಸ್ಸು ರಾಶಿ ನಿಮ್ಮ ಗೆಲುವು ಪಕ್ಕಾ ಅದು ಯಾವಾಗ ತಿಳ್ಕೋಳಿ..ಮೇ ಮಾಸ ಭವಿಷ್ಯ

ಧನು ರಾಶಿ ಮೇ ತಿಂಗಳ ಮಾಸ ಭವಿಷ್ಯ……||

ಧನಸ್ಸು ರಾಶಿಯವರಿಗೆ ಈ ಮೇ ತಿಂಗಳು ಯಾವ ರೀತಿ ಇರುತ್ತದೆ? ಯಾವ ಗ್ರಹಗಳ ಬದಲಾವಣೆಯಿಂದ ಯಾವ ರೀತಿಯ ಶುಭಫಲ ಗಳನ್ನು ಪಡೆದುಕೊಳ್ಳುತ್ತಾರೆ ಹಾಗೂ ಯಾವ ರೀತಿಯ ಬದಲಾವಣೆ ಗಳು ನಡೆಯುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

ಮೊದಲನೆಯದಾಗಿ ಧನು ರಾಶಿಯವರಿಗೆ ಈ ಮೇ ತಿಂಗಳಲ್ಲಿ ಕೆಲವು ಬದಲಾವಣೆಗಳು ಅಂದರೆ ಪರಿವರ್ತನೆಗಳು ಆಗುವಂಥದ್ದು. ಇದರಿಂದ ನಿಮ್ಮ ಮನಸ್ಸಿಗೆ ಒಂದು ರೀತಿಯ ಸಮಾಧಾನ ಉಂಟಾಗುತ್ತದೆ. ಹಾಗೆ ನಿಮ್ಮ ಸುತ್ತಮುತ್ತ ಎಲ್ಲ ಪಾಸಿಟಿವ್ ಎನರ್ಜಿ ಉಂಟಾಗುವುದನ್ನು ನೀವು ಕಾಣಬಹುದು. ಅಂದರೆ ಯಾವ ರೀತಿಯಾದಂತಹ ಒಳ್ಳೆಯ ಘಟನೆಗಳು ಅಥವಾ ಪರಿಸ್ಥಿತಿಗಳು ಉಂಟಾಗುತ್ತದೆ ಎನ್ನುವುದನ್ನು ನೀವು ಪಡೆದುಕೊಳ್ಳುವುದೇ ಪಾಸಿಟಿವ್ ಎನರ್ಜಿ ಯಾಗಿದೆ.


ಮೊದಲನೆಯದಾಗಿ ನಿಮ್ಮ ತೃತೀಯ ಭಾವದಲ್ಲಿ ಎರಡು ಗ್ರಹಗಳು ಇವೆ ಅವು ಯಾವುವು ಎಂದರೆ ಕುಜ ಮತ್ತು ಶನಿ. ಶನಿ ತೃತೀಯಕ್ಕೆ ಬಂದದ್ದು ಜನವರಿಯಲ್ಲಿ ಈಗಾಗಲೇ ನಿಮ್ಮ ಸುತ್ತಮುತ್ತ ಇರುವಂತಹ ಎಲ್ಲಾ ಶತ್ರುಗಳು ಕೂಡ ದೂರವಾಗಿರುತ್ತಾರೆ. ತೃತಿಯಕ್ಕೆ ಶನಿಯು ಅಧಿಪತಿ ಯಾಗುತ್ತಾನೆ. ಪಂಚಮ ಮತ್ತು ವ್ಯಯ ಭಾವಗಳಿಗೆ ಕುಜ ಅಧಿಪತಿ ಯಾಗುತ್ತಾನೆ. ಈ ಒಂದು ಪರಿಸ್ಥಿತಿಯಲ್ಲಿ ಶನಿ ನಿಮಗೆ ಹೆಚ್ಚಿನ ಧೈರ್ಯವನ್ನು ಕೊಡುತ್ತಾನೆ.

See also  ನಾಳೆ ಪವರ್ ಫುಲ್ ಹುಣ್ಣಿಮೆ ಇದೆ ಈ ಕೆಲಸ ಮಾಡಿ ನೋಡಿ ನಿಮ್ಮ ಜೀವನವೆ ಸಂಪೂರ್ಣ ಬದಲಾಗುತ್ತದೆ.. ಅದೃಷ್ಟ ಬದಲಿಸುವ ತಂತ್ರಗಳು

ಜೊತೆಗೆ ಕೋರ್ಟ್ ಕೇಸ್ ಗೆ ಸಂಬಂಧಿಸಿದಂತೆ ಯಾವುದಾದರೂ ವಿಚಾರಗಳು ನಡೆಯುತ್ತಿದ್ದರೆ ಅವೆಲ್ಲವೂ ಕೂಡ ಒಳ್ಳೆಯ ಫಲಿತಾಂಶ ವನ್ನು ಪಡೆಯುತ್ತದೆ. ಅದರ ಜೊತೆ ಕುಟುಂಬದಲ್ಲಿ ಏನಾದರೂ ವ್ಯಾಜ್ಯಗಳು ಇದ್ದರೆ ಅವೆಲ್ಲವೂ ಕೂಡ ಬಗೆಹರಿಯುತ್ತದೆ. ಹಾಗೂ ಶನಿಯಿಂದಲೂ ಸರಿಪಡಿಸಲಾಗದಂತಹ ಕೆಲವೊಂದಷ್ಟು ವಿಚಾರಗಳನ್ನು ಕುಜ ನಿಮಗೆ ಸರಿಪಡಿಸುತ್ತಾನೆ ಎಂದೇ ಹೇಳಬಹುದು. 17ನೇ ತಾರೀಖು ಮೇ ತಿಂಗಳಿನ ನಂತರ ನಿಮ್ಮ ಎಲ್ಲ ಸಮಸ್ಯೆಗಳನ್ನು ಕೂಡ ಕುಜ ದೂರ ಮಾಡುತ್ತಾನೆ.

ಶನಿಯ ಭಾವದಲ್ಲಿ ಶನಿಯ ಜೊತೆ ಇರುವುದರಿಂದ ಕುಜ ಕೆಲವೊಂದ ಷ್ಟು ಸಂಘರ್ಷಗಳನ್ನು ತರುತ್ತಾನೆ. ಅಂದರೆ ಯಾವುದೋ ಒಂದು ವಿಚಾರವಾಗಿ ಬೇರೆಯವರ ಜೊತೆ ಸಂಘರ್ಷಣೆ ಮಾಡುವುದರ ಬದಲು ನಮ್ಮ ಮನಸ್ಸಿನೊಳಗೆ ನಮಗೆ ಕೆಲವೊಂದಷ್ಟು ಆಲೋಚನೆಗಳು ಉಂಟಾಗುವಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ನಮ್ಮ ಒಳ ಮನಸ್ಸು ಒಂದು ಅರ್ಥವನ್ನು ಹೇಳಿದರೆ ನಮ್ಮ ಹೊರ ಮನಸ್ಸು ಒಂದು ರೀತಿಯ ಅರ್ಥವನ್ನು ಹೇಳುತ್ತಿರುತ್ತದೆ.

ಅಂತಹ ಸಂದಿಗ್ಧ ಪರಿಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಹೀಗೆ ಇಷ್ಟೆಲ್ಲಾ ಆಲೋಚನೆಗಳಿದ್ದರೂ ಕೂಡ ನೀವು ಆರಾಮಾಗಿ ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ ಇರುತ್ತೀರಿ ಇದಕ್ಕೆ ಕಾರಣ ನಾಲ್ಕನೇ ಭಾವದಲ್ಲಿ ಶುಕ್ರನ ಪ್ರವೇಶ ಆಗುತ್ತದೆ. ಅಂದರೆ ಮೇ 23ನೇ ತಾರೀಖಿಗೆ ಆದ್ದರಿಂದ ಅದರ ಬಗ್ಗೆ ಹೆಚ್ಚು ಆಲೋಚನೆ ಮಾಡುವಂತಹ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಯುಗಾದಿ ನಂತ್ರದ ದಿನಗಳು ಬಹಳ ಕೆಟ್ಟದ್ದು ಭಯಾನಕ ಭವಿಷ್ಯ ನುಡಿದ ಕೋಡಿಶ್ರೀ..

[irp]


crossorigin="anonymous">