ಮುಸ್ಲಿಂಮರು ಮೆಕ್ಕಾವನ್ನು ಏಕೆ ಅತಿಯಾಗಿ ಇಷ್ಟಪಡುತ್ತಾರೆ...ಬೇರೆ ಧರ್ಮದವರನ್ನು ಯಾಕೆ ಬಿಡೋದಿಲ್ಲ ಗೊತ್ತಾ ? - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಮುಸ್ಲಿಮರು ಮೆಕ್ಕಾವನ್ನು ಏಕೆ ಅತಿಯಾಗಿ ಇಷ್ಟ ಪಡುತ್ತಾರೆ ಬೇರೆ ಧರ್ಮದವರನ್ನು ಯಾಕೆ ಬಿಡುವುದಿಲ್ಲ….||

ಈ ಭೂಮಿ ಮೇಲೆ ಇರುವಂತಹ ಪ್ರತಿಯೊಬ್ಬ ಮುಸ್ಲಿಂ ಬೇಡಿಕೊಳ್ಳು ವುದು ಏನೆಂದರೆ, ನನ್ನ ಜೀವಿತಾವಧಿಯಲ್ಲಿ ಒಂದು ಸಾಲಿಯಾದರೂ ಮೆಕ್ಕಾ ಮದೀನವನ್ನು ನೋಡಬೇಕು ಎಂದು. ನಮ್ಮಲ್ಲಿ ತುಂಬಾ ಜನರಿಗೆ ಮುಸ್ಲಿಮರು ತುಂಬಾ ಪವಿತ್ರವಾಗಿ ಬಯಸುವಂತಹ ಈ ಮೆಕ್ಕಾ ಮದೀನದ ಬಗ್ಗೆ ಗೊತ್ತಿಲ್ಲದೆ ಇರಬಹುದು.

ಇಷ್ಟಕ್ಕೂ ಮೆಕ್ಕಾ ಮದೀನಾ ಎಂದರೆ ಏನು ಏಕೆ ಪ್ರತಿಯೊಬ್ಬ ಮುಸ್ಲಿ ಮನು ತನ್ನ ಜೀವಿತಾವಧಿಯಲ್ಲಿ ಸಾಯುವುದಕ್ಕಿಂತ ಮುಂಚೆ ಒಂದು ಸಾರಿಯಾದರೂ ಮೆಕ್ಕಾ ಮದೀನವನ್ನು ನೋಡಬೇಕು ಎನ್ನುತ್ತಾರೆ? ಇದರ ಹಿಂದಿರುವ ಚರಿತ್ರೆ ಏನು? ಹಾಗೆ ಕಾಬಾ ಎಂದರೆ ಏನು? ಯಾಕೆ ಬೇರೆ ಧರ್ಮದವರನ್ನು ಮೆಕ್ಕ ಮದೀನದ ಒಳಗೆ ಅನುಮತಿಯನ್ನು ಕೊಡುವುದಿಲ್ಲ. ಈ ರೀತಿಯ ತುಂಬಾ ತುಂಬಾ ವಿಷಯಗಳು ನಿಮಗೆ ತಿಳಿದಿರುವುದಿಲ್ಲ ಆ ವಿಷಯಗಳನ್ನು ಇಲ್ಲಿ ನೋಡೋಣ.

ಮೊದಲನೆಯದಾಗಿ ಈ ಮೆಕ್ಕಾದ ಬಗ್ಗೆ ತಿಳಿದುಕೊಳ್ಳೋಣ. ಮೆಕ್ಕಾ ಇದೊಂದು ನಗರದ ಹೆಸರು ಇದು ಸೌದಿ ಅರೇಬಿಯಾದ ಸಿರತ್ ಪರ್ವತದಲ್ಲಿ ಇದೆ. ಮುಸ್ಲಿಂ ಗಳೆಲ್ಲ ಈ ಮೆಕ್ಕವನ್ನು ಯಾಕೆ ಅಷ್ಟೊಂದು ಪವಿತ್ರವಾಗಿ ನೋಡುತ್ತಾರೆ ಎಂದರೆ ಈ ಮೆಕ್ಕ ನಗರದಲ್ಲಿ ಇರುವಂತಹ ಮಸೀದಿ ಒಳಗಡೆ ಇರುವ ಕಾಬಾದಿಂದಲೇ ಇದರ ಬಗ್ಗೆ ನಮಗೆ ಅಚ್ಚುಕಟ್ಟಾಗಿ ಅರ್ಥ ಆಗಬೇಕೆಂದರೆ. ಮುಂಚೆ ನಡೆದಿರುವಂತಹ ಒಂದು ಚಿಕ್ಕ ಘಟನೆಯ ಬಗ್ಗೆ ತಿಳಿದುಕೊಳ್ಳೋಣ.

ಅದೇನೆಂದರೆ ಭಗವಂತನಾದ ಅಲ್ಲಾ ಕೆಲವಷ್ಟು ಜನ ಪ್ರವಾದಿಗಳನ್ನು ಒಬ್ಬರಾದ ನಂತರ ಒಬ್ಬರಾಗಿ ಈ ಭೂಮಿಯ ಮೇಲೆ ಕಳಿಸುತ್ತಾನೆ. ಆ ರೀತಿ ಬಂದಂತಹ ಪ್ರವಾದಿಗಳಲ್ಲಿ ಇಬ್ರಾಹಿಂ ಪ್ರವಾದಿ ಕೂಡ ಒಬ್ಬರು. ಅಲ್ಲಾ ಇವರನ್ನು ನಾಲ್ಕು ಸಾವಿರ ವರ್ಷಗಳ ಹಿಂದೆ ಭೂಮಿ ಮೇಲೆ ಕಳಿಸುತ್ತಾರೆ. ಇನ್ನು ಇಬ್ರಾಹಿಂ

ಪ್ರವಾದಿಗೆ ಹೆಂಡತಿ ಮತ್ತು ಮಕ್ಕಳು ಇರುತ್ತಾರೆ ಹೆಂಡತಿಯ ಹೆಸರು ಹಗರ್, ಮಗನ ಹೆಸರು ಇಸ್ಮಾಯಿಲ್. ಒಂದು ದಿನ ಏನು ನಡೆಯುತ್ತದೆ ಎಂದರೆ ಅಲ್ಲಾನ ಆಗ್ನೇಯ ಪ್ರಕಾರ ಇಬ್ರಾಹಿಂ ತನ್ನ ಹೆಂಡತಿ ಮತ್ತು ಮಗುವನ್ನು ಮರುಭೂಮಿಯಲ್ಲಿ ಬಿಟ್ಟು ಹೋಗುತ್ತಾನೆ. ಆ ಸಮಯ ದಲ್ಲಿ ಮಗನಾದಂತಹ ಇಸ್ಮಾಯಿಲ್ ತನ್ನ ತಾಯಿಗೆ ತುಂಬಾ ದಾವಾಗುತ್ತಿದೆ, ನೀರು ಬೇಕು ಎಂದು ಕೇಳುತ್ತಾನೆ.

ನಂತರ ಅವನ ತಾಯಿ ನೀರಿಗೋಸ್ಕರ ಆ ಜಾಗದಲ್ಲಿ ಸುತ್ತಲೂ ಹುಡುಕಾಡುತ್ತಾರೆ. ಅಲ್ಲಿ ಎಷ್ಟೇ ಹುಡುಕಾಡಿದರೂ ಒಂದು ತೊಟ್ಟು ನೀರು ಕೂಡ ಸಿಗುವುದಿಲ್ಲ. ಇದರಿಂದಾಗಿ ಅವನ ತಾಯಿ ಮಗನ ದಾವನ್ನು ತೀರಿಸುವುದಕ್ಕೆ ಅಲ್ಲಿ ಇಲ್ಲಿ ತಿರುಗಾಡಿದರು ಕೂಡ ನೀರು ಸಿಗದ ಕಾರಣ ದೇವರಾದಂತಹ ಅಲ್ಲಾ ಬಳಿ ಬೇಡಿಕೊಳ್ಳುತ್ತಾಳೆ ನಂತರ ದೇವರಾದಂತಹ ಅಲ್ಲಾ ಆ ಮರುಭೂಮಿಯಲ್ಲಿ ಅವರಿಗೋಸ್ಕರ ಒಂದು ನೀರಿನ ಕೊಳವನ್ನು ಸೃಷ್ಟಿ ಮಾಡುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *