ಅಂಚೆ ಇಲಾಖೆಯಿಂದ ಪೋಸ್ಟ್ ಮ್ಯಾನ್ ಹುದ್ದೆಗೆ ಅರ್ಜಿ ಕರೆಯಲಾಗಿದೆ..ಯಾವುದೇ ಪರೀಕ್ಷೆ ಇಲ್ಲ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

10ನೇ ತರಗತಿ ಪಾಸ್, ಅಂಚೆ ಇಲಾಖೆಯಿಂದ ಪೋಸ್ಟ್ ಮ್ಯಾನ್ ಹುದ್ದೆಗೆ ನೇಮಕಾತಿ…….!!

2023ರಲ್ಲಿ 10ನೇ ತರಗತಿ ಪಾಸ್ ಆದಂತಹ ಅಭ್ಯರ್ಥಿಗಳಿಗೆ ಅಂಚೆ ಇಲಾಖೆಯ ವತಿಯಿಂದ ಪೋಸ್ಟ್ ಮ್ಯಾನ್ ಹುದ್ದೆ ಹಾಗೆ, ಮೇಲ್ ಗಾರ್ಡ್ ಹಾಗೂ ಎಂಟಿಎಸ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು. ಯಾವ ಹುದ್ದೆಗೆ ಅರ್ಜಿಯನ್ನು ಹಾಕಬೇಕೋ ಅದನ್ನು ಆಯ್ಕೆ ಮಾಡಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೌದು ಹತ್ತನೇ ತರಗತಿ ಪಾಸ್ ಆದಂತಹ ಅಭ್ಯರ್ಥಿಗಳು ಕೂಡ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಹಾಕಬಹುದಾಗಿದ್ದು. ಪುರುಷರು ಹಾಗೂ ಸ್ತ್ರೀಯರು ಕೂಡ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸ ಬಹುದಾಗಿದೆ. ಹಾಗಾದರೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ? ಯಾವುದೆಲ್ಲ ನಿಯಮ ಗಳನ್ನು ಅನುಸರಿಸಬೇಕಾಗುತ್ತದೆ?


ಜೊತೆಗೆ ಅರ್ಜಿಯನ್ನು ಹಾಕುವಂತಹ ಅಭ್ಯರ್ಥಿಯು ಯಾವುದೆಲ್ಲ ರೀತಿಯ ಮಾಹಿತಿಗಳನ್ನು ತಿಳಿದುಕೊಂಡಿರಬೇಕಾಗುತ್ತದೆ? ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದು ಕೊಳ್ಳುತ್ತಾ ಹೋಗೋಣ. ಮೇಲೆ ಹೇಳಿದಂತೆ ಎಂ ಟಿ ಎಸ್ ಹುದ್ದೆಗೆ ಇಲ್ಲಿ ಒಟ್ಟಾರೆಯಾಗಿ 37,539 ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು, ಪೋಸ್ಟ್ ಮ್ಯಾನ್ ಹುದ್ದೆಗೆ 59,099 ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು ಇನ್ನು ಕೊನೆಯದಾಗಿ ಮೇಲ್ ಗಾರ್ಡ್ ಹುದ್ದೆಗೆ 1445 ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.

ಈ ಒಂದು ಅರ್ಜಿಯನ್ನು ನೀವು ಆನ್ಲೈನ್ ಮೂಲಕ ಸಲ್ಲಿಸಬೇಕಾಗು ತ್ತದೆ. ಈ ತಿಂಗಳ ವೇತನ ಎಷ್ಟಿರುತ್ತದೆ ಎಂದು ನೋಡುವುದಾದರೆ. 18,000 ದಿಂದ 81,000 ವರೆಗೆ ನಿಮ್ಮ ಕೆಲಸದ ಆಧಾರದ ಮೇಲೆ ನಿಮಗೆ ವೇತನ ಶ್ರೇಣಿಯನ್ನು ನೀಡಲಾಗುತ್ತದೆ. ಇಲ್ಲಿ ಅರ್ಜಿಯನ್ನು ಹಾಕುವುದಕ್ಕೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೆಯೇ ಗರಿಷ್ಠ 45 ವರ್ಷ ವಯಸ್ಸಿನ ಒಳಗಿನವರಾಗಿರಬೇಕು.

OBC ಅಭ್ಯರ್ಥಿಗಳಿಗೆ ಇಲ್ಲಿ 3 ವರ್ಷ ಸಡಿಲಿಕೆ ಇರುತ್ತದೆ. ಹಾಗೆ SC ST ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇರುತ್ತದೆ. ಇನ್ನು ಅರ್ಜಿ ಶುಲ್ಕ ನೋಡುವುದಾದರೆ OBC ಅಭ್ಯರ್ಥಿಗಳಿಗೆ ಇಲ್ಲಿ ನೂರು ರೂಪಾಯಿ ಅರ್ಜಿ ಶುಲ್ಕ ಇರುವಂತದ್ದು ಹಾಗೆ SC ST ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭದ ದಿನಾಂಕ 25 ಏಪ್ರಿಲ್ 2023.

ಇನ್ನು ಕೊನೆಯ ದಿನಾಂಕ 15 ಮೇ 2023. ಅರ್ಜಿ ಹಾಕುವುದಕ್ಕೆ ಬೇಕಾಗುವ ದಾಖಲಾತಿಗಳು ನಿಮ್ಮ ಫೋಟೋ ಹಾಗೂ ಸಹಿ, ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ನಿವಾಸದ ಪ್ರಮಾಣ ಪತ್ರ, ಶೈಕ್ಷಣಿಕ ಅಂಕಪಟ್ಟಿಗಳು, ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಈ ಎಲ್ಲ ದಾಖಲಾತಿಗಳನ್ನು ಇಟ್ಟುಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *