ಸುಬ್ರಮಣ್ಯ ಸ್ವಾಮಿಯ ಅನುಗ್ರಹದಿಂದ ಈ ದಿನದಿಂದ 3 ರಾಶಿಗೆ ಹಣದ ವಿಷಯದಲ್ಲಿ ಸಿಹಿ..ಪ್ರಯಾಣದಿಂದ ಲಾಭ ಪ್ರಾಪ್ತಿ..

ಮೇಷ ರಾಶಿ:- ಈ ದಿನ ವ್ಯಾಪಾರಸ್ಥರಿಗೆ ಮತ್ತು ಉದ್ಯೋಗಿಗಳಿಗೆ ದೂರದ ಪ್ರಯಾಣ ಮಾಡುವ ಸಾಧ್ಯತೆ ಇದೆ. ಈ ಪ್ರಯಾಣವು ನಿಮ್ಮ ಕೆಲಸಗಳಿಗೆ ತುಂಬಾ ಉಪಯೋಗ ಆಗಲಿದೆ. ಮತ್ತು ಸರ್ಕಾರಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರೆ ನಿಮಗೆ ಈ ದಿನ ಸಂತೋಷದ ದಿನವಾಗಿರುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 1:00 ರಿಂದ ಮಧ್ಯಾಹ್ನ 12:00ರವರಿಗೆ.

WhatsApp Group Join Now
Telegram Group Join Now

ವೃಷಭ ರಾಶಿ:- ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಿ. ಹಾಗೂ ಯಾವುದೇ ಕಾರಣಕ್ಕೂ ನಿಮ್ಮ ಕೆಲಸವನ್ನು ಮುಂದೂಡಬೇಡಿ. ಉದ್ಯೋಗಿಗಳಿಗೆ ಹಾಗೂ ವ್ಯಾಪಾರಸ್ಥರಿಗೆ ಈ ದಿನ ತುಂಬಾ ಒಳ್ಳೆಯ ದಿನವಾಗಿರುತ್ತದೆ. ಹಾಗೂ ಒಳ್ಳೆಯ ಲಾಭವನ್ನು ಪಡೆಯಬಹುದು. ಇಂದು ಆರ್ಥಿಕ ರಂಗದಲ್ಲಿ ಅಷ್ಟೇನೂ ಲಾಭವಿರುವುದಿಲ್ಲ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 6:00 ರಿಂದ 10:00 ರವರಿಗೆ.

ಮಿಥುನ ರಾಶಿ:- ಅನಗತ್ಯ ವಿಷಯಗಳ ಬಗ್ಗೆ ಯೋಚನೆ ಮಾಡಿ ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಹಾಗೂ ನೀವು ಬುದ್ಧಿವಂತಿಕೆಯಿಂದ ಈ ದಿನ ಇರಬೇಕಾಗುತ್ತದೆ. ಮತ್ತು ಅನಗತ್ಯ ಚಿಂತೆಗಳಿಂದ ಆದಷ್ಟು ದೂರವಿರಿ ಮತ್ತು ನಿಮ್ಮ ಪ್ರಮುಖ ಕಾರ್ಯಗಳ ಬಗ್ಗೆ ಗಮನ ಹರಿಸಿ. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಮಧ್ಯಾಹ್ನ 3:00 ರಿಂದ ಸಂಜೆ 5:00 ರವರಿಗೆ.

ಕರ್ಕಾಟಕ ರಾಶಿ:- ನೀವೇನಾದರೂ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಇಂದು ನಿಮಗೆ ಆರ್ಥಿಕ ಲಾಭಗಳಿಸುವ ಎಲ್ಲಾ ಅವಕಾಶಗಳು ಕೂಡ ಸಿಗಬಹುದು. ಹಾಗೂ ಇಂದು ನಿಮ್ಮ ಎಲ್ಲಾ ಕೆಲಸವು ಯಾವುದೇ ಅಡೆತಡೆ ಇಲ್ಲದೆ ಮುಂದುವರೆಯುತ್ತದೆ. ಹಣದ ಪರಿಸ್ಥಿತಿ ಕೂಡ ಈ ದಿನ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 06 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7:00 ರಿಂದ ಮಧ್ಯಾಹ್ನ 1:00 ರವರಿಗೆ.

See also  ವೃಶ್ಚಿಕ ರಾಶಿ ಅವರಿಗೆ ಜೀವನದಲ್ಲಿ ಬರೀ ಕಷ್ಟಗಳೇ ಇದೆಯಾ.ಕಷ್ಟಕ್ಕೆ ಪರಿಹಾರ ಏನು?

ಸಿಂಹ ರಾಶಿ:- ನೀವು ಸಂತೋಷದ ದಾಂಪತ್ಯ ಜೀವನವನ್ನು ನಡೆಸಲು ಬಯಸಿದರೆ ನಿಮ್ಮ ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳ ಬೇಕಾಗುತ್ತದೆ. ನಿಮ್ಮ ಪ್ರೀತಿ ಪಾತ್ರರರನ್ನು ಗೌರವದಿಂದ ನೋಡಿಕೊಳ್ಳ ಬೇಕಾಗುತ್ತದೆ. ಪ್ರಣಯ ಜೀವನದಲ್ಲಿ ಈ ದಿನದ ಪರಿಸ್ಥಿತಿಗಳು ಅಷ್ಟೇನೂ ಚೆನ್ನಾಗಿರುವುದಿಲ್ಲ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 1 :30 ರವರಿಗೆ.

ಕನ್ಯಾ ರಾಶಿ:- ನಿಮ್ಮ ಕೋಪದ ಸ್ವಭಾವದಿಂದಾಗಿ ಇಂದು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ನಿಮ್ಮಗೆ ಸಾಕಷ್ಟು ಟೀಕೆಗೆ ಒಳಗಾಗುತ್ತೀರಿ ಕಷ್ಟದ ಸಂದರ್ಭದಲ್ಲಿ ನಿಮ್ಮನ್ನು ಶಾಂತವಾಗಿ ಇಟ್ಟುಕೊಳ್ಳಿ ಮತ್ತು ಬುದ್ಧಿವಂತಿಕೆಯಿಂದ ವರ್ತಿಸಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ- ಕೇಸರಿ ಬಣ್ಣ ಸಮಯ – ಬೆಳಗ್ಗೆ 6:00 ರಿಂದ ಮಧ್ಯಾಹ್ನ 12:30 ರವರಿಗೆ.

ತುಲಾ ರಾಶಿ:- ನಿಮಗೇನಾದರೂ ಆರೋಗ್ಯದ ಸಮಸ್ಯೆ ಇದ್ದರೆ ನಿಮಗೆ ಔಷಧಿಯನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಿ. ಹಾಗೂ ವಿಶ್ರಾಂತಿಯ ಕಡೆ ಹೆಚ್ಚಿನ ಗಮನವನ್ನು ಕೊಡುವುದು ಉತ್ತಮ. ಮತ್ತು ನಿಮ್ಮ ಕೆಲಸಕ್ಕೆ ಸಂಬಂಧ ಪಟ್ಟಂತೆ ಆ ಕೆಲಸವು ಹೆಚ್ಚು ಒತ್ತಡದಿಂದ ಕೂಡಿದ್ದರೆ ಹಾಗೂ ಹೆಚ್ಚು ಹೊರೆಯಾಗಿದ್ದರೆ ಆ ಕೆಲಸದಿಂದ ನೀವು ಸ್ವಲ್ಪ ವಿರಾಮವನ್ನು ತೆಗೆದುಕೊಳ್ಳಿ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12:00ರವರಿಗೆ.

See also  ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ವೃಶ್ಚಿಕ ರಾಶಿ:- ಇಂದು ನಿಮ್ಮ ಆರ್ಥಿಕ ಪರಿಸ್ಥಿತಿಗಳು ಯಶಸ್ವಿಯಾಗ ಬಹುದು ಹಾಗೂ ಈ ದಿನ ನಿಮಗೆ ನಿಮ್ಮ ಆದಾಯ ಕೂಡ ಹೆಚ್ಚಾಗ ಬಹುದು. ಇದಲ್ಲದೆ ನಿಮ್ಮ ಯಾವುದೇ ಹಳೆಯ ಸಾಲವನ್ನು ಕೂಡ ನೀವು ತೆಗೆದು ಹಾಕಬಹುದು, ನಿಮ್ಮ ಕೈಯಲ್ಲಾದಷ್ಟು ನೀವು ಹೆಚ್ಚು ಪರಿಶ್ರಮವನ್ನು ವಹಿಸುತ್ತಾ ಇರಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 5:00 ರಿಂದ ರಾತ್ರಿ 8:00 ರವರಿಗೆ.

ಧನಸ್ಸು ರಾಶಿ:- ನೀವೇನಾದರೂ ವ್ಯಾಪಾರವನ್ನು ಮಾಡುತ್ತಾ ಇದ್ದರೆ ಈ ದಿನ ನಿಮಗೆ ಉತ್ತಮವಾದ ಲಾಭವು ಸಿಗಬಹುದು. ಮತ್ತು ಈ ದಿನ ನೀವು ಹೊಸ ಯೋಜನೆಗಳನ್ನು ಸಹ ನಡೆಸಬಹುದು ನಿಮ್ಮ ಸಹಭಾಗಿತ್ವದಲ್ಲಿ ವ್ಯವಹಾರ ಮಾಡಲು ಬಯಸಿದರೆ ಈ ದಿನ ನಿಮಗೆ ಒಳ್ಳೆಯ ದಿನವಾಗಿರುತ್ತದೆ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ- ಬಿಳಿ ಬಣ್ಣ ಸಮಯ – ಬೆಳಗ್ಗೆ 9:30 ರಿಂದ ಮಧ್ಯಾಹ್ನ 2:00 ರವರಿಗೆ.

ಮಕರ ರಾಶಿ:- ಈ ದಿನ ನಿಮ್ಮ ಕೆಲಸಕ್ಕೆ ಸಂಬಂಧ ಪಟ್ಟಂತೆ ಹಾಗೂ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ನೀವು ಉತ್ತಮವಾದ ಸಾಧನೆಯನ್ನು ಮಾಡುವ ಸಾಧ್ಯತೆ ಇದೆ. ಹಾಗೆಯೇ ನೀವೇನಾದರೂ ನಿರುದ್ಯೋಗಿಗಳಾ ಗಿದ್ದರೆ ಇಂದು ನಿಮಗೆ ಉತ್ತಮ ಉದ್ಯೋಗವಕಾಶವನ್ನು ಪಡೆಯ ಬಹುದು. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ- ಕೆಂಪು ಬಣ್ಣ ಸಮಯ – ಸಂಜೆ 5:30 ರಿಂದ 7:00 ರವರಿಗೆ.

See also  ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ಕುಂಭ ರಾಶಿ:- ಸಣ್ಣ ವಿಷಯಗಳನ್ನು ಕೂಡ ನಿಮ್ಮ ಮನಸ್ಸಿಗೆ ತೆಗೆದು ಕೊಳ್ಳುವ ನಿಮ್ಮ ಅಭ್ಯಾಸವನ್ನು ಕಡಿಮೆ ಮಾಡಿಕೊಳ್ಳಿ. ಇಲ್ಲದಿದ್ದಲ್ಲಿ ನೀವು ಯಾವಾಗಲೂ ನಿರಾಶರಾಗಿರುತ್ತಿರಿ. ಮತ್ತು ಹಾಗೂ ಇದು ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಕೂಡ ಬೀರುತ್ತದೆ. ಈ ದಿನ ಸಾಮಾನ್ಯಕ್ಕಿಂತ ಉತ್ತಮ ದಿನವಾಗಿರುತ್ತದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:00 ರವರಿಗೆ.

ಮೀನ ರಾಶಿ:- ಇಂದು ನೀವು ಇತರರ ಮಾತುಗಳನ್ನು ಕೇಳುವುದನ್ನು ಬಿಟ್ಟು ನಿಮ್ಮ ಮನಸ್ಸಿನ ಮಾತನ್ನು ಕೇಳಬೇಕು. ನಿಮಗೆ ಯಾವುದು ಒಳ್ಳೆಯದು ಮತ್ತು ಯಾವುದು ಒಳ್ಳೆಯದಲ್ಲ ಎಂಬುದು ಚೆನ್ನಾಗಿ ತಿಳಿದಿರುತ್ತದೆ. ಹಾಗಾಗಿ ನಿಮ್ಮ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಅಥವಾ ವ್ಯವಹಾರಕ್ಕೆ ಸಂಬಂಧಪಟ್ಟಂತೆ ನಿಮ್ಮ ಮನಸ್ಸಿನ ಮಾತನ್ನು ಕೇಳಿ. ಅದೃಷ್ಟ ಸಂಖ್ಯೆ – 06 ಅದೃಷ್ಟ ಬಣ್ಣ- ಹಸಿರು ಬಣ್ಣ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:00 ರವರಿಗೆ.

[irp]


crossorigin="anonymous">