ಮೇಷ ರಾಶಿ:- ವ್ಯಾಪಾರಸ್ಥರು ಕಾನೂನು ನಿಯಮಗಳನ್ನು ಈ ದಿನ ಕಟ್ಟು ನೆಟ್ಟಾಗಿ ಪಾಲಿಸಿ,ಇಲ್ಲದಿದ್ದರೆ ನೀವು ದೊಡ್ಡ ತೊಂದರೆಗೆ ಸಿಲುಕಬಹುದು. ಕಚೇರಿಯಲ್ಲಿ ಸಹ ಉದ್ಯೋಗಿಗಳೊಂದಿಗೆ ಒಳ್ಳೆಯ ವರ್ತನೆಯನ್ನು ಇಟ್ಟುಕೊಳ್ಳಿ. ನಿಮ್ಮ ಕಾರ್ಯ ಕ್ಷಮತೆ ಅವರು ಹೆಚ್ಚಾಗಿ ಒಪ್ಪದೇ ಇರಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ತಾಳ್ಮೆಯಿಂದಾಗಿ ಕೆಲಸ ಮಾಡುವುದು ಉತ್ತಮ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಮಧ್ಯಾಹ್ನ 2:00 ರಿಂದ ಸಂಜೆ 5:00 ರವರಿಗೆ.
ವೃಷಭ ರಾಶಿ:- ಕೆಲವು ಕಾರಣದಿಂದಾಗಿ ನೀವು ಈ ಹಿಂದೆ ಪ್ರಮುಖ ಕೆಲಸಗಳು ಮಧ್ಯದಲ್ಲಿ ಸಿಲುಕಿಕೊಂಡಿದ್ದರೆ ಆ ಕೆಲಸಗಳು ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ ಹಾಗೂ ಈ ದಿನ ಕಚೇರಿಯಲ್ಲಿ ಉದ್ಯೋಗಿಗಳು ಸಹ ಚೆನ್ನಾಗಿ ನೋಡಿಕೊಳ್ಳಿ.ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಬೆಳಗ್ಗೆ 6: 30 ರಿಂದ ಮಧ್ಯಾಹ್ನ 12:30 ರವರಿಗೆ.
ಮಿಥುನ ರಾಶಿ:- ಕಚೇರಿಯ ವಾತಾವರಣ ಈ ದಿನ ಚೆನ್ನಾಗಿರುತ್ತದೆ. ನಿಮ್ಮ ಸಹ ಉದ್ಯೋಗಿಗಳು ನಿಮಗೆ ಸಹಾಯ ಮಾಡುತ್ತಾರೆ. ಹಾಗೂ ಇಂದಿನ ಎಲ್ಲಾ ಕೆಲಸಗಳನ್ನು ಕೂಡ ಸಮಯಕ್ಕೆ ಸರಿಯಾಗಿ ಪೂರ್ಣ ಗೊಳಿಸಲು ಸಾಧ್ಯವಾಗುತ್ತದೆ. ನಿಮ್ಮ ಮೇಲೆ ವಿಶ್ವಾಸವನ್ನು ಇಡುತ್ತಾರೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಬೆಳಗ್ಗೆ 7:00 ರಿಂದ ಮಧ್ಯಾಹ್ನ 1:00ರವರಿಗೆ.
ಕರ್ಕಾಟಕ:- ಈ ದಿನ ಕಚೇರಿಯಲ್ಲಿ ಸಹ ಉದ್ಯೋಗಿಗಳೊಂದಿಗೆ ನಿಮ್ಮ ನಡುವಳಿಕೆಯನ್ನು ಉತ್ತಮವಾಗಿ ಇಟ್ಟುಕೊಳ್ಳಿ. ಅನಗತ್ಯವಾಗಿ ಚರ್ಚೆಗಳನ್ನು ಮಾಡುವುದರಿಂದ ದೂರವಿರಿ ಇಲ್ಲದಿದ್ದರೆ ನಿಮ್ಮ ಒಂದು ಸಣ್ಣ ತಪ್ಪು ಕೂಡ ನಿಮಗೆ ತುಂಬಾ ಹೆಚ್ಚು ನೋವುಂಟು ಮಾಡ ಬಹುದು. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಗ್ಗೆ 8:00 ರಿಂದ ಮಧ್ಯಾಹ್ನ 2:00 ರವರಿಗೆ.
ಸಿಂಹ ರಾಶಿ:- ಈ ದಿನ ತುಂಬಾನೇ ಒಳ್ಳೆಯದಾಗಿರುತ್ತದೆ. ಇವತ್ತೇನಾ ದರೂ ನೀವು ಹಿಂದೆ ಪರೀಕ್ಷೆಯನ್ನು ಬರೆದಿದ್ದರೆ, ಈ ದಿನ ನೀವು ಒಳ್ಳೆಯ ಫಲಿತಾಂಶ ವನ್ನು ಪಡೆಯುವ ಸಾಧ್ಯತೆ ಇರುತ್ತದೆ. ಈ ರೀತಿ ನೀವು ಶ್ರಮವನ್ನು ವಹಿಸಿದರೆ ಶೀಘ್ರದಲ್ಲಿ ನೀವು ಉಜ್ವಲ ಭವಿಷ್ಯವನ್ನು ಈಡೇರಿಸಬಹುದು. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಮಧ್ಯಾಹ್ನ 12:00 ರಿಂದ ಸಂಜೆ 4:00 ರವರಿಗೆ.
ಕನ್ಯಾ ರಾಶಿ:- ಮೊದಲನೇದಾಗಿ ನಿಮ್ಮ ಕೆಲಸದ ಬಗ್ಗೆ ಮಾತನಾಡುವು ದಾದರೆ ಈ ದಿನ ಸಂಬಳ ಪಡೆಯುವಂತಹ ಜನರು ಸೋಮಾರಿತನ ವನ್ನು ಬಿಟ್ಟು ಹೆಚ್ಚು ಕೆಲಸದ ಮೇಲೆ ಗಮನಹರಿಸಬೇಕು ಇಲ್ಲದಿದ್ದರೆ ನಿಮ್ಮ ಕೆಲವು ಕೆಲಸಗಳು ಅಪೂರ್ಣವಾಗಿ ಉಳಿಯುತ್ತದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 6:00 ರಿಂದ ರಾತ್ರಿ 9:00 ರವರಿಗೆ.
ತುಲಾ ರಾಶಿ:- ಈ ದಿನ ನಿಮಗೆ ಕೆಲಸದ ವಿಷಯದಲ್ಲಿ ಈ ದಿನ ಉತ್ತಮ ವಾದ ದಿನವಾಗಿರುತ್ತದೆ. ಕಚೇರಿಯ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ನೀವು ಆನಂದವನ್ನು ಅನುಭವಿಸುತ್ತೀರಿ.ಅಲ್ಲದೇ ನಿಮ್ಮ ಎಲ್ಲಾ ಕೆಲಸವನ್ನು ಕೂಡ ಸಮಯಕ್ಕೆ ಸರಿಯಾಗಿ ನಿಮಗೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 6:00 ರಿಂದ 10:00 ರವರಿಗೆ.
ವೃಶ್ಚಿಕ ರಾಶಿ:- ನೀವೇನಾದರೂ ವ್ಯಾಪಾರ ಮಾಡುತ್ತಾ ಇದ್ದರೆ ಈ ದಿನ ನಿಮಗೆ ಉತ್ತಮವಾದ ದಿನವಾಗಿರುತ್ತದೆ. ನಿಮ್ಮ ವ್ಯಾಪಾರ ವಿಸ್ತರಿಸ ಬಹುದು. ಹಾಗೂ ನೀವು ಹೊಸ ಕೆಲಸವನ್ನು ಆರಂಭಿಸಲು ಪ್ರಯತ್ನಿಸಿ ದರೆ ಮತ್ತು ಅದರಲ್ಲಿ ಯಾವುದೇ ಅಡಚಣೆ ಇದ್ದರೆ ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ಈ ದಿನ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 8:00 ರಿಂದ 11:00 ರವರಿಗೆ.
ಧನಸ್ಸು ರಾಶಿ:- ದಿನದ ಆರಂಭವು ಈ ದಿನ ನಿಮಗೆ ಉತ್ತಮವಾಗಿರು ತ್ತದೆ. ನಿಮ್ಮ ಮನಸ್ಸು ಕೂಡ ಸಂತೋಷವಾಗಿರುತ್ತದೆ. ಮತ್ತು ನೀವು ಧನಾತ್ಮಕವಾಗಿ ಭಾವಿಸುತ್ತಿರುತ್ತೀರಿ ಹಣದ ದೃಷ್ಟಿಯಿಂದ ಈ ದಿನ ಬಹಳ ಮುಖ್ಯವಾದ ದಿನವಾಗಿರುತ್ತದೆ. ದೀರ್ಘಕಾಲದ ಹಣದ ಪರಿಸ್ಥಿತಿ ಈ ದಿನ ಸರಿಯಾಗಬಹುದು. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ- ಕೇಸರಿ ಬಣ್ಣ ಸಮಯ – ಸಂಜೆ 6:00 ರಿಂದ ರಾತ್ರಿ 8:30 ರವರಿಗೆ.
ಮಕರ ರಾಶಿ:- ನೀವು ಇಂದು ಕಚೇರಿಯಲ್ಲಿ ಹೆಚ್ಚು ಗೌರವವನ್ನು ಪಡೆಯಬಹುದು ವ್ಯಾಪಾರ ಮಾಡುತ್ತಿರುವ ಜನರು ಇಂದು ಹೂಡಿಕೆ ಯನ್ನು ಮಾಡಿ. ಇಂದು ನೀವು ಯಾವುದೇ ಅಪಾಯವನ್ನು ತೆಗೆದು ಕೊಂಡರೆ ತಪ್ಪು ಫಲಿತಾಂಶವನ್ನು ಎದುರಿಸಬೇಕಾಗುತ್ತದೆ. ಕುಟುಂಬದ ಜೀವನದಲ್ಲಿ ಈ ದಿನ ಸಂತೋಷ ಮತ್ತು ಶಾಂತಿ ಇರುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 6:00 ರಿಂದ 8:00 ರವರಿಗೆ.
ಕುಂಭ ರಾಶಿ:- ಹಣದ ವಿಷಯದಲ್ಲಿ ಇಂದು ನೀವು ತೆಗೆದುಕೊಳ್ಳುವ ನಿರ್ಧಾರವನ್ನು ಬಹಳ ವಿಚಾರ ಮಾಡಿ ತೆಗೆದುಕೊಳ್ಳಲು ನಿಮಗೆ ಸೂಚಿಸಲಾಗಿದೆ. ಹಾಗೂ ವಿಶೇಷವಾಗಿ ನೀವೇನಾದರೂ ಸಾಲವನ್ನು ತೆಗೆದುಕೊಂಡಿದ್ದರೆ ಮುಂದಿನ ದಿನಗಳಲ್ಲಿ ಅದನ್ನು ಆದಷ್ಟು ಬೇಗ ಮರುಪಾವತಿಸಲು ಪ್ರಯತ್ನಿಸಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 8:00 ರವರಿಗೆ.
ಮೀನ ರಾಶಿ:- ಈ ದಿನ ನೀವು ನಿಮ್ಮ ಪ್ರತಿಕೂಲ ಸಂದರ್ಭದಲ್ಲಿ ನೀವು ತಾಳ್ಮೆಯಿಂದ ಇರಿ. ಕಚೇರಿಯಲ್ಲಿ ನಿಮ್ಮ ಪ್ರಮುಖ ಕೆಲಸದಲ್ಲಿ ಅಡಚಣೆಗಳು ಇರಬಹುದು ಬಹುಶಹ ಮೇಲಧಿಕಾರಿಗಳು ಸಹ ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ. ಇನ್ನು ವ್ಯಾಪಾರಸ್ಥರು ಈ ದಿನ ವ್ಯಾಪಾರ ಮಾಡುವಾಗ ಆದಷ್ಟು ಚರ್ಚೆಯಿಂದ ದೂರವಿರಲು ನಿಮಗೆ ಸೂಚಿಸಲಾಗಿದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ- ನೀಲಿ ಬಣ್ಣ ಸಮಯ – ಸಂಜೆ 7:30 ರಿಂದ 8:00 ರವರಿಗೆ.