ಕೋಪ ಅತಿ ಯೋಚನೆ ಕೆಟ್ಟ ಕಾಮ ಚಟಗಳನ್ನು ಕಡಿಮೆ ಮಾಡಿಕೊಳ್ಳೊದು ಹೇಗೆ ಈ ಸನ್ಯಾಸಿಯ ಚಿಕ್ಕ ಕಥೆ ಕೇಳಿ.. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಕೋಪ ಅತೀ ಯೋಚನೆ, ಸನ್ಯಾಸಿ ಕಥೆ……!!

ಒಂದು ಊರಿನ ಪಕ್ಕದಲ್ಲಿ ದೊಡ್ಡದಾದ ಕಾಡು ಇತ್ತು. ಆ ಕಾಡಿನಲ್ಲಿ ಪುರಾತನ ಈಶ್ವರನ ದೇವಾಲಯವಿತ್ತು. ಅಲ್ಲಿ ಒಬ್ಬ ಸಾಧು ಒಂದು ಆಶ್ರಮವನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದರು. ಅವರನ್ನು ಕಾಣಲು ಅಲ್ಲಿರುವ ಭಕ್ತಾದಿಗಳಿಗೆ ನೀವು ಒಳ್ಳೆಯವರಾಗಿ ಎಂದು ಭೋದಿಸುತ್ತಿ ದ್ದರು. ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ ಪ್ರಾಮಾಣಿಕರಾಗಿ ಬದುಕ ಬೇಕು ಸಜ್ಜನರಾಗಬೇಕು ಎಂದು ಹೇಳುತ್ತಿದ್ದರು.

ದಿನವೂ ಅವರ ಪ್ರವಚನವನ್ನು ಕೇಳಲು ಅನೇಕ ಭಕ್ತಾದಿಗಳು ಆ ದೇವಸ್ಥಾನಕ್ಕೆ ಬರುತ್ತಿದ್ದರು. ಅಲ್ಲಿ ಬಂದವರೆಲ್ಲರೂ ಕೂಡ ಸನ್ಯಾಸಿಯ ಮಾತುಗಳಿಗೆ ಪ್ರಭಾವಿತರಾಗುತ್ತಿದ್ದರು. ಸನ್ಯಾಸಿಗಳು ಯಾರಲ್ಲಿಯೂ ಇಂತಹದ್ದನ್ನು ಕೊಡಿ ಎಂದು ಕೇಳಿದವರಲ್ಲ. ಆದರೆ ಅನೇಕ ಜನರು ಹಣ ಒಡವೆ ಹೀಗೆ ಮುಂತಾದ ಬೆಲೆ ಬಾಳುವಂತಹ ವಸ್ತುಗಳನ್ನು ಕೊಡುತ್ತಿದ್ದರು. ಸಾಧುಗಳು ಈ ವಸ್ತುಗಳನ್ನು ತಮ್ಮಲ್ಲಿ ಇಟ್ಟುಕೊಳ್ಳದೆ

ಅವರ ಬಳಿ ಬಂದು ಕಷ್ಟ ಹೇಳಿಕೊಳ್ಳುತ್ತಿದ್ದಂತಹ ಭಕ್ತಾದಿಗಳಿಗೆ ಅವುಗಳನ್ನು ಹಂಚುತ್ತಿದ್ದರು. ಒಂದು ದಿನ ಸಾಧುಗಳು ತುಂಬಾ ಜನರು ಸೇರಿದಂತಹ ಸಭೆಯಲ್ಲಿ ಪ್ರವಚನವನ್ನು ಮಾಡುತ್ತಿದ್ದರು. ಆಗ ಒಬ್ಬ ಮನುಷ್ಯ ಬೊಬ್ಬಿಡುತ್ತಾ ಬರುತ್ತಿದ್ದುದನ್ನು ಸಾಧುಗಳು ದೂರದಿಂದಲೇ ಗಮನಿಸಿದರು. ಆ ಮನುಷ್ಯನಿಗೆ ಬಹುಶಹ ಏನೋ ಆಗಿದೆ ಅಥವಾ ಗಾಯಗಳಾಗಿರಬಹುದು ಅಥವಾ ಅವನು ಹುಚ್ಚನಾಗಿರಬಹುದು ಎಂದು ಸಭಿಕರೆಲ್ಲರೂ ಕೂಡ ಭಾವಿಸಿದರು.

ಆ ಮನುಷ್ಯ ಬಂದು ಸಾಧುವಿಗೆ ನಮಸ್ಕರಿಸಿದ. ಪ್ರತಿಯೊಬ್ಬರೂ ಅವನನ್ನೇ ನೋಡುತ್ತಿದ್ದರು. ಅವನು ಸಾಧುವಿನ ಬಳಿ ಸ್ವಾಮೀಜಿ ನನಗೆ ನನ್ನ ಮೇಲೆ ಬೇಸರವಾಗಿದೆ. ನನಗೆ ನನ್ನ ಕೋಪವನ್ನು ನಿಯಂತ್ರಿಸಲು ಆಗುತ್ತಿಲ್ಲ. ನನಗೆ ಬಲು ಬೇಗನೆ ಕೋಪ ಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಬಯಸಿದ್ದೇನೆ. ಆ ಸಮಸ್ಯೆ ನನ್ನನ್ನು ಬಿಟ್ಟು ಹೋಗುತ್ತಿಲ್ಲ ಎಂದು ಹೇಳಿದ. ಸನ್ಯಾಸಿಗಳು ಆ ಮನುಷ್ಯನ ಮಾತುಗಳನ್ನು ಗಮನದಲ್ಲಿಟ್ಟು ಕೇಳಿದನು.

ಆಗ ಸನ್ಯಾಸಿಗಳು ಮಾನವ ನಾನು ನಿನ್ನ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸುತ್ತೇನೆ. ಆ ಬಗ್ಗೆ ಆಲೋಚನೆ ಮಾಡಲು ನನಗೆ ಒಂದು ದಿನದ ಸಮಯ ಬೇಕು ನಿನ್ನ ಸಮಸ್ಯೆಗೆ ಪರಿಹಾರ ಏನೆಂದು ಅರಿಯಲು ನೀನು ನಾಳಿದ್ದು ಬಾ ಎಂದು ಹೇಳಿದರು. ಸಾಧುವಿನ ಸುತ್ತ ಇದ್ದಂತಹ ಜನರಿಗೆ ಇದನ್ನು ಕೇಳಿ ಆಶ್ಚರ್ಯವಾಯಿತು. ಒಬ್ಬ ಎದ್ದು ನಿಂತು ಸ್ವಾಮೀಜಿ

ನೀವು ಶಿವಭಕ್ತರು ಬಲು ಪರಿಣಿತರು ನೀವು ಈಗಲೇ ಇವನ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಅದಕ್ಕೆ ಸಮಯ ಕೇಳಿದ್ದು ಏಕೆ ಎಂದು ಕೇಳಿದ. ನಾನು ಇವನಿಗೆ ಒಂದು ಕಾರ್ಯ ರೂಪದ ಪರಿಹಾರ ನೀಡಲು ಹಾಗೆ ಮಾಡಿದೆ ಎಂದರು ಸ್ವಾಮೀಜಿ. ಆ ಕೋಪಿಷ್ಟ ಒಂದು ದಿನ ಬಿಟ್ಟು ವಾಪಸ್ಸು ಸ್ವಾಮೀಜಿಯ ಬಳಿ ಬಂದ. ಅವನಿಗೆ ಆಶ್ರಮದಲ್ಲಿ ಸ್ವಾಮೀಜಿ ಕಾಣಿಸಲಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *