ಹಣ ಇಡುವ ಸ್ಥಳದಲ್ಲಿ ಇದನ್ನು ಬಚ್ಚಿಡಿ ಮುಂದೆ ನಡೆಯೋ ಚಮತ್ಕಾರ ನೋಡಿ……..!!
ಮನೆಗೆ ಬರುವ ಹಣಕ್ಕೂ ಮನೆಯಲ್ಲಿರುವ ಬೀರುವಿಗೂ ಒಂದು ಸಂಬಂಧ ಇದೆ ಎಂದು ಹೇಳುತ್ತಾರೆ ವಾಸ್ತು ತಜ್ಞರು. ಒಂದೆರಡು ತಪ್ಪುಗಳಿಂದ ಎಲ್ಲವೂ ಹಾಳಾಗುತ್ತದೆ. ಹಾಗಾಗಿ ಮನೆಯ ಬೀರುವಿನ ವಿಚಾರವಾಗಿ ಯಾವ ತಪ್ಪನ್ನು ಮಾಡಬಾರದು ಅನ್ನುವುದನ್ನು ತಿಳಿದಿರಬೇಕು. ಅನೇಕ ಜನ ತಮ್ಮ ಹಣ ಮತ್ತು ಆಭರಣಗಳನ್ನು ಬೀರುವಿನಲ್ಲಿ ಲಾಕ್ ಮಾಡಿ ಇಡುತ್ತಾರೆ.
ಆ ಹಣ ಮತ್ತು ಒಡವೆಗಳನ್ನು ಲಕ್ಷ್ಮಿ ದೇವಿ ಎಂದು ಭಾವಿಸಲಾಗುತ್ತದೆ. ಹಾಗಾಗಿ ಬೀರು ಹೇಗಿರಬೇಕು ಎನ್ನುವುದು ಸಹ ಮುಖ್ಯವಾಗಿರುತ್ತದೆ. ಜ್ಯೋತಿಷಿಗಳು ಮತ್ತು ವಾಸ್ತು ಶಾಸ್ತ್ರಜ್ಞರು ಒಂದು ವಿಷಯವನ್ನು ಮರೆಯಬಾರದು ಎಂದು ಹೇಳುತ್ತಾರೆ. ವಾಸ್ತು ಪ್ರಕಾರ ಲಕ್ಷ್ಮೀದೇವಿ ನೆಲೆಸಿರುವಂತಹ ಮನೆ ಅಥವಾ ಸ್ಥಳ ಅತ್ಯಂತ ಸುಂದರ ಹಾಗೂ ಸ್ವಚ್ಛವಾಗಿ ಇರಬೇಕು.
ಹಾಗೆಯೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿ ದೇವಿ ತುಂಬ ಸೌಮ್ಯ ಸ್ವಭಾವದ ತಾಯಿಯಾಗಿದ್ದು ಎಲ್ಲವೂ ಅಚ್ಚುಕಟ್ಟಾಗಿರಬೇಕು ಅಂತ ಬಯಸುತ್ತಾರೆ. ತಾಯಿ ಲಕ್ಷ್ಮಿ ದೇವಿಗೆ ಕೋಪ ಬಂದರೆ ಸುತ್ತಮುತ್ತಲಿನ ವಾತಾವರಣ ಇಷ್ಟವಾಗದೇ ಇದ್ದರೆ ಮನೆ ಬಿಟ್ಟು ಹೊರಗಡೆ ಹೋಗುತ್ತಾಳೆ. ಲಕ್ಷ್ಮಿ ದೇವಿಯನ್ನು ಅಂದರೆ ಹಣವನ್ನು ಇಡುವಂತಹ ಬೀರುವಿನಲ್ಲಿ ದೊಡ್ಡ ಕನ್ನಡಿ ಹಾಗೂ ಭಾರವಾದ ವಸ್ತುಗಳನ್ನು ಹಾಕಬಾರದು.
ಭಾರವನ್ನು ಹಾಕಿದರೆ ಅದು ತಾಯಿಗೆ ಒಂದು ರೀತಿಯ ತೂಕವಾದಂತೆ ಭಾಸವಾಗುತ್ತದೆ. ಇದರಿಂದ ತಾಯಿ ಕೋಪಗೊಳ್ಳುತ್ತಾರೆ, ಮನೆ ಬಿಟ್ಟು ಹೋಗುತ್ತಾರೆ ಎಂದು ಹೇಳುತ್ತಾರೆ ಆಧ್ಯಾತ್ಮಿಕ ಪಂಡಿತರು. ಬೀರುವಿನ ಹೊರಗಡೆ ಕನ್ನಡಿ ಇರಬಾರದು. ಯಾಕೆ ಎಂದರೆ ಕನ್ನಡಿ ಇರುವಂತಹ ಜಾಗಕ್ಕೆ ನಾವು ಬಂದು ಅಲಂಕಾರಕ್ಕೆ ಕುಳಿತುಕೊಂಡರೆ ತಾಯಿಗೆ ಕೋಪ ಬರುತ್ತದೆ. ಅವಳನ್ನು ನಿರ್ಲಕ್ಷಿಸಿದರೆ ಬೀರು ಖಾಲಿಯಾಗುತ್ತದೆ ಎಂದು ಹೇಳುತ್ತಾರೆ ವಿದ್ವಾಂಸರು.
ಇತ್ತೀಚಿನ ದಿನಗಳಲ್ಲಿ ಹಣವನ್ನು ಮತ್ತು ಬಂಗಾರವನ್ನು ಇಡುವುದಕ್ಕೆ ಬೀರುವನ್ನು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಬಹಳ ಹಣ ಮತ್ತು ಚಿನ್ನಾಭರಣ ಇದ್ದವರು ಬ್ಯಾಂಕಿನ ಲಾಕರ್ ಗಳಲ್ಲಿ ಇಡುತ್ತಾರೆ. ಆದರೆ ಅದನ್ನು ಮನೆಯಲ್ಲಿ ಇಡುವವರು ದಕ್ಷಿಣ ಮತ್ತು ಪಶ್ಚಿಮದ ನಡುವೆ ನೈರುತ್ಯ ದಿಕ್ಕಿನಲ್ಲಿ ಕಪಾಟಿನಲ್ಲಿ ಇಡಬೇಕು ಅಂತ ಸೂಚಿಸುತ್ತಾರೆ. ಬೀರುವನ್ನು ಯಾವಾಗಲೂ ನೈರುತ್ಯ ದಿಕ್ಕಿನಲ್ಲಿ ಇಡಬೇಕು.
ಬೀರುವಿನ ಬಾಗಿಲನ್ನು ತೆಗೆಯುವಾಗ ಒಳ್ಳೆಯ ಪರಿಮಳ ಬರಬೇಕು. ಬೀರುವಿನ ಮೇಲೆ ಯಾವುದೇ ದೇವರ ಫೋಟೋಗಳನ್ನು ಅಂಟಿಸ ಬಾರದು. ಬೀರುವಿನಲ್ಲಿ ಕರ್ಪೂರ ಹಾಗೂ ಸುಗಂಧ ದ್ರವ್ಯಗಳನ್ನು ಇಡಬೇಕು. ಹಾಗೂ ಸ್ವಸ್ತಿಕ್ ಸಂಕೇತವನ್ನು ಸರಿಯಾದ ಕ್ರಮದಲ್ಲಿ ಬರೆಯಬೇಕು. ಹಾಗೂ ಒಂದು ಬಿಳಿ ಕಾಗದದ ಮೇಲೆ ಕುಬೇರನ ರಂಗೋಲಿಯನ್ನು ನೀಲಿ ಬಣ್ಣದಲ್ಲಿ ಬರೆದು ಅದರ ನಾಲ್ಕು ಕಡೆ ಅರಿಶಿಣ ಕುಂಕುಮವನ್ನು ಹಚ್ಚಿ ಬೀರುವಿನಲ್ಲಿ ಹಣ ಇಡುವ ಸ್ಥಳದಲ್ಲಿ ಇಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವೀಡಿಯೋ ಪೂರ್ಣವಾಗಿ ವೀಕ್ಷಿಸಿ.