ಅವಕಾಶ ಸಿಗಬೇಕು ಅಂದ್ರೆ ಈತನ ಜೊತೆ ಮಲಗಬೇಕಂತೆ…..! ದೇಶಕ್ಕೆ ಮೆಡಲ್ ತಂದ ಹುಡುಗಿಯರ ಪರಿಸ್ಥಿತಿ ಹೇಗಿದೆ ಗೊತ್ತಾ…….??
ನಮ್ಮ ಸಿಸ್ಟಮ್ ಹೀಗೆ ಯಾಕೆ ಎನ್ನುವುದು ಗೊತ್ತಾಗುವುದಿಲ್ಲ. ನಾವು ಎಷ್ಟೇ ಮುಂದುವರೆದಿದ್ದರೂ ಅದೊಂದು ವಿಚಾರದಲ್ಲಿ ಪದೇಪದೇ ಹಿಂದೆ ಬೀಳುತ್ತೇವೆ. ಹೆಣ್ಣು ಮಕ್ಕಳನ್ನು ದೇವತೆ ಎಂದು ಪೂಜಿಸುವಂತಹ ಪುಣ್ಯ ಭೂಮಿ ನಮ್ಮದು. ಆದರೆ ಮತ್ತೊಂದು ಕಡೆ ಇವತ್ತಿಗೂ ಕೂಡ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷಿತ ಸ್ಥಾನ ಇಲ್ಲ.
ಅದಕ್ಕೆ ಈ ಕುಸ್ತಿ ಅಖಾಡವೇ ಸಾಕ್ಷಿ. ಕಳೆದ ವರ್ಷದಲ್ಲಿ ನಮ್ಮ ದೇಶದ ಹೆಮ್ಮೆಯ ಕುಸ್ತಿಪಟುಗಳು ಅದೊಂದು ಹೋರಾಟ ಶುರು ಮಾಡಿದ್ದರು. ಈ ಹೋರಾಟದಲ್ಲಿ ಒಲಂಪಿಕ್ಸ್ ನಲ್ಲಿ ಪದಕವನ್ನು ಗೆದ್ದ ಬಜರಂಗ ಪೋನಿಯ, ಸಾಕ್ಷಿ ಮಲ್ಲಿಕ್, ವಿನೇಶ್ ಪೋಗಾಟ್ ರಂತಹ ಖ್ಯಾತ ಕುಸ್ತಿಪಟುಗಳು ಸಹ ಇದ್ದರು.
ಈ ಹೋರಾಟ ಮಾಡುವುದಕ್ಕೆ ಒಂದು ಕಾರಣ ಇತ್ತು. ರೆಸ್ಲಿಂಗ್ ಫೆಡರೇಶನ್ ನ ಅಧ್ಯಕ್ಷ. ಫ್ರಿಡ್ಜ್ ಭೂಶಣ್, ಶರಣ್ ಸಿಂಗ್ ಎಂಬಾತ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕವಾಗಿ ಕಿರುಕುಳ ಕೊಡುತ್ತಾನೆ. ಒಬ್ಬ ಅಪ್ರಾಪ್ತ ಯುವತಿಯ ಮೇಲೆ ಕೂಡ ಈತ ಲೈಂಗಿಕ ದೌರ್ಜನ್ಯ ಮಾಡಿದ್ದನಂತೆ. ಈ ಹೋರಾಟ ಶುರು ವಾದಾಗ ಅಧ್ಯಕ್ಷನನ್ನು ಪದವಿ ಇಂದ ಕಿತ್ತೆಸೆಯುತ್ತೇವೆ ಎಂಬ ಭರವಸೆ ಸಿಗುತ್ತದೆ.
ಆದರೆ ಆ ಭರವಸೆ ಕೇವಲ ಭರವಸೆಯಾಗಿ ಮಾತ್ರ ಉಳಿಯುತ್ತದೆ. ಈ ರೀತಿ ಲೈಂಗಿಕ ದೌರ್ಜನ್ಯ ಮಾಡಿದಂತಹ ಈ ಅಧ್ಯಕ್ಷನ ವಿರುದ್ಧ ಯಾವುದೇ ಆಕ್ಷನ್ ತೆಗೆದುಕೊಂಡಿಲ್ಲ. ಇದು ಕುಸ್ತಿಪಟುಗಳನ್ನು ಕೆರಳಿಸಿ ಬಿಟ್ಟಿದೆ. ಜನವರಿಯಲ್ಲಿ ಖ್ಯಾತ ಕುಸ್ತಿಪಟು ವಿನೇಶ್ ಪೋಗಾಟ್ ಅವರಿಗೆ ಕೆಲ ಯುವ ಕುಸ್ತಿಪಟುಗಳ ಕರೆಗಳು ಬರುವುದಕ್ಕೆ ಶುರುವಾಗುತ್ತದೆ. ಲಕ್ನೋದಲ್ಲಿ ಒಂದು ಇಂಟರ್ ನ್ಯಾಷನಲ್ ಕುಸ್ತಿ ಚಾಂಪಿಯನ್ ಶಿಪ್ ನಡೆಯುತ್ತಿತ್ತು.
ಈ ಸಂದರ್ಭದಲ್ಲಿ ಬಂದ ಕರೆಗಳು ಅಲ್ಲಿನ ನೈಜ್ಯ ಚಿತ್ರಣವನ್ನು ಬಿಚ್ಚಿಟ್ಟಿದ್ದವು. ಇಲ್ಲಿ ನಿಮಗೆ ಮತ್ತೊಂದು ವಿಚಾರ ಗೊತ್ತಿರಲೇಬೇಕು. ಈ ಫ್ರಿಡ್ಜ್ ಭೂಶಣ್ ಸಿಂಗ್ ಇದಾನಲ್ಲ ಇವರು ರೆಸ್ಲಿಂಗ್ ಫೆಡರೇಶನ್ ನ ಅಧ್ಯಕ್ಷ ಮಾತ್ರವಲ್ಲ. ಬಿಜೆಪಿಯ ನಾಯಕ ಕೂಡ ಹೌದು. ಅಷ್ಟೇ ಅಲ್ಲ ಸಂಸದ ಕೂಡ ಹೌದು. ಇದೇ ಕಾರಣಕ್ಕೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.
ಹೋರಾಟ ಶುರುವಾಗುತ್ತಿದ್ದಂತೆ ಲಕ್ನೋದಲ್ಲಿ ನಡೆಯುತ್ತಿದ್ದಂತಹ ಕ್ಯಾಂಪ್ ಅನ್ನು ಕ್ಯಾನ್ಸಲ್ ಏನೋ ಮಾಡುತ್ತಾರೆ. ಆದರೆ ವ್ಯವಸ್ಥೆ ಎನ್ನುವುದು ಸರಿಯಾಗುವುದಿಲ್ಲ. ಕುಸ್ತಿಯಲ್ಲಿ ಪದಕವನ್ನು ಗೆದ್ದ ಹೆಣ್ಣು ಮಕ್ಕಳೇ ಮುಂದೆ ನಮಗೆ ಭಾಗವಹಿಸುವುದಕ್ಕೆ ಸಾಧ್ಯವಿಲ್ಲ ಎಂಬ ಮಾತನ್ನು ಹೇಳುತ್ತಿದ್ದಾರೆ. ಇದೇ ರೀತಿ ಆದರೆ ಯಾವ ಹೆಣ್ಣು ಮಕ್ಕಳು ಕೂಡ ಕುಸ್ತಿ ಅಖಾಡಕ್ಕೆ ಬರುವುದಿಲ್ಲ ಅನ್ನುವುದನ್ನು ಹೇಳುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.