ತಿರುಪತಿಗೆ ತೆರಳಿದಾಗ ತಪ್ಪದೇ ಈ ಪುಣ್ಯಕ್ಷೇತ್ರಗಳಿಗೂ ಹೋಗಿ ಬನ್ನಿ…ತಿರುಪತಿ ಸಮೀಪ ಇರುವ ಕ್ಷೇತ್ರಗಳು..

ತಿರುಪತಿಗೆ ಹೋದಾಗ ತಪ್ಪದೆ ಈ ಪುಣ್ಯಕ್ಷೇತ್ರಗಳಿಗೂ ತೆರಳಿ…..!!

WhatsApp Group Join Now
Telegram Group Join Now

ತಿರುಮಲ ತಿರುಪತಿ ನಮ್ಮ ನೆರೆಯ ರಾಜ್ಯ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಇದೆ. ಈ ಕ್ಷೇತ್ರ ಕಲಿಯುಗ ಪ್ರತ್ಯಕ್ಷ ದೈವ ಶ್ರೀನಿವಾಸ ಸ್ವಾಮಿಯ ನೆಲೆ ನಿಂತಿರುವಂತಹ ಪುಣ್ಯಭೂಮಿ. ಶ್ರೀನಿವಾಸನ ದೇವರು ಮಹಿಮೆಯನ್ನು ಅರಿತುಕೊಂಡು ಪ್ರತಿದಿನವೂ ಸಾವಿರಾರು ಭಕ್ತರು ತಿರುಮಲ ಬೆಟ್ಟಕ್ಕೆ ಆಗಮಿಸಿ ತಮ್ಮ ಸ್ವಾಮಿಯ ದರ್ಶನವನ್ನು ಪಡೆದು ಪುನೀತರಾಗುತ್ತಾರೆ.

ತಿರುಮಲ ತಿರುಪತಿ ಎಂದರೆ ಶ್ರೀ ವೆಂಕಟೇಶ್ವರ ಸ್ವಾಮಿಯ ದೇಗುಲವಿರು ವಂತಹ ಸ್ಥಳ ಎಂದಷ್ಟೇ ಬಹುತೇಕ ಜನರ ಭಾವನೆ ಆಗಿರುತ್ತದೆ. ಆದರೆ ತಿರುಪತಿಯ ಸುತ್ತಮುತ್ತ ಇರುವಂತಹ ಹಾಗೂ ಭೇಟಿ ನೀಡಬಹುದಾ ದಂತಹ ಅನೇಕ ಧಾರ್ಮಿಕ ತಾಣಗಳು ಇದೆ. ಹಾಗಾದರೆ ಈ ದಿನ ತಿರುಮಲ ತಿರುಪತಿಯ ಸುತ್ತಮುತ್ತ ಇರುವಂತಹ ಹಾಗೂ ನಾವೆಲ್ಲರೂ ನೋಡಬೇಕಾಗಿರುವಂತಹ ಪುಣ್ಯಕ್ಷೇತ್ರಗಳ ಬಗ್ಗೆ ಈ ದಿನ ತಿಳಿದುಕೊಳ್ಳು ತ್ತಾ ಹೋಗೋಣ.


ಮೊದಲನೇಯದಾಗಿ ವರಾಹ ಸ್ವಾಮಿ ದೇವಾಲಯ, ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ದೇಗುಲದಿಂದ ಉತ್ತರಕ್ಕೆ ಸ್ವಾಮಿ ಪುಷ್ಕರಣಿಯ ಸಮೀಪವೇ ವರಾಹ ಸ್ವಾಮಿ ದೇವಾಲಯವಿದೆ. ತಿರುಪತಿ ಕ್ಷೇತ್ರದಲ್ಲಿ ವೆಂಕಟೇಶ್ವರ ಸ್ವಾಮಿಗೆ ನೆಲೆ ನಿಲ್ಲುವುದಕ್ಕೆ ಸ್ಥಳವನ್ನು ನೀಡಿದವರು ಇದೇ ಶ್ರೀ ವರಾಹ ಸ್ವಾಮಿಗಳು. ತಿರುಮಲ ಜಾಗದ ಮೂಲ ಒಡೆಯ ಶ್ರೀ ವರಾಹ ಸ್ವಾಮಿ. ಶ್ರೀನಿವಾಸ ಸ್ವಾಮಿಯು ವರಾಹ ಸ್ವಾಮಿಯಲ್ಲಿ ತಮಗೆ ನೆಲೆ ನಿಲ್ಲುವುದಕ್ಕೆ ಸ್ಥಳವನ್ನು ಕೇಳಿದಾಗ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ವರಾಹ ಸ್ವಾಮಿಯು ಪ್ರತಿಯಾಗಿ ನಮಗೇನು ದೊರಕುವುದು ಎಂದು ಕೇಳುತ್ತಾರೆ. ಆಗ ಶ್ರೀ ವೆಂಕಟೇಶ್ವರ ಸ್ವಾಮಿಯು ತನ್ನನ್ನು ನೋಡಲು ಬರುವಂತಹ ಭಕ್ತಾದಿಗಳು ಮೊದಲು ನಿಮ್ಮ ಸನ್ನಿಧಾನಕ್ಕೆ ಬಂದು ದರ್ಶನವನ್ನು ಪಡೆದು ಆನಂತರ ನನ್ನ ಸನ್ನಿಧಾನಕ್ಕೆ ಬಂದರೆ ಮಾತ್ರ ಅವರಿಗೆ ತಿರುಮಲ ಕ್ಷೇತ್ರದ ಯಾತ್ರೆ ಮಾಡಿದ ಸಂಪೂರ್ಣ ಫಲ ದೊರೆಯುತ್ತದೆ ಎಂದು ಒಂದು ಮಾತನ್ನು ನೀಡುತ್ತಾರೆ.

ಅಲ್ಲದೆ ಶ್ರೀ ವೆಂಕಟೇಶ್ವರ ಸ್ವಾಮಿಯು ತಾವು ವರಾಹ ಸ್ವಾಮಿಗಳಿಗೆ ಕೊಟ್ಟಂತಹ ಮಾತನ್ನು ಲೋಹದ ಹಾಳೆಯ ಮೇಲು ಸಹ ಬರೆಸುತ್ತಾರೆ. ಇಂದಿಗೂ ವರಾಹ ಸ್ವಾಮಿ ದೇಗುಲದಲ್ಲಿ ಆ ಒಪ್ಪಂದದ ಪತ್ರ ಇದೆ. ಹಾಗಾಗಿ ತಿರುಮಲ ತಿರುಪತಿಗೆ ತೆರಳಿದಾಗ ಆಗ ಮೊದಲು ವರಾಹ ಸ್ವಾಮಿಯವರ ದೇವಾಲಯಕ್ಕೆ ತೆರಳಿ ಅಲ್ಲಿಯೇ ಸಮೀಪದಲ್ಲಿರು ವಂತಹ ಪವಿತ್ರವಾದಂತಹ ಪುಷ್ಕರಣಿಯಲ್ಲಿ ಸ್ನಾನವನ್ನು ಮಾಡಿ ಆನಂತರ ವರಾಹ ಸ್ವಾಮಿಗಳ ದರ್ಶನವನ್ನು ಮಾಡಬೇಕು.

ತದನಂತರ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ದೇವರ ದರ್ಶನವನ್ನು ಪಡೆಯುವುದು ಈ ಕ್ಷೇತ್ರಕ್ಕೆ ಭೇಟಿ ನೀಡುವಂತಹ ಭಕ್ತಾದಿಗಳ ವಾಡಿಕೆ. ಎರಡನೆಯದಾಗಿ ಪದ್ಮಾವತಿ ಅಮ್ಮನವರ ದೇವಸ್ಥಾನ ಪದ್ಮಾವತಿ ಅಮ್ಮನವರ ದೇವಾಲಯವು ತಿರುಮಲ ಬೆಟ್ಟದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಹಲಮೇಲು ಮಂಗಾಪುರ ಎಂಬಲ್ಲಿ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">