ಅದೃಷ್ಟದಲ್ಲಿ ಏರಿಳಿತ ಒಂದು ಶುಭ ವಾರ್ತೆ ಕೇಳುವಿರಿ ಒಂದು ಚಿಂತೆ ಕಾಡಲಿದೆ ಶನಿ ಕೇತು ಸಂಚಾರ ಧೂಳೆಬ್ಬಿಸಲಿದೆ…ಧನಸ್ಸು ರಾಶಿಗೆ ಮೇ ಭವಿಷ್ಯ

ಧನಸ್ಸು ರಾಶಿ ಮೇ ತಿಂಗಳ ಮಾಸ ಭವಿಷ್ಯ 2023……!!

WhatsApp Group Join Now
Telegram Group Join Now

ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರತಿ ತಿಂಗಳು ಕೂಡ ಎಲ್ಲಾ ರಾಶಿಯ ಮೇಲೆ ಗ್ರಹಗಳ ಬದಲಾವಣೆಯಿಂದ ಕೆಲವು ಪರಿಣಾಮಗಳು ಉಂಟಾಗುತ್ತದೆ. ಒಂದೊಂದು ರಾಶಿಯಲ್ಲಿ ಒಂದೊಂದು ರೀತಿಯ ಬದಲಾವಣೆಗಳು ಉಂಟಾಗುತ್ತದೆ ಅದೇ ರೀತಿಯಾಗಿ ಈ ದಿನ ಧನಸ್ಸು ರಾಶಿಯವರಿಗೆ ಮೇ ತಿಂಗಳಲ್ಲಿ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ.

ಹಾಗೆ ಯಾವ ರೀತಿಯ ಶುಭಫಲಗಳನ್ನು ಪಡೆದುಕೊಳ್ಳುತ್ತಾರೆ ಹಾಗೂ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಯಾವ ಒಂದು ವಿಚಾರವಾಗಿ ಅವರು ಹೆಚ್ಚು ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಧನಸ್ಸು ರಾಶಿಯವರ ಮೇ ತಿಂಗಳ ಭವಿಷ್ಯ ನೋಡುವುದಾದರೆ ಪಂಚಮ ಭಾವದಲ್ಲಿ ಚತುರ್ ಗ್ರಹ ಯುತಿಯಾಗಿದೆ. ಅಂದರೆ ನಾಲ್ಕು ಗ್ರಹಗಳು

ಪೂರ್ವ ಪುಣ್ಯ ಸ್ಥಾನದಲ್ಲಿ ಇದೆ. ಈ ಒಂದು ಗ್ರಹಗಳ ಬದಲಾವಣೆ ಯಿಂದ ನಿಮ್ಮ ಅದೃಷ್ಟಗಳಲ್ಲಿ ಏರಿಳಿತಗಳು ಕಂಡುಬರುತ್ತದೆ ಅಂದರೆ ಕಷ್ಟಗಳು ಎಷ್ಟಿರುತ್ತದೆಯೋ ಅಷ್ಟೇ ಸುಖವೂ ಕೂಡ ಇರುತ್ತದೆ. ಯಾರಿಗೆಲ್ಲ ವಿವಾಹ ಆಗಿರುವುದಿಲ್ಲವೋ ಅವರಿಗೆ ಯೋಚನೆಗಳು ಹೆಚ್ಚಾಗುವಂತದ್ದು ಹಾಗೆಯೇ ಯಾರಿಗೆ ಮಕ್ಕಳ ಭಾಗ್ಯ ಇರುವುದಿಲ್ಲವೋ ಅವರು ಕೂಡ ಕೆಲವೊಂದಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗೂ ಧನಸ್ಸು ರಾಶಿಯವರಿಗೆ ಈ ಒಂದು ಮಾಸದಲ್ಲಿ ಒಂದು ಯಶಸ್ಸನ್ನು ಸಹ ಪಡೆದುಕೊಳ್ಳುವ ಸಾಧ್ಯತೆ ಇದೆ.

ಜೊತೆಗೆ ಈ ಒಂದು ಮಾಸದಲ್ಲಿ ಯಾವುದಾದರೂ ಒಂದು ವಿಚಾರವಾಗಿ ಒಂದು ಶುಭ ಸುದ್ದಿಯನ್ನು ಸಹ ಕೇಳುತ್ತೀರಿ. ಹಾಗಾದರೆ ಯಾವ ಗ್ರಹಗಳು ಯಾವ ಸ್ಥಾನದಲ್ಲಿ ಸಂಚಾರ ಮಾಡುತ್ತಿವೆ ಎಂದು ನೋಡುವುದಾದರೆ. ಮೊದಲೇ ಹೇಳಿದಂತೆ ಪಂಚಮ ಭಾವದಲ್ಲಿ ನಾಲ್ಕು ಗ್ರಹಗಳು ಕೇಂದ್ರೀಕೃತಗೊಂಡಿದೆ. ಮೇ 15ನೇ ತಾರೀಖಿನವರೆಗೂ ಸೂರ್ಯ ತನ್ನ ಉಚ್ಚ ರಾಶಿಯಲ್ಲಿ ಅಂದರೆ ಮೇಷ ರಾಶಿಯಲ್ಲಿ ಇರುತ್ತಾನೆ.

ಇದರ ಜೊತೆ ಬುದ್ದಿ ಕಾರಕ ಗ್ರಹವಾಗಿರುವಂತಹ ಗುರು ಮತ್ತು ಬುಧ ಮೇಷ ರಾಶಿಯಲ್ಲಿಯೇ ಇರುತ್ತಾರೆ. ಕುಜ ಮೇ 10ನೇ ತಾರೀಖಿನ ನಂತರ ಅಷ್ಟಮ ಭಾವದಲ್ಲಿ ಇರುತ್ತಾನೆ. ಇದು ಧನಸ್ಸು ರಾಶಿಯವರಿಗೆ ಅಷ್ಟೇನೂ ಒಳ್ಳೆಯದಲ್ಲ ಎಂದು ಹೇಳಬಹುದು. ಇದರಿಂದಾಗಿ ಕೆಲವೊಂದಷ್ಟು ಅಡ್ಡಿ ಆತಂಕಗಳು ಸಮಸ್ಯೆಗಳು ಕೂಡ ಉಂಟಾಗುತ್ತದೆ.
ಜೊತೆಗೆ ಆಕಸ್ಮಿಕವಾಗಿ ಧನಾಗಮನ ಉಂಟಾಗುವಂತಹ ಸಾಧ್ಯತೆಗಳು ಕೂಡ ಇರುವಂತದ್ದು.

ಮೊದಲೇ ಹೇಳಿದಂತೆ ಧನಸ್ಸು ರಾಶಿಯವರು ಸಂತಾನ ವಿದ್ಯಾಭ್ಯಾಸ ವಿಚಾರವಾಗಿ ಕೆಲವೊಂದಷ್ಟು ಏರಳಿತದ ಸಮಯವನ್ನು ಉಂಟುಮಾಡುತ್ತಾನೆ. ಕೆಲವೊಬ್ಬರಿಗೆ ಇದು ಯಶಸ್ಸನ್ನು ತಂದು ಕೊಡುತ್ತದೆ ಹಾಗೂ ಇನ್ನೂ ಕೆಲವೊಬ್ಬರಿಗೆ ಇದು ನಷ್ಟವನ್ನು ತಂದುಕೊಡುತ್ತದೆ. ಹಾಗೂ ಶನಿ ಮತ್ತು ಕೇತುವಿನ ಸಂಚಾರದಿಂದ ಕೆಲವೊಂದಷ್ಟು ಲಾಭಗಳು ಕೂಡ ನಿಮಗೆ ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]