ಕಡಿಮೆ ಓದಿರೋರ ಬಳಿಯೇ ಹೆಚ್ಚು ಆಸ್ತಿ..ಬಿಜೆಪಿಯ ಶ್ರೀಮಂತ ಶಾಸಕರು ಯಾರು ನೋಡಿ

BJP ಯ ಶ್ರೀಮಂತ ಶಾಸಕರು….! ಕಮ್ಮಿ ಓದಿರೋರ ಬಳಿಗೆ ಹೆಚ್ಚು ಆಸ್ತಿ…..!!

WhatsApp Group Join Now
Telegram Group Join Now

ರಾಜ್ಯದ ಶ್ರೀಮಂತ ಶಾಸಕ ಇವರು, ಹಾಗೂ ಬಡ ಶಾಸಕರು ಅವರು ಅಂತೆಲ್ಲ ನಾವು ಕೇಳುತ್ತಿರುತ್ತೇವೆ ಹಾಗೂ ನೋಡುತ್ತಿರುತ್ತೇವೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಅತ್ಯಂತ ಶ್ರೀಮಂತ ಶಾಸಕರು ಯಾರು? ಹಾಗೂ ಅವರು ಎಷ್ಟು ಆಸ್ತಿಯನ್ನು ಮಾಡಿದ್ದಾರೆ? ಜೊತೆಗೆ ಅವರು ಎಷ್ಟು ವಿದ್ಯಾಭ್ಯಾಸವನ್ನು ಪಡೆದುಕೊಂಡಿದ್ದಾರೆ.

ಹಾಗೂ ಯಾರು ಹೆಚ್ಚು ವಿದ್ಯಾಭ್ಯಾಸವನ್ನು ಪಡೆದಿದ್ದಾರೆ? ಹಾಗೂ ಯಾರು ಎಷ್ಟು ಕಡಿಮೆ ವಿದ್ಯಾಭ್ಯಾಸ ಪಡೆದಿದ್ದರು ಅವರು ಎಷ್ಟು ಹಣವನ್ನು ಸಂಪಾದನೆ ಮಾಡಿದ್ದಾರೆ? ಹೀಗೆ ಈ ವಿಚಾರವಾಗಿ ಸಂಬಂಧಿಸಿದಂತೆ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಬಿಜೆಪಿಯ ಶ್ರೀಮಂತ ಶಾಸಕರು ಯಾರು ಎಂದು ನೋಡೋಣ ಮೊದಲನೆಯದಾಗಿ ಎಂಟಿಬಿ ನಾಗರಾಜ್

ಬಿಜೆಪಿಯ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಎಂಟಿಬಿ ನಾಗರಾಜ್ ಅವರು ಮೊದಲ ಸ್ಥಾನದಲ್ಲಿ ಬರುತ್ತಾರೆ. ಇವರು ಕೇವಲ ಬಿಜೆಪಿ ಪಕ್ಷದ ಶ್ರೀಮಂತ ಶಾಸಕರು ಮಾತ್ರವಲ್ಲ ಇಡೀ ದೇಶದ ಶ್ರೀಮಂತ ಸಚಿವ ಕೂಡ ಹೌದು. ಇಂತಹ ಎಂಟಿಬಿ ನಾಗರಾಜ್ ಅವರು 2020ರಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ನಿಲ್ಲುವಾಗ ಇವರು ಬರೋಬ್ಬರಿ 1220 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು.

MLC ಆದ ಇವರನ್ನು ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಮಾಡಲಾಯಿತು. ಇವರು ದೇಶದ ಶ್ರೀಮಂತ ಮಂತ್ರಿಯಾದರು ಇವರು 54 ಕೋಟಿ ಸಾಲವನ್ನು ಹೊಂದಿದ್ದಾರೆ ಎಂಬುವುದು ಗಮನಾರ್ಹ. ಇವರು ಒಂಬತ್ತನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಪಡೆದುಕೊಂಡಿದ್ದಾರೆ. ಇನ್ನು ಎರಡನೆಯ ಸ್ಥಾನದಲ್ಲಿ ಉದಯ್ ಬಿ ಗರುಡಾಚಾರ್. ಇವರು ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಎಂಎಲ್ಎ 2018ರ ಚುನಾವಣೆಯ ಸಂದರ್ಭದಲ್ಲಿ ಇವರು ತಮ್ಮ ಕುಟುಂಬದ ಆಸ್ತಿ 196 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.

ಈ ಮೂಲಕ ರಾಜ್ಯ ಬಿಜೆಪಿಯ ಎರಡನೇ ಶ್ರೀಮಂತ ಶಾಸಕ ಎನಿಸಿಕೊಂಡಿದ್ದಾರೆ. ಇವರು ಬಿಇ ಪದವಿಯನ್ನು ಪಡೆದುಕೊಂಡಿದ್ದಾರೆ. ಇನ್ನು ಮೂರನೆಯದಾಗಿ ಆನಂದ್ ಸಿಂಗ್ ಇವರು ವಿಜಯನಗರ ಕ್ಷೇತ್ರದ ಎಂಎಲ್ಎ ಜೊತೆಗೆ ಬಿಜೆಪಿ ಪಕ್ಷದಲ್ಲಿ ಮಂತ್ರಿಯೂ ಸಹ ಆಗಿದ್ದಾರೆ. ಇಂತಹ ಆನಂದ್ ಸಿಂಗ್ 2019 ರಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸುವಾಗ 176 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು.

ಇದರ ಜೊತೆ ಇವರು 193 ಕೋಟಿಯ ಸಾಲ ಇದೆ ಎಂಬ ಮಾಹಿತಿಯನ್ನು ಕೂಡ ತೋರಿಸಿದ್ದಾರೆ. ಇವರು ದ್ವಿತೀಯ ಪಿಯುಸಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಇನ್ನು ನಾಲ್ಕನೆಯ ಸ್ಥಾನದಲ್ಲಿ ಬೈರತಿ ಬಸವರಾಜ್ ಇವರು ಬೆಂಗಳೂರಿನ ಕೆಆರ್ ಪುರ ಕ್ಷೇತ್ರದ ಎಂಎಲ್ಎ. ಜೊತೆಗೆ ಬಿಜೆಪಿ ಪಕ್ಷದಲ್ಲಿ ಮಂತ್ರಿಯೂ ಸಹ ಆಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]