ಮೇ 5 ಚಂದ್ರಗ್ರಹಣ ಹೇಗಿರಲಿದೆ ಗೊತ್ತಾ 12 ರಾಶಿಗಳಿಗೆ ಅದೃಷ್ಟ..ಗ್ರಹಣದ ನಂತರ ಏನೆಲ್ಲಾ ಆಗಲಿದೆ ನೋಡಿ

2023 ಮೇ ಚಂದ್ರ ಗ್ರಹಣ….. ರಾಶಿ ಫಲ….||

WhatsApp Group Join Now
Telegram Group Join Now

2023 ಮೇ 5ನೇ ತಾರೀಖು ಶುಕ್ರವಾರ ಅರೆ ನೆರಳು ಕೇತು ಗ್ರಸ್ತ ಚಂದ್ರಗ್ರಹಣ ಇರುವಂತದ್ದು. ಈ ಒಂದು ಗ್ರಹಣ ಎಲ್ಲೆಲ್ಲಿ ಸಂಭವಿಸು ತ್ತದೆ ಎಂದು ನೋಡುವುದಾದರೆ ಭಾರತ, ದಕ್ಷಿಣ ಆಫ್ರಿಕಾ, ಬ್ಯಾಂಕಾಕ್, ಸೌತ್ ಕೊರಿಯಾ, ಈಜಿಪ್ಟ್, ಫಿಲಿಪ್ಪೈನ್ಸ್, ಇಂಡೋನೇಷ್ಯಾ, ಸಿಂಗಪುರ್ ಟರ್ಕಿ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಇರಾಕ್, ರಷ್ಯಾ ಹೀಗೆ ಹಲವಾರು ದೇಶಗಳಲ್ಲಿ ನಾವು ಕಾಣಬಹುದು.

ಇದು ಅರೆ ನೆರಳು ಚಂದ್ರಗ್ರಹಣ ಆಗಿರುವುದರಿಂದ ಈ ದಿನ ಯಾವುದೇ ರೀತಿಯ ಗ್ರಹಣದ ಆಚರಣೆಗಳು ಸಹ ಇರುವುದಿಲ್ಲ. ಹಾಗೂ ಈ ದಿನವನ್ನು ಅತಿ ಶ್ರೇಷ್ಠ ಎಂದು ಸಹ ಹೇಳಬಹುದು. ಯಾಕೆಂದರೆ ಬುದ್ಧ ಪೌರ್ಣಿಮೆ ಈ ಒಂದು ದಿನ ಇರುವಂತದ್ದು. ಹೀಗಾಗಿ ಈ ಒಂದು ದಿನ ವಿಶೇಷ ಎಂದು ಹೇಳಬಹುದು ಹಾಗೂ ಎಲ್ಲರೂ ಕೂಡ ಈ ದಿನ ಒಂದು ವಿಶೇಷವಾದಂತಹ ಪರಿಹಾರವನ್ನು ಮಾಡಿಕೊಂಡರೆ.

ನಿಮಗೆ ಹಲವಾರು ಸಮಸ್ಯೆಗಳು ದೂರವಾಗುತ್ತದೆ. ಅದರಲ್ಲೂ ಯಾರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೋ ಅಂಥವರು ಈ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದು. ಪ್ರತಿಯೊಬ್ಬರೂ ಕೂಡ ಈ ಒಂದು ದಿನ ಎಂದಿನಂತೆ ಬೆಳಗಿನ ಸಮಯ ನಿಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿ ಸಂಜೆಯ ಸಮಯ ಅಂದರೆ ಸೂರ್ಯಸ್ತದ ನಂತರ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ನಿಮ್ಮ ಅಕ್ಕ ಪಕ್ಕದಲ್ಲಿಯೇ ಇರುವಂತಹ ಶಿವನ ದೇವಸ್ಥಾನಕ್ಕೆ ಹೋಗಬೇಕು ಜೊತೆಗೆ ದೇವಸ್ಥಾನಕ್ಕೆ ಹೋಗುವಾಗ ನಾಲ್ಕು ಅಚ್ಚು ಬೆಲ್ಲ ಬಿಲ್ವಪತ್ರೆ ಮಲ್ಲಿಗೆ ಹೂವು ಹಾಗೂ ನಾಲ್ಕು ಬಾಳೆಹಣ್ಣನ್ನು ತೆಗೆದುಕೊಂಡು ಹೋಗಿ ಆ ದೇವಸ್ಥಾನದ ಅರ್ಚಕರಿಗೆ ಕೊಟ್ಟು ನಿಮ್ಮ ಮನೆಯವರ ಎಲ್ಲಾ ಹೆಸರಿನಲ್ಲಿಯೂ ಅರ್ಚನೆಯನ್ನು ಮಾಡಿಸಿಕೊಂಡು ಬರಬೇಕು. ಆನಂತರ ಸ್ವಲ್ಪ ಸಮಯ ಬಿಟ್ಟು ಕೈಕಾಲು ಮುಖವನ್ನು ತೊಳೆದುಕೊಂಡು.

ಉತ್ತರಾಭಿಮುಖವಾಗಿ ನಿಂತುಕೊಂಡು 108 ಬಾರಿ ಈಗ ನಾವು ಹೇಳುವಂತಹ ಈ ಒಂದು ಮಂತ್ರವನ್ನು ಪಠಣೆ ಮಾಡಬೇಕು. ಆ ಒಂದು ಮಂತ್ರ ಯಾವುದು ಎಂದರೆ ” ಓಂ ಪದ್ಮಧ್ವಜಾಯ ವಿದ್ಮಹೆ, ಹೇಮ ರೂಪಾಯ ಧೀಮಹಿ, ತನ್ನೋ ಚಂದ್ರ ಪ್ರಚೋದಯಾತ್ “. ಇದನ್ನು ಮನೆಯ ಪ್ರತಿಯೊಬ್ಬರೂ ಸಹ ಮಾಡಬಹುದು ಅಥವಾ ಮನೆಯ ಮುಖ್ಯಸ್ಥರು ಸಹ ಮಾಡಬಹುದಾಗಿದೆ.

ಹೀಗೆ ಮೇಲೆ ಹೇಳಿದ ಈ ಒಂದು ಮಂತ್ರವನ್ನು ನೀವು ಹೇಳುವುದರಿಂದ ಯಾವ ಮಕ್ಕಳು ಅನಾರೋಗ್ಯದರಿಂದ ಬಳಲುತ್ತಿರುತ್ತಾರೋ ಅದೆಲ್ಲವೂ ದೂರವಾಗುತ್ತದೆ. ಇದರ ಜೊತೆ ಉಳಿದ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಅದು ಸಹ ದೂರವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರ ಜೊತೆ ಗ್ರಹಣದ ರಾತ್ರಿ ಸಮಯ ಆದಷ್ಟು ಮೊಸರನ್ನು ಸೇವಿಸುವುದು ಉತ್ತಮ ಎಂದು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">