ಯಾರು ಈ ಟೋಪಿ ಅಮ್ಮ..ಇವರ ಪವರ್ ಏನು ಜನ ಇವರನ್ನ ಕಾಣೋಕೆ ಯಾಕೆ ಮುಗಿ ಬೀಳ್ತಾರೆ ಗೊತ್ತಾ ?

ಯಾರು ಈ ಟೋಪಿ ಅಮ್ಮ ಇವರ ಪವರ್ ಏನು ಜನ ಯಾಕೆ ಇವರನ್ನು ಕಾಣುವುದಕ್ಕೆ ಮುಗಿ ಬೀಳುತ್ತಾರೆ…….??

WhatsApp Group Join Now
Telegram Group Join Now

ಜನರ ನಂಬಿಕೆಯನ್ನು ನಾವು ಯಾವತ್ತಿಗೂ ಕೂಡ ಒಂದೇ ರೀತಿಯಾಗಿ ವಿಶ್ಲೇಷಣೆ ಮಾಡಬಾರದು. ಅದು ಅವರವರ ವೈಯಕ್ತಿಕ ಅದು ಯಾವ ರೂಪದಲ್ಲಿ ಯಾವ ರೀತಿಯಲ್ಲಿ ಬೇಕಾದರೂ ಇರಬಹುದು. ಆದ್ದರಿಂದಲೇ ಪ್ರತಿಯೊಬ್ಬರು ಅವರವರ ಭಾವಕ್ಕೆ ಅವರವರ ಭಕುತಿಗೆ ಎಂದು ಹಿರಿಯರು ಹೇಳಿರುವುದು.

ನಾವು ಈಗಾಗಲೇ ಮಲ್ಲಿಕಾರ್ಜುನ ಮುತ್ಯ ಅವರ ಬಗ್ಗೆ ತಿಳಿದಿದ್ದೇವೆ ಅದೇ ರೀತಿಯಾಗಿ ತಮಿಳುನಾಡಿನ ಅರುಣಾಚಲಂ ನಲ್ಲಿಯೂ ಸಹ ಇದೇ ರೀತಿಯಾದಂತಹ ಒಬ್ಬ ಮಹಿಳೆ ಇದ್ದಾರೆ. ಈಕೆಯ ಹೆಸರು ಟೋಪಿ ಅಮ್ಮ ಈ ಒಂದು ಹೆಸರನ್ನು ಅಲ್ಲಿರುವಂತಹ ಜನರೇ ಇಟ್ಟಿರುವಂತಹ ಹೆಸರಾಗಿದೆ. ಟೋಪಿ ಅಮ್ಮ ಎಂದೇ ಹೆಸರಾದಂತಹ ಇವರನ್ನು ಕಾಣುವುದಕ್ಕೆ ಜನರು ಮುಗಿ ಬೀಳುತ್ತಾರೆ.

ಇವರ ಕಾಲಿಗೆ ಬೀಳಲು ಮುಗಿ ಬೀಳುತ್ತಾರೆ. ಈಕೆಯ ಹಿಂದೆ ಮುಂದೆ ಜನ ಸದಾ ಕಾಲ ಕಿಕ್ಕಿರಿದು ನಿಂತಿರುತ್ತಾರೆ. ನೋಡುವುದಕ್ಕೆ ಗಲೀಜು, ಗಲಿಜಾಗಿ ಎಲ್ಲೆಂದರಲ್ಲಿ ಉಗುಳುತ್ತಾ ಕೊಳಕು ಬಟ್ಟೆಯನ್ನು ಧರಿಸಿ ಭಿಕ್ಷುಕಿಯಾಗಿ ಓಡಾಡುವಂತಹ ಈಕೆಯನ್ನು ನೋಡುವುದಕ್ಕೆ ಜನರು ನೋಡುವುದಕ್ಕೆ ಮುಂದೆ ಬೀಳುತ್ತಾರೆ. ಈಕೆ ತನ್ನ ಬಳಿ ಬರುವಂತಹ ಜನರನ್ನು ನಿಂದಿಸುತ್ತಾ ಬೈಯುತ್ತಾ ಕೆಲವು ಸಲ ಒಡೆಯುವುದಕ್ಕೂ ಸಹ ಮುಂದೆ ಹೋಗುತ್ತಾರೆ.

ಆದರೆ ಜನ ಈಕೆಯನ್ನು ದೇವಮಾತೆ ಎಂದೇ ಆರಾಧಿಸುತ್ತಾರೆ. ಅಷ್ಟಕ್ಕೂ ಇವರು ಯಾರು? ಇವರ ಹಿನ್ನೆಲೆ ಏನು? ಜನರಿಗೆ ಯಾಕೆ ಇವರನ್ನು ಕಂಡರೆ ಇಷ್ಟು ಭಕ್ತಿ? ಇವರು ಇರುವುದಾದರೂ ಎಲ್ಲಿ ? ಇವರು ಯಾಕೆ ಎಷ್ಟು ಫೇಮಸ್? ಇವರಿಗೆ ಯಾವುದಾದರೂ ಕುಟುಂಬ ಇದೆಯಾ? ಇವರು ಸದಾ ಕಾಲ ಕೊಳಕು ಬಟ್ಟೆಯನ್ನು ಧರಿಸಿ ಸದಾ ಕೊಳಕಾಗಿ ಇರುವುದು ಯಾಕೆ?

ಇವರು ದಿನವಿಡೀ ಏನು ಮಾಡುತ್ತಾರೆ ಹೀಗೆ ಇವರಿಗೆ ಸಂಬಂಧಿಸಿದ ಮುಂತಾದ ವಿಷಯಗಳನ್ನು ಈ ದಿನ ಚರ್ಚಿಸೋಣ. ಈಗ ಅರುಣಾ ಚಲಂ ಎಂಬಲ್ಲಿ ಸಖತ್ ಫೇಮಸ್ ಆಗಿರುವಂತಹ ಇವರು ಮೂಲತಹ ತಮಿಳುನಾಡಿನ ಕನ್ಯಾಕುಮಾರಿಯವರು. ಕನ್ಯಾಕುಮಾರಿಯಲ್ಲಿಯೇ ಜನಿಸಿದಂತಹ ಈಕೆಗೆ ಒಬ್ಬ ಮಗಳು ಸಹ ಇದ್ದಾಳೆ. ಇಲ್ಲಿಂದ ಸುಮಾರು 16 ವರ್ಷಗಳ ಹಿಂದೆ ಇವರ ಸಹೋದರರೊಬ್ಬರು ಸಾವನ್ನಪ್ಪಿದ್ದರು.

ಇದು ಇವರ ಮನಸ್ಸಿನ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ಈ ಘಟನೆಯ ಬಳಿಕ ತೀವ್ರ ಖಿನ್ನತೆಗೆ ಒಳದಾದಂತಹ ಇವರು ಮಾನಸಿಕ ಅಸ್ವಸ್ಥತೆಯನ್ನು ಕಳೆದುಕೊಂಡರು ಎಂದು ಹೇಳಲಾಗುತ್ತದೆ. ಆ ಬಳಿಕ ಕನ್ಯಾಕುಮಾರಿಯಲ್ಲಿ ಇರಲಾಗದೆ ಅದನ್ನು ಬಿಟ್ಟು ಅರುಣಾಚಲಂ ನಲ್ಲಿ ಬಂದಂತಹ ಇವರಿಗೆ ಇಲ್ಲಿ ಇವರಿಗೆ ಆಧ್ಯಾತ್ಮಿಕ ಜ್ಞಾನೋದಯ ಲಭಿಸಿ ಇವರು ಸಿದ್ಧಿಯಾದರು ಎಂದು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]