ಕೇತುಗ್ರಸ್ಥ ಚಂದ್ರಗ್ರಹಣ ಮಕರ ರಾಶಿಯ ಮೇಲೆ ಪ್ರಭಾವ ಹೇಗಿದೆ ಗೊತ್ತಾ? ಮುಂದಿನ ಮೂರು ತಿಂಗಳು ನಡೆಯೋದೆ ಇದು - Karnataka's Best News Portal

ಕೇತುಗ್ರಸ್ಥ ಚಂದ್ರಗ್ರಹಣ ಮಕರ ರಾಶಿಯ ಮೇಲೆ ಪ್ರಭಾವ ಹೇಗಿದೆ ಗೊತ್ತಾ? ಮುಂದಿನ ಮೂರು ತಿಂಗಳು ನಡೆಯೋದೆ ಇದು

ಕೇತು ಗ್ರಸ್ತ ಚಂದ್ರಗ್ರಹಣ 05/05/2023 …..? ಮಕರ ರಾಶಿಯ ಮೇಲೆ ಪ್ರಭಾವ….!!

ಈಗಾಗಲೇ ಪ್ರತಿಯೊಬ್ಬರಿಗೂ ತಿಳಿದಿರುವಂತೆ ಮೇ 5 2023 ರಂದು ಜರುಗಲಿರುವಂತಹ ಕೇತು ಗ್ರಸ್ತ ಛಾಯಾ ಕಲ್ಪ ಚಂದ್ರಗ್ರಹಣ ಮಕರ ರಾಶಿಯವರಿಗೆ ಅದ್ಭುತವಾದಂತಹ ಲಾಭದಾಯಕವಾಗಿರುವಂತಹ ಪರಿಣಾಮವನ್ನು ಬೀರುತ್ತದೆ ಎಂದು ಹೇಳಬಹುದು. ಕರ್ಮಭಾವದಲ್ಲಿ ಜರುಗುವಂತಹ ಚಂದ್ರಗ್ರಹಣವು, ವಿಶೇಷವಾದಂತಹ ಶುಭ ಫಲಗಳನ್ನು ನೀಡಲಿದೆ ಎಂದೇ ಹೇಳಬಹುದು.

ಏಳನೇ ಭಾವದ ಅಧಿಪತಿಯಾಗಿರುವಂತಹ ಚಂದ್ರನು ಗ್ರಹಣಕ್ಕೆ ಗುರಿ ಯಾಗುತ್ತಾನೆ. ಅಂದರೆ ಕೇತು ಚಂದ್ರನನ್ನು ಸಂಪೂರ್ಣವಾಗಿ ಪರಿಶುದ್ಧ ಗೊಳಿಸುತ್ತಾನೆ. ಆದ್ದರಿಂದ ಮಕರ ರಾಶಿಯವರ ಪತ್ನಿಯರ ಮನೋ ಭಾವ ಅಂದರೆ ಅವರ ಎಲ್ಲಾ ಸ್ವಭಾವ ಗುಣಗಳನ್ನು ಸಂಪೂರ್ಣವಾಗಿ ಬದಲಾಯಿಸುತ್ತಾನೆ ಎಂದೇ ಹೇಳಬಹುದು. ಒಂದು ರೀತಿಯ ಧನಾತ್ಮಕ ಆಲೋಚನೆಗಳನ್ನು ಹೊಂದುತ್ತಾರೆ. ನಷ್ಟದಲ್ಲಿರುವಂತಹ ನಿಮ್ಮ ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ತಂದು ಕೊಡುತ್ತಾನೆ. ಅಂದರೆ ಅವರ ಒಂದು ಚಟುವಟಿಕೆ ಮುಂದೆ ನುಗುತ್ತದೆ.

ಯಾವುದೇ ಭ್ರಮೆ ಮತ್ತು ಮಾಯೆಯಿಂದ ಇದ್ದರೆ ಅದರಿಂದ ಹೊರ ಬರುತ್ತಾರೆ. ಇದುವರೆಗೆ ಮಕರ ರಾಶಿಯವರು ಯಾವುದೇ ಒಂದು ವಿಚಾರವಾಗಿ ಗುಪ್ತವಾಗಿ ಯಾರಿಗೂ ಹೇಳದೆ ನಡೆಯುತ್ತಿದ್ದರೆ ಅವೆಲ್ಲ ವೂ ಕೂಡ ದೂರವಾಗುತ್ತದೆ. ಬದಲಿಗೆ ಸಾಮಾನ್ಯರಂತೆ ಇರುತ್ತೀರಿ ಹೀಗೆ ಈ ರೀತಿಯಾದಂತಹ ಬದಲಾವಣೆ ನಿಮ್ಮಲ್ಲಿ ಕಂಡುಬರುತ್ತದೆ. ಒಂದು ರೀತಿಯ ಆಸಕ್ತಿ ಇಲ್ಲದೆ ಇರುವಂತಹ ಜೀವನವನ್ನು ನೀವು

See also  ದೇವರ ಮನೆ ಕ್ಲೀನಿಂಗ್ ಯಾವ ದಿನ ಮಾಡಬೇಕು ? ಕಳಶ ಎಷ್ಟು ದಿನಕೊಮ್ಮೆ ಬದಲಿಸಬೇಕು.ವಿಗ್ರಹವನ್ನು ಪ್ರತಿ ತಿತ್ಯ ತೊಳೆಯಬೇಕಾ ?

ನಡೆಸಿಕೊಂಡು ಬಂದಿದ್ದೀರಿ ಆದರೆ ಇನ್ನು ಮುಂದೆ ಆ ರೀತಿಯಾದಂತಹ ಯಾವುದೇ ರೀತಿಯ ಆಸಕ್ತಿ ಇಲ್ಲದೆ ಇರುವಂತಹ ಜೀವನ ಇರುವುದಿಲ್ಲ ಬದಲಿಗೆ ಮುಂದಿನ ದಿನದಲ್ಲಿ ಯಾವುದೇ ಒಂದು ವಿಚಾರವಾಗಿ ಯಾವುದೇ ಒಂದು ಕೆಲಸದಲ್ಲಿ ನಾನು ಮುಂದೆ ನಡೆಯುತ್ತೇನೆ ಎಂಬ ಆತ್ಮವಿಶ್ವಾಸವನ್ನು ಹೊಂದುತ್ತೀರಿ. ಜೀವನವನ್ನು ಸಂತೋಷವಾಗಿ ಆನಂದವಾಗಿ ಅನುಭವಿಸುತ್ತೀರಿ. ಒಟ್ಟಾರೆಯಾಗಿ ನಿಮ್ಮಲ್ಲಿ ಧನಾತ್ಮಕ ಅಂಶಗಳು ಕಂಡುಬರುತ್ತವೆ.

ಅಸ್ಥಿರವಾದಂತಹ ನಿಮ್ಮ ಮನಸ್ಸು ಅಂದರೆ ಚಂಚಲತೆ ನಿಮ್ಮಿಂದ ದೂರವಾಗುತ್ತದೆ. ಮೇ 5 2023 ರಿಂದ ಅಕ್ಟೋಬರ್ 28 2003ರ ವರೆಗೆ ಅಂದರೆ ಈ ಆರು ತಿಂಗಳವರೆಗೆ ಬಹು ದೊಡ್ಡ ಪ್ರಮಾಣದ ಆರ್ಥಿಕ ಲಾಭ ಉಂಟಾಗುವಂತದ್ದು. ನೀವು ಮಾಡುತ್ತಿರುವಂತಹ ಯಾವುದೇ ಕೆಲಸ ಕಾರ್ಯಗಳಲ್ಲಾಗಿರಬಹುದು ಕೃಷಿ ಕ್ಷೇತ್ರದಲ್ಲಾಗಿರ ಬಹುದು, ನಿಮ್ಮ ವೃತ್ತಿ ಜೀವನದಲ್ಲಾಗಿರಬಹುದು ಇದರಲ್ಲಿ ನಿಮಗೆ ಅತ್ಯುತ್ತಮವಾದಂತಹ ಯಶಸ್ಸು ಸಿಗುತ್ತದೆ.

ಈ ಒಂದು ಗ್ರಹಣದ ಪ್ರಭಾವ ನಿಮಗೆ ಹಾಗೂ ನಿಮ್ಮ ಪತ್ನಿ ಇಬ್ಬರಿಗೂ ಕೂಡ ಲಾಭವನ್ನು ತಂದುಕೊಡುತ್ತದೆ. ಜೊತೆಗೆ ಆದಾಯದ ಹೊಸ ಮೂಲಗಳನ್ನು ಹುಡುಕುವಿರಿ ಹಾಗೂ ಅಂತಹ ಸಂದರ್ಭಗಳು ಕೂಡ ಬರುತ್ತದೆ. ಜೊತೆಗೆ ನಿಮಗೆ ತಿಳಿಯದ ಹಾಗೆ ಹಣಕಾಸಿನ ಒಳಹರಿವು ಎನ್ನುವುದು ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯೂ ಕೂಡ ಉತ್ತಮವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">