ಬಾಳೆ ಗಿಡದ ಹತ್ತಿರ ಇದನ್ನು ಬಚ್ಚಿಡಿ ಹಣಹರಿದು ಬರುತ್ತೆ….!!
ಹಿಂದೂ ಧರ್ಮದಲ್ಲಿ ಮರಗಳು ಮತ್ತು ಸಸ್ಯಗಳಿಗೆ ವಿಶೇಷವಾದ ಪ್ರಾಮುಖ್ಯತೆ ಇದೆ. ದೇವರು ಮತ್ತು ದೇವತೆಗಳು ಮರ ಮತ್ತು ಗಿಡಗಳಲ್ಲಿ ನೆಲೆಸಿದ್ದಾರೆ ಅನ್ನುವ ನಂಬಿಕೆ ಇದೆ. ವಿಶೇಷ ದಿನಗಳಂದು ಅವುಗಳನ್ನು ಭಕ್ತಿಯಿಂದ ಪೂಜಿಸಿದರೆ ದೇವರ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ. ಗುರುವಾರ ಭಗವಾನ್ ವಿಷ್ಣು ಮತ್ತು ದೇವಗುರು ಬ್ರುಹಸ್ಪತಿಗೆ ಸಮರ್ಪಿಸಲಾಗಿದೆ.
ಈ ದಿನ ಆಲದ ಮರವನ್ನು ಪೂಜಿಸಿ ಪರಿಹಾರ ಇತ್ಯಾದಿಗಳನ್ನು ಮಾಡುವುದರಿಂದ ವಿಷ್ಣುವಿನ ಅನುಗ್ರಹ ದೊರೆಯುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವಾರದ ದಿನ ಬಾಳೆ ಗಿಡಕ್ಕೆ ಸಂಬಂಧಿಸಿದ ಕೆಲವು ಪರಿಹಾರ ಕ್ರಮಗಳನ್ನು ಕೈಗೊಂಡರೆ ಯಾವುದೇ ವ್ಯಕ್ತಿ ಆಗಿರಲಿ ಅವನು ವಿಷ್ಣುವಿನ ಅನುಗ್ರಹವನ್ನು ಖಂಡಿತವಾಗಿ ಪಡೆದುಕೊಳ್ಳುತ್ತಾನೆ. ಅಲ್ಲದೆ ಭಕ್ತರ ಇಷ್ಟಾರ್ಥಗಳು ಕೂಡ ಈಡೇರುತ್ತದೆ. ಜೊತೆಗೆ ವ್ಯಕ್ತಿಯು ಆರ್ಥಿಕ ಸಮಸ್ಯೆಗಳಿಂದ ಮುಕ್ತನಾಗುತ್ತಾನೆ.
ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ತಾಯಿ ಲಕ್ಷ್ಮಿ ದೇವಿ ವಿಷ್ಣುವಿನ ಪತ್ನಿ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಗುರುವಾರದoದು ಶ್ರೀಹರಿಯನ್ನು ಪೂಜಿಸುವುದರಿಂದ ತಾಯಿ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಗುರುವಾರ ಬಾಳೆ ಗಿಡಕ್ಕೆ ಸಂಬಂಧಿಸಿದ ಕೆಲವು ವಿಶೇಷವಾದಂತಹ ಕ್ರಮಗಳ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಬಾಳೆ ಗಿಡವನ್ನು ನೆಟ್ಟರೆ
ಆ ಮನೆಯಲ್ಲಿ ಎಂದಿಗೂ ದುಃಖ ಮತ್ತು ಬಡತನ ಇರುವುದಿಲ್ಲ ಎಂದು ಹೇಳಲಾಗುತ್ತದೆ ಹಾಗೂ ಗುರುವಾರದoದು ಬಾಳೆ ಗಿಡವನ್ನು ಪೂಜಿಸುವುದರಿಂದ ಆರ್ಥಿಕ ಸಂಕಷ್ಟ ದೂರವಾಗುತ್ತದೆ ಅಂತ ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ನೆಲೆಗೊಂಡು ಭಕ್ತರ ಇಷ್ಟಾರ್ಥಗಳು ಈಡೇರುತ್ತದೆ. ನೀವು ಮನೆಯಲ್ಲಿ ಸಂತೋಷ ಸಮೃದ್ಧಿ ಮತ್ತು ಸಂಪತ್ತನ್ನು ಬಯಸಿದರೆ ಬಾಳೆ ಗಿಡದ ಬೇರನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ.
ಮೊದಲು ಗಂಗಾಜಲದಿಂದ ಬೇರನ್ನು ತೊಳೆದು ಬೇರಿಗೆ ಹಳದಿ ಬಣ್ಣದ ದಾರವನ್ನು ಕಟ್ಟಬೇಕು ನಂತರ ಅದನ್ನು ಹಣ ಇಡುವಂತಹ ಸ್ಥಳದಲ್ಲಿ ಇಡಬೇಕು. ಈ ಪರಿಹಾರವನ್ನು ನೀವು ಗುರುವಾರ ಮಾಡಬೇಕಾಗುತ್ತದೆ. ಗುರುವಾರ ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ ಹಳದಿ ಬಟ್ಟೆಯನ್ನು ಧರಿಸಿ ಹಳದಿ ಬಣ್ಣದ ಬಟ್ಟೆಯಿಂದ ನಿಮ್ಮ ತಲೆಯನ್ನು ಮುಚ್ಚಿಕೊಳ್ಳಿ. ನಂತರ ಬಾಳೆ ಗಿಡದ ಬಳಿ ಹೋಗಿ
ಕೈ ಮುಗಿದು ನಿಮ್ಮ ಆಸೆಯನ್ನು ಹೇಳಿ ಹೀಗೆ ಮಾಡುವುದರಿಂದ ನಿಮ್ಮ ಆಸೆ ಬಹುಬೇಗನೆ ಈಡೇರುತ್ತದೆ. ಗೀತಾ ಜಯಂತಿ ದಿನದಂದು ಎರಡು ಬಾಳೆ ಗಿಡಗಳನ್ನು ನಿಮ್ಮ ಮನೆಯಲ್ಲಿ ತಂದು ನೆಡುವುದನ್ನು ಮರೆಯ ಬೇಡಿ. ನೀವು ನೆಟ್ಟ ಬಾಳೆ ಗಿಡದಲ್ಲಿ ಹಣ್ಣು ಬಿಟ್ಟಾಗ ಆ ಬಾಳೆಹಣ್ಣನ್ನು ನೀವೇ ಸ್ವತಹ ಸೇವಿಸಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.