ಒಳ್ಳೆಯ ಮನುಷ್ಯರಿಗೆ ಯಾಕೆ ಕೆಟ್ಟ ಕಾಲ ಬರುತ್ತೆ..ಈ ಒಂದು ಚಿಕ್ಕ ಕಥೆ ಕೇಳಿ ನಿಮಗೆ ಗೊತ್ತಾಗುತ್ತೆ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಒಳ್ಳೆಯ ಮನುಷ್ಯರಿಗೆ ಯಾಕೆ ಕೆಟ್ಟ ಕಾಲ ಬರುತ್ತೆ……….||

ಇಂದಿನ ಕಲಿಯುಗದಲ್ಲಿ ಸಾಮಾನ್ಯವಾಗಿ ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಾ ತಮ್ಮ ಜೀವನ ನಡೆಸುತ್ತಿದ್ದಾರೆ. ಇವರೆಲ್ಲರೂ ತಮಗೆ ಪ್ರತಿಯೊಂದು ಕಷ್ಟಗಳು ಬಂದ ತಕ್ಷಣ ಮತ್ತೊಬ್ಬರನ್ನು ಬೆರಳು ಮಾಡಿ ತೋರಿಸಿ ನೋಡು ಅವನೆಲ್ಲ ಎಷ್ಟೆಲ್ಲ ಪಾಪಗಳನ್ನು ಮಾಡುತ್ತಿದ್ದಾನೆ ಆದರೂ ಕೂಡ ಆತನು ಶ್ರೀಮಂತನಾಗಿ ಬೆಳೆಯುತ್ತಿದ್ದಾನೆ. ನಾವು ಯಾವುದೇ ಪಾಪಗಳನ್ನು ಮಾಡಿರದೆ ಧರ್ಮದ ಹಾದಿಯಲ್ಲಿಯೇ ನಡೆಯುತ್ತಿದ್ದೇವೆ.

ಆದರೂ ಕೂಡ ನಮಗೆ ಕಷ್ಟಗಳು ಕಟ್ಟಿಟ್ಟ ಬುತ್ತಿಯಾಗಿದೆ ಎಂಬ ಹೇಳಿಕೆಯನ್ನು ನೀಡುತ್ತಿರುತ್ತಾರೆ. ಅಂದರೆ ಒಳ್ಳೆಯವರಿಗೆ ಮಾತ್ರ ಕಷ್ಟಗಳು ಬರುತ್ತದೆಯೇ? ಎಂಬುದೇ ಎಲ್ಲರ ಪ್ರಶ್ನೆಯಾಗಿ ಉಳಿದು ಕೊಂಡು ಬಿಟ್ಟಿದೆ? ಇದೇ ರೀತಿಯಾದಂತಹ ಪ್ರಶ್ನೆ ಒಮ್ಮೆ ಅರ್ಜುನನಿಗೂ ಸಹ ಮೂಡಿತ್ತು. ಕೂಡಲೇ ತಡ ಮಾಡದಂತಹ ಅರ್ಜುನ ಭಗವಾನ್ ಶ್ರೀ ಕೃಷ್ಣನ ಬಳಿ ಆ ಪ್ರಶ್ನೆಯನ್ನು ಕೇಳುತ್ತಾನೆ.

ಆಗ ಅರ್ಜುನ ಶ್ರೀ ಕೃಷ್ಣನನ್ನು ಕುರಿತು ವಾಸುದೇವ ಎಲ್ಲರಿಗೂ ಒಳ್ಳೆಯ ದನ್ನು ಮಾಡುವವನು ಒಳ್ಳೆಯವನು ಮತ್ತು ಸದಾಕಾಲ ಧರ್ಮದ ಹಾದಿ ಯಲ್ಲಿ ನಡೆಯುವವನು ಯಾಕೆ ಜೀವನದಲ್ಲಿ ಕಷ್ಟಗಳನ್ನು ಎದುರಿಸು ವಂತಹ ಪರಿಸ್ಥಿತಿಯಲ್ಲಿ ಎದುರಾಗುತ್ತಾನೆ, ಸದಾ ಒಳ್ಳೆಯದನ್ನೇ ಮಾಡಿದರು ಕೂಡ ಆತನಿಗೆ ಕಷ್ಟಗಳು ಯಾಕೆ ಬರುತ್ತದೆ? ಎಂಬ ಪ್ರಶ್ನೆಯನ್ನು ಮಾಡುತ್ತಾನೆ. ಇದಕ್ಕೆ ಮುಗುಳ್ನಕ್ಕಂತಹ ಶ್ರೀಕೃಷ್ಣ ನಾನು ನಿನಗೆ ಒಂದು ಕಥೆಯನ್ನು ಹೇಳುತ್ತೇನೆ.

ಈ ಕಥೆಯ ಮೂಲಕ ನಿನ್ನ ಪ್ರಶ್ನೆಗೆ ಖಂಡಿತ ಉತ್ತರ ಸಿಗುತ್ತದೆ. ಎಂದು ಹೇಳುತ್ತಾ ಆ ಕಥೆಯನ್ನು ಪ್ರಾರಂಭ ಮಾಡುತ್ತಾರೆ. ಒಂದು ಊರಲ್ಲಿ ಒಬ್ಬ ವ್ಯಾಪಾರಸ್ಥ ಮತ್ತು ಒಬ್ಬ ಕಳ್ಳನಿದ್ದ. ಆ ಉದ್ಯಮಿ ಬಹಳ ಒಳ್ಳೆಯ ಮನುಷ್ಯ ವ್ಯಾಪಾರದಲ್ಲಿ ನಿಯತ್ತು ಧರ್ಮ ಮತ್ತು ನೀತಿಯನ್ನು ಅನುಸರಿಸಿ ಜೀವನವನ್ನು ನಡೆಸುತ್ತಿದ್ದನು. ಪ್ರತಿದಿನವೂ ಸಹ ದೇವಾಲಯಕ್ಕೆ ತೆರಳಿ ದೇವರ ಬಳಿ ಮನವಿಯನ್ನು ಮಾಡಿಕೊಂಡು

ವ್ಯಾಪಾರ ಚೆನ್ನಾಗಿ ನಡೆಯುವಂತೆ ಬೇಡಿಕೊಳ್ಳುತ್ತಿದ್ದನು. ಆತನು ಯಾವುದೇ ತಪ್ಪು ಕೆಲಸಗಳನ್ನು ಸಹ ಮಾಡುತ್ತಿರಲಿಲ್ಲ. ಆದರೂ ಕೂಡ ಆತನ ವ್ಯಾಪಾರ ಹೆಚ್ಚು ನಡೆಯುತ್ತಿರಲಿಲ್ಲ. ಇನ್ನು ಅದೇ ಊರಿನಲ್ಲಿ ಇದ್ದಂತಹ ಕಳ್ಳ ಪ್ರತಿದಿನ ಹಲವಾರು ಕಳ್ಳತನಗಳನ್ನು ಮಾಡುತ್ತಿದ್ದ. ಮನಸ್ಸಿಗೆ ಬಂದಂತೆ ಸುಳ್ಳು ಹೇಳುತ್ತಾ ಜೀವನವನ್ನು ನಡೆಸುತ್ತಿದ್ದ. ಈತನು ಕೂಡ ದೇವಾಲಯಕ್ಕೆ ತೆರಳುತ್ತಿದ್ದ. ಆದರೆ ಅಲ್ಲಿ ಬರುವಂತಹ ಜನರನ್ನು

ಹಣ ಹಾಗೂ ಚಪ್ಪಲಿಗಳನ್ನು ಕದಿಯುವಂತಹ ಕಾರಣಕ್ಕಾಗಿ ದೇವಾಲ ಯಕ್ಕೆ ತೆರಳುತ್ತಿದ್ದ. ಹೀಗೆ ಒಂದು ದಿನ ಸಾಮಾನ್ಯರಂತೆ ಚಪ್ಪಲಿಯನ್ನು ಕದಿಯಲು ದೇವಸ್ಥಾನಕ್ಕೆ ಹೋಗುತ್ತಾನೆ. ಆದರೆ ಭಾರಿ ಮಳೆಯಿಂದ ದೇವಸ್ಥಾನದಲ್ಲಿ ಜನರು ಇರುವುದಿಲ್ಲ. ಇದೇ ಸರಿಯಾದ ಸಮಯ ಎಂದು ಅರಿತಂತಹ ಕಳ್ಳ ಅರ್ಚಕನ ಕಣ್ಣನ್ನು ತಪ್ಪಿಸಿ ಬಹಳ ಸುಲಭವಾಗಿ ದೇವಸ್ಥಾನದಲ್ಲಿ ಇದ್ದಂತಹ ಹುಂಡಿ ಹಣವನ್ನು ಎತ್ತಿಕೊಂಡು ಅಲ್ಲಿಂದ ಹೊರಟು ಹೋಗುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *