ಕೇವಲ 20 ರೂಪಾಯಿಗೆ ಹೊಟ್ಟೆ ತುಂಬಾ ಊಟ ನೀಡುತ್ತಿದ್ದ ಅಜ್ಜ ಯಾಕೆ ಅಂತ ನೋಡಿದಾಗ ಎಲ್ಲರೂ ಶಾಕ್ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

20 ರೂಪಾಯಿಗೆ ಹೊಟ್ಟೆ ತುಂಬ ಊಟ ನೀಡುತ್ತಿದ್ದ ಮುದುಕ…! ಅದರ ಹಿಂದಿನ ಗಿಮಿಕ್ ತಿಳಿದು ಬೆಚ್ಚಿಬಿದ್ದ ಪೊಲೀಸರು.!

ಸಾಮಾನ್ಯವಾಗಿ ಹೊರಗಡೆ ಹೋದ ಸಂದರ್ಭದಲ್ಲಿ ಹೊಟ್ಟೆ ಹಸಿವಾದಾಗ ನಾವು ಹೋಟೆಲ್ ನಲ್ಲಿ, ರಸ್ತೆ ಬದಿಯಲ್ಲಿ ಇರುವ ಅಂಗಡಿಗಳಲ್ಲಿ, ಫಾಸ್ಟ್ ಫುಡ್ ನಲ್ಲಿ ಏನಾದರೂ ಆಹಾರವನ್ನು ತಿನ್ನಲು ಬಯಸುತ್ತೇವೆ. ಆದರೆ ಆ ಊಟ ತಿಂಡಿಗಳನ್ನು ಹೇಗೆ ತಯಾರು ಮಾಡುತ್ತಾರೋ? ಆ ಆಹಾರಗಳು ಉತ್ತಮವಾಗಿ ಇರುತ್ತದೆಯೇ, ಅದನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದೇ ಎಂಬುದನ್ನು ಯೋಚಿಸುವುದಿಲ್ಲ ಬದಲಾಗಿ ಕಡಿಮೆ ದರದಲ್ಲಿ ಸಿಗುತ್ತದೆ ಎಂದು ತಿಂದು ಬಿಡುತ್ತಾರೆ.

ಮನುಷ್ಯನಿಗೆ ಹೊಟ್ಟೆ ಹಸಿದಾಗ ಆಹಾರದ ರುಚಿ ಶುಚಿಯನ್ನು ಅರಿಯದೆ ಪಕ್ಕದಲ್ಲಿ ಕಡಿಮೆ ದರಗಳಲ್ಲಿ ಸಿಗುವ ಆಹಾರವನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಹಲವಾರು ಜನರು ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ದುಬಾರಿ ಬೆಲೆಯ ಕೊಟ್ಟು ವಿಧ ವಿಧವಾದ ಆಹಾರಗಳನ್ನು ಸೇವಿಸುತ್ತಾರೆ. ಆ ಆಹಾರವು ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಇಲ್ಲವೋ ಎಂಬ ಯೋಚನೆಯನ್ನು ಮಾಡುವುದಿಲ್ಲ. ಆದರೆ ಇಲ್ಲಿ ಒಬ್ಬ ವ್ಯಕ್ತಿ ಕೇವಲ 20 ರೂಪಾಯಿಗೆ ಹೊಟ್ಟೆ ತುಂಬ ಊಟ ನೀಡುತ್ತಾನೆ. ಆತನ ಬಗ್ಗೆ ಹಾಗೂ ಅವನು ಕಡಿಮೆ ಬೆಲೆಗೆ ಏಕೆ ಊಟ ನೀಡುತ್ತಿದ್ದ? ಇದರ ಹಿಂದಿನ ಕತೆಯ ಬಗ್ಗೆ ತಿಳಿಯೋಣ.

ಒಬ್ಬ ಅಜ್ಜ ಕೇವಲ 20 ರೂಪಾಯಿ ಗಳಿಗೆ ಹೊಟ್ಟೆ ತುಂಬ ಊಟ ನೀಡುತ್ತಿದ್ದ, ಇದನ್ನು ತಿಳಿದ ಪೋಲೀಸರು ಅದರ ಹಿನ್ನೆಲೆಯನ್ನು ತಿಳಿಯಲು ಹೋದಾಗ ಅದರ ಸತ್ಯ ತಿಳಿದು ಬೆಚ್ಚಿ ಬಿದ್ದಿದ್ದಾರೆ. ಗುಜರಾತಿನ ಮುರಬ ನಗರದಲ್ಲಿ ಬಚ್ಚು ದಾದಾ ಎಂಬ ಹೆಸರಿನ ಒಬ್ಬ ವಯಸ್ಸಾದ ವ್ಯಕ್ಕಿ. ಈ ಬಚ್ಚು ದಾದಾ ಎಂಬ ಹೆಸರಿನಲ್ಲಿ ಒಂದು ಡಾಬಾ ಇದೆ. ಆ ಡಾಬಾದ ಮಾಲೀಕನಾದ ಬಚ್ಚು ದಾದಾ ಅವರಿಗೆ 73 ವರ್ಷ ವಯಸ್ಸು ಆಗಿದೆ. ಈತನ ಡಾಬಾ ತುಂಬಾ ಚಿಕ್ಕದು. ಚಿಕ್ಕದಾದರು ಈ ಡಾಬಾದಲ್ಲಿ ಪ್ರತಿ ದಿನ 150 ರಿಂದ 200 ಜನ ಊಟ ಮಾಡುತ್ತಾ ಇದ್ದಾರೆ.

ಈ ಡಾಬಾ ದಲ್ಲಿ ಬಡಿಸುವ ಒಂದು ತಾಲಿನ ಬೆಲೆ ಕೇವಲ 20 ರೂಪಾಯಿ. ಆ ತಾಲಿನಲ್ಲಿ ಮೂರು ವಿಧ ವಿಧವಾದ ಸಾರು, ಪಲ್ಯ, ತರಕಾರಿ ಜೊತೆಗೆ ಮೂರು ರೊಟ್ಟಿ ಗಳು ಇರುತ್ತವೆ. ಇದಲ್ಲದೆ ಇವುಗಳ ಜೊತೆ ಅನ್ನವನ್ನು ಸಹ ಈ ಬಚ್ಚುದಾದಾ ನೀಡುತ್ತಾರೆ. ಇಷ್ಟೆಲ್ಲಾ ಇರುವ ಈ ಊಟಕ್ಕೆ ಬೇರೆ ಕಡೆಯಾದರೆ ರೂ. 70 ರಿಂದ 100 ರವರೆಗೆ ಬೆಲೆ ಹೇಳುತ್ತಾರೆ. ಆದರೆ ಈ ತಾತಾ ಇಷ್ಟೆಲ್ಲವನ್ನು ಕೇವಲ ರೂಪಾಯಿ 20 ಕ್ಕೆ ನೀಡುತ್ತಾರೆ. ಇದನ್ನು ಕಂಡ ಜನರು ಅದನ್ನು ವಿಚಾರಿಸಲು ಅವರ ಬಳಿ ಹೋಗಿ ವಿಚಾರಿಸುತ್ತಾರೆ.

ಅದಕ್ಕೆ ಉತ್ತರಿಸಿದ ದಾದಾ ‘ಕೋರೋನಾ ಬಂದ ಸಮಯದಲ್ಲಿ ತನ್ನ ಪತ್ನಿ ಹಾಗೂ ಮಗ ಇಬ್ಬರನ್ನು ಕಳೆದುಕೊಂಡಿದ್ದೇನೆ. ಇನ್ನು ಯಾವೊಬ್ಬ ವ್ಯಕ್ತಿಯೂ ಸತ್ತ ನಂತರ ಹೋಗುವಾಗ ಏನನ್ನು ಹೊತ್ತು ಹೊಯ್ಯುವುದಿಲ್ಲ. ಇರೋ ತನಕ ಕೈಲಾದಷ್ಟು ಒಳ್ಳೆಯದನ್ನು ಮಾಡಬೇಕು. ಅದಕ್ಕಾಗಿ ಹಸಿದವರಿಗೆ ಊಟ ನೀಡುತ್ತಿದ್ದೇನೆ. ಈ ಊಟವನ್ನು ಉಚಿತವಾಗಿ ನೀಡಬೇಕೆಂಬ ಆಸೆ ಇದೆ ಆದರೆ ಉಚಿತವಾಗಿ ನೀಡುವಂತಹ ಶಕ್ತಿಯನ್ನು ಆ ದೇವರು ನನಗೆ ನೀಡಿಲ್ಲ ಆದ್ದರಿಂದ ಆ ಊಟ ತಯಾರಿಸಲು ಅಗತ್ಯವಿರುವುದು ಕೇವಲ 20 ರೂಪಾಯಿ ಮಾತ್ರ.

ಅದಲ್ಲಾಗಿ ಮಾತ್ರ 20 ರೂಪಾಯಿಗಳನ್ನು ಪಡೆಯುತ್ತೇನೆ. ಯಾರಿಗಾದರೂ 20 ರೂಪಾಯಿಗಳನ್ನು ಕೊಡಲು ಸಾಧ್ಯವಿಲ್ಲವೋ ಅಂತಹವರಿಗೆ ಉಚಿತವಾಗಿ ಊಟ ನೀಡುತ್ತೇನೆ ಎಂದು ಹೇಳಿದ್ದಾರೆ. ಈಗಿನ ತಾಂತ್ರಿಕ ಯುಗದಲ್ಲಿ ಇಂತಹ ವ್ಯಕ್ತಿಗಳು ಇರುವುದು ಬಹಳ ಅಪರೂಪ. ದಾನಗಳಲ್ಲಿ ಎಲ್ಲ ದಾನಕ್ಕಿಂತ ಅನ್ನದಾನ ಬಹಳಷ್ಟು ಲೇಸು. ಸ್ನೇಹಿತರೆ ಇರುವವರೆಗೆ ಕಷ್ಟದಲ್ಲಿ ಇರುವವರಿಗೆ ತಮ್ಮಿಂದ ಆದಷ್ಟು ಸಹಾಯ ಮಾಡಿ, ಹಸಿದವರಿಗೆ ಅನ್ನ ನೀಡಿ. ನಾವು ಸತ್ತ ನಂತರ ನಾವು ಇಲ್ಲಿಂದ ಏನನ್ನು ಹೊತ್ತು ಹೋಗಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಳ್ಳಿ.

By admin

Leave a Reply

Your email address will not be published. Required fields are marked *