ಬೇರೆಯವರು ಧರಿಸಿದ ಬಟ್ಟೆ ಹಾಗೂ ಆಭರಣ ನಾವು ಧರಿಸಿದರೆ ಏನಾಗುತ್ತೆ ಗೊತ್ತಾ. ಈ ವಿಷ್ಯ ತಿಳಿಯದೆ ಈ ತಪ್ಪು ಮಾಡಬೇಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಬೇರೆಯವರು ಧರಿಸಿದ ಬಟ್ಟೆ ಆಭರಣ ಯಾವತ್ತು ಧರಿಸಬಾರದು, ನಾನಾ ತರಹದ ದೋಷಕ್ಕೆ ಒಳಗಾಗುತ್ತೇವೆ……..!!

ನಮ್ಮಲ್ಲಿ ಹೆಚ್ಚಿನ ಜನ ಬೇರೆಯವರು ಧರಿಸಿದಂತಹ ಬಟ್ಟೆಗಳನ್ನು ಹಾಗೂ ಆಭರಣಗಳನ್ನು ಧರಿಸಿಕೊಳ್ಳುತ್ತಾರೆ. ಆದರೆ ಅದು ಆ ವ್ಯಕ್ತಿಯ ಮೇಲೆ ಪ್ರೀತಿ ವಿಶ್ವಾಸದಿಂದ ಇರಬಹುದು ಅಥವಾ ಬೇರೆ ಯಾವುದೇ ಕಾರಣವಾಗಿರಬಹುದು ಅವರುಗಳ ಬಟ್ಟೆಗಳನ್ನು ಹಾಗೂ ಅವರ ಆಭರಣಗಳನ್ನು ಧರಿಸಿಕೊಳ್ಳುತ್ತಿರುತ್ತಾರೆ.

ಆದರೆ ಯಾವುದೇ ಕಾರಣಕ್ಕೂ ಕೂಡ ಆ ರೀತಿಯಾದಂತಹ ತಪ್ಪು ಕೆಲಸವನ್ನು ಮಾಡಬಾರದು. ಬದಲಿಗೆ ಯಾವುದೇ ಒಬ್ಬ ವ್ಯಕ್ತಿ ಅವನು ಜೀವಂತವಾಗಿದ್ದರೆ ಅ ವನಾಗಿ ಅವನ ಬಟ್ಟೆಗಳನ್ನು ನಿಮಗೆ ಹಾಕಿಕೊಳ್ಳಲು ಕೊಟ್ಟರೆ ಹಾಗೂ ಅವನ ಆಭರಣಗಳನ್ನು ಕೊಟ್ಟರೆ ಅವುಗಳನ್ನು ನೀವು ಹಾಕಿ ಮತ್ತೆ ಅವರಿಗೆ ಕೊಡುವುದು ಉತ್ತಮ. ಹಾಗೇನಾದರೂ ಅವನು ಜೀವಂತವಾಗಿಲ್ಲದೆ ಅವನ ಬಟ್ಟೆಗಳು ಆಭರಣಗಳು ನಿಮ್ಮ ಬಳಿ ಇದ್ದು ಅದನ್ನು ನೀವು ಹಾಕಿಕೊಳ್ಳುತ್ತಿದ್ದರೆ ಅದು ಖಂಡಿತವಾಗಿಯೂ ತಪ್ಪು.

ಹೌದು ಅವುಗಳನ್ನು ನೀವು ಕಡ್ಡಾಯವಾಗಿ ಧರಿಸಲೇಬಾರದು ಏಕೆ ಎಂದರೆ ಆ ವ್ಯಕ್ತಿಯಲ್ಲಿ ಇರುವಂತಹ ಪಾಪ ಕರ್ಮಗಳು ಹಾಗೂ ಅವನಲ್ಲಿ ಯಾವ ರೀತಿಯ ದೋಷಗಳು ಇರುತ್ತವೆಯೋ ಅವೆಲ್ಲವೂ ಸಹ ನಿಮಗೆ ಬರುತ್ತದೆ ಎನ್ನುವ ನಂಬಿಕೆ ಇದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ನಿಯಮವನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.

ಹಾಗೂ ಇದಕ್ಕೆ ಒಂದು ಉದಾಹರಣೆಯನ್ನು ನೋಡುವುದಾದರೆ ದ್ವಾಪರ ಯುಗದ ಅಂತ್ಯದಲ್ಲಿ ಶ್ರೀ ಕೃಷ್ಣ ತನ್ನ ಅವತಾರವನ್ನು ಮುಗಿಸಿ ವೈಕುಂಠಕ್ಕೆ ಹೊರಟು ಹೋಗುತ್ತಾನೆ. ತಮ್ಮ ಮೊಮ್ಮಗನಾದಂತಹ ಪರೀಕ್ಷಿತನನ್ನು ಸಿಂಹಾಸನದಲ್ಲಿ ಕೂರಿಸಿದಂತಹ ಪಾಂಡವರು ದ್ರೌಪದಿ ಸಹಿತ ಮಹಾಪ್ರಸ್ಥಾನಕ್ಕೆ ಹೊರಟುಬಿಡುತ್ತಾರೆ. ಆ ಸಮಯದಲ್ಲಿ ಸಂಪೂರ್ಣವಾಗಿ ಕಲಿಯುಗ ಕಾಲನ್ನು ಇಟ್ಟಿರುತ್ತದೆ. ಪರೀಕ್ಷಿತನಾದಂತಹ ತನ್ನ ತಾತಂದಿರಿನಂತೆ ಒಳ್ಳೆಯ ರಾಜ್ಯಭಾರವನ್ನು ಮಾಡುತ್ತಿರುತ್ತಾನೆ. ಹಾಗೂ ನ್ಯಾಯಯುತವಾಗಿ ಪ್ರಜೆಗಳೊಡನೆ ನಡೆದುಕೊಳ್ಳುತ್ತಿರುತ್ತಾನೆ.

ಹೀಗಿರಬೇಕಾದರೆ ಒಂದು ದಿನ ಪರೀಕ್ಷಿತ ಹೊರಗಡೆ ತಿರುಗಾಡಬೇಕು ಎಂದು ಹೋಗಿರುತ್ತಾನೆ. ಆಗ ಅಲ್ಲೊಂದು ಕಡೆ ಹಸುವಿನ ರೂಪದಲ್ಲಿ ಇದ್ದಂತಹ ಭೂದೇವಿ ಸರಸ್ವತಿ ನದಿ ತೀರದಲ್ಲಿ ಅಳುತ್ತಾ ಕುಳಿತಿರುತ್ತಾಳೆ. ಅದೇ ಸಮಯದಲ್ಲಿ ಅಲ್ಲಿಗೆ ಧರ್ಮ ಕೂಡ ಎತ್ತಿನ ರೂಪದಲ್ಲಿ ಬರುತ್ತದೆ. ಭೂದೇವಿಯ ಕಣ್ಣೀರನ್ನು ಕಂಡಂತಹ ಆ ಒಂದು ಎತ್ತು ಭೂದೇವಿಗೆ ಯಾಕೆ ನೀನು ಅಳುತ್ತಿದ್ದೀಯ ಎಂದು ಕಾರಣವನ್ನು ಕೇಳುತ್ತದೆ.

ಆಗ ಭೂದೇವಿ ಹೇಳುತ್ತಾಳೆ ಈ ಭೂಮಿಯ ಮೇಲೆ ಶ್ರೀ ಕೃಷ್ಣ ಇರುವವರೆಗೂ ನಾವೆಲ್ಲರೂ ಸುಖವಾಗಿ ಇದ್ದೆವು. ಈಗ ಕಲಿ ಪ್ರವೇಶವಾಗಿದೆ ಆದ್ದರಿಂದ ಇನ್ನು ಮುಂದೆ ನಮಗೆ ಇದೇ ಗತಿ ಎಂದು ಹೇಳುತ್ತಾಳೆ. ಕಲಿಯನ್ನು ಬೈಯುತ್ತಿರುವುದನ್ನು ಕೇಳಿದಂತಹ ಕಲಿ ಅಲ್ಲಿಗೆ ಬಂದವನೇ ಅವರಿಬ್ಬರನ್ನು ಮತ್ತೆ ಹಿಂಸೆ ಕೊಡುವುದಕ್ಕೆ ಶುರು ಮಾಡುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *