ಹೆಲಿಕಾಪ್ಟರ್ ಗಂಟೆಗೆ ಹಾಗೂ ದಿನಕ್ಕೆ ಎಷ್ಟು ಖರ್ಚು ಗೊತ್ತಾ ? ಬಾಡಿಗೆ ತಗೊಬೇಕು ಅಂದರೆ ಎಷ್ಟು ಹಣ ಬೇಕು ನೋಡಿ

ಹೆಲಿಕಾಪ್ಟರ್ ಗೆ ಗಂಟೆಗೆ, ದಿನಕ್ಕೆ ಎಷ್ಟು ದುಡ್ಡು……..??

WhatsApp Group Join Now
Telegram Group Join Now

ಚುನಾವಣೆ ಹತ್ತಿರ ಬಂದ ಕೂಡಲೇ ರಾಜಕಾರಣಿಗಳ ಹಾರಾಟ ಶುರುವಾಗಿದೆ. ಆದರೆ ಹೆಲಿಕಾಪ್ಟರ್ ನಲ್ಲಿಯೇ ಓಡಾಡುವುದಕ್ಕೆ ಶುರು ಮಾಡಿದ್ದಾರೆ. ಹಾಗಾದರೆ ಈ ಹೆಲಿಕಾಪ್ಟರ್ ಗಳು ಯಾರದ್ದು? ಹಾಗಾದರೆ ಹೆಲಿಕಾಪ್ಟರ್ ಗಳ ಬಾಡಿಗೆ ಎಷ್ಟೆಷ್ಟು ಇರುತ್ತದೆ? ಒಂದು ಗಂಟೆಗೆ, ದಿನಕ್ಕೆ ಎಷ್ಟು ಬಾಡಿಗೆ ಕೊಡಬೇಕಾಗುತ್ತದೆ, ಬಿಜೆಪಿ ದಿನಕ್ಕೆ ಎಷ್ಟು ಹೆಲಿಕಾಫ್ಟರ್ ಬಳಸುತ್ತೆ?

ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಎಷ್ಟು ಹೆಲಿಕಾಪ್ಟರ್ ಬಳಸುತ್ತದೆ? ಹೆಲಿಕಾಪ್ಟರ್ ಗಳಿಗೆ ದುಡ್ಡು ಕೊಡುವುದು ಯಾರು? ಹೀಗೆ ರಾಜಕಾರಣಿ ಗಳಿಗೂ ಹಾಗೂ ಹೆಲಿಕಾಪ್ಟರ್ ಗೂ ಇರುವಂತಹ ಸಂಬಂಧದ ಬಗ್ಗೆ ಈ ದಿನ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಹಾಗಾದರೆ ಮೊದಲನೆಯದಾಗಿ ತಿಳಿದುಕೊಳ್ಳಬೇಕಾದಂತ ವಿಷಯ ಏನು ಎಂದರೆ ಹೆಲಿಕಾಫ್ಟರ್ ಅನ್ನು ಯಾರು ಪೂರೈಸುತ್ತಾರೆ?

ರಾಜ್ಯದಲ್ಲಿ ರಾಜಕಾರಣಿಗಳು ಹೆಲಿಕಾಪ್ಟರ್ ನಲ್ಲಿ ಓಡಾಡುತ್ತಿದ್ದಾರೆ. ಚುನಾವಣೆ ಬಂದಾಗ ಹಾಗೂ ಅಗತ್ಯವಿದ್ದಾಗ ಬಾಡಿಗೆಗೆ ಹೆಲಿಕಾಪ್ಟರ್ ಗಳನ್ನು ಪಡೆದುಕೊಳ್ಳುತ್ತಾರೆ. ಹೆಲಿಕಾಪ್ಟರ್ ಗಳನ್ನು ಬಾಡಿಗೆಗೆ ನೀಡುವಂತಹ ಹಲವಾರು ಸಂಸ್ಥೆಗಳು ಇವೆ. ಹಾಗೂ ರಾಜ್ಯದಲ್ಲಿಯೂ ಸಹ ಹಲವಾರು ಸಂಸ್ಥೆಗಳು ಇವೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಹೆಲಿಕಾಪ್ಟರ್ ಗಳಿಗೆ ಎಷ್ಟರಮಟ್ಟಿಗೆ ಬೇಡಿಕೆಗಳು ಬರುತ್ತದೆ ಎಂದರೆ ನಮ್ಮ ರಾಜ್ಯದ ಹೆಲಿಕಾಫ್ಟರ್ ಗಳು ಸಾಲುವುದಿಲ್ಲ ಎಂದು.

ನಮ್ಮ ಪಕ್ಕದ ರಾಜ್ಯದ ಮಹಾರಾಷ್ಟ್ರ ಆಂಧ್ರಪ್ರದೇಶ ದೆಹಲಿ ಕೊಲ್ಕತ್ತಾ ಗೋವಾ ರಾಜಸ್ಥಾನದಿಂದಲೂ ಸಹ ಹೆಲಿಕಾಪ್ಟರ್ ಗಳನ್ನು ಬಾಡಿಗೆಗೆ ತರಲಾಗಿದೆ. ಒಟ್ಟಾರೆಯಾಗಿ 150 ಹೆಲಿಕಾಪ್ಟರ್ ಮತ್ತು ಮಿನಿ ವಿಮಾನ ಗಳನ್ನು ಬುಕ್ ಮಾಡಿ ರಾಜ್ಯಕ್ಕೆ ತರಲಾಗಿದೆ. ಹಾಗಾದರೆ ಹೆಲಿಕಾಫ್ಟರ್ ಬಾಡಿಗೆ ಎಷ್ಟು ಗೊತ್ತಾ? ಹೆಲಿಕಾಪ್ಟರ್ ಗಳಿಗೆ ಬಾಡಿಗೆ ಎಷ್ಟಿರಬಹುದು ಎಂದು ಪ್ರತಿಯೊಬ್ಬರಲ್ಲಿಯೂ ಸಹ ಪ್ರಶ್ನೆ ಮೂಡುತ್ತದೆ. ಅದನ್ನು ಕೇಳಿದರೆ ನಿಜಕ್ಕೂ ಒಂದು ಕ್ಷಣ ಆಶ್ಚರ್ಯವಾಗುತ್ತದೆ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಹೆಲಿಕಾಪ್ಟರ್ ಗಳ ಬೆಲೆ ಅದರ ಇಂಜಿನ್ ಹಾಗೂ ಸೀಟಿಂಗ್ ಕೆಪ್ಯಾಸಿಟಿ ಮೇಲೆ ಡಿಪೆಂಡ್ ಆಗಿರುತ್ತದೆ. ಸಾಮಾನ್ಯವಾಗಿ ಹೆಲಿಕಾಪ್ಟರ್ ಸಂಸ್ಥೆಗಳು ಗಂಟೆಗೆ ಎಷ್ಟು? ಇಡೀ ದಿನಕ್ಕೆ ಇಷ್ಟು ಎಂಬಂತೆ ಬಾಡಿಗೆಯನ್ನು ಫಿಕ್ಸ್ ಮಾಡಿರುತ್ತದೆ. ಗಂಟೆಗೆ 2,10,000 ದಿಂದ 2,30,000 ಸಾವಿರದವರೆಗೆ ಇರುತ್ತದೆ. ಅದೇ ರೀತಿ ದಿನಕ್ಕೆ ಸಿಂಗಲ್ ಇಂಜಿನ್ ಹೆಲಿಕಾಫ್ಟರ್ ಗೆ 7 ಲಕ್ಷ ಬಾಡಿಗೆ ಇದೆ.

ಹಾಗೂ ಡಬಲ್ ಇಂಜಿನ್ ಹೆಲಿಕಾಫ್ಟರ್ ಗೆ 10 ಲಕ್ಷದವರೆಗೆ ಇರುತ್ತದೆ. ಹೆಚ್ಚಿನ ಹೆಲಿಕಾಫ್ಟರ್ ಗಳು ನಾಲ್ಕು ಸೀಟ್ ಕೆಪಾಸಿಟಿ ಯದ್ದಾಗಿರುತ್ತದೆ. ಆರು ಸೀಟ್ ಇರುವಂತಹ ಹೆಲಿಕಾಫ್ಟರ್ ಗಳನ್ನು ಹೆಚ್ಚಾಗಿ ಹೈದರಾಬಾದ್ ನಿಂದ ತರಿಸಿಕೊಳ್ಳಲಾಗುತ್ತದೆ. ಅದೇ ಪ್ರೈವೇಟ್ ಜೆಟ್ ಅಥವಾ ಖಾಸಗಿ ವಿಮಾನವನ್ನು ಬಾಡಿಗೆಗೆ ಪಡೆದರೆ ಅದರ ದಿನ ಬಾಡಿಗೆ 12 ಲಕ್ಷ ರೂಪಾಯಿ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">