ಕೋಡಿ ಶ್ರೀ ರಾಜಕೀಯ ಭವಿಷ್ಯ ಈ ಬಾರಿ ಯಾವ ಪಕ್ಷ ನೋಡಿ……||
2023ರ ಚುನಾವಣೆಯ ಬಗ್ಗೆ ಕೋಡಿಮಠದ ಶ್ರೀಗಳು ಭವಿಷ್ಯವನ್ನು ನುಡಿದಿದ್ದಾರೆ. ಕೋಡಿ ಮಠದ ಶಿವಾನಂದ ಶಿವಯೋಗಿ ಶಿವರಾಜೇಂದ್ರ ಶ್ರೀಗಳು ರಾಜಕೀಯದ ಬಗ್ಗೆ ಭವಿಷ್ಯವನ್ನು ನುಡಿಯುವುದರಲ್ಲಿ ನಿಸ್ಸೀಮರು. ಇನ್ನು ಶ್ರೀಗಳು ನುಡಿದಂತಹ ಭವಿಷ್ಯ ನಿಜವಾದ ಬಗ್ಗೆ ಹಲವಾರು ಉದಾಹರಣೆಗಳು ಇದೆ. ಅನೇಕರು ನುಡಿಯುವ ಭವಿಷ್ಯದ ಬಗ್ಗೆ ಬಹಳಷ್ಟು ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.
ಜಾಗತಿಕ ವಿದ್ಯಮಾನಗಳಾಗಿರಬಹುದು, ಪ್ರಕೃತಿ ವಿಕೋಪ, ರಾಜಕೀಯ, ಹೀಗೆ ಬೇರೆ ಬೇರೆ ಕ್ಷೇತ್ರಗಳ ಬಗ್ಗೆ ಶ್ರೀಗಳು ಆಗಾಗ ಭವಿಷ್ಯವನ್ನು ನುಡಿಯುತ್ತಾರೆ. ಇದೀಗ ಕರ್ನಾಟಕದಲ್ಲಿ ಚುನಾವಣೆಯ ಕಾವು ಹೆಚ್ಚಾಗಿದೆ. ಮೇ 10ನೇ ತಾರೀಖಿಗೆ ಚುನಾವಣೆ ಸಹ ನಡೆಯಲಿದೆ. ಇದೇ ಸಂದರ್ಭದಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ಶಿವರಾಜೇಂದ್ರ ಶ್ರೀಗಳು ರಾಜಕೀಯದ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ.
ಚುನಾವಣೆಯ ದಿನಾಂಕ ಘೋಷಣೆಯಾದಂತಹ ಸಂದರ್ಭದಲ್ಲಿ ಕೂಡ ಕೋಡಿಮಠದ ಶ್ರೀಗಳು ಭವಿಷ್ಯವನ್ನು ನುಡಿದಿದ್ದರು. ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಾಗೆ ವಿಶ್ವದಾದ್ಯಂತ ಹೆಚ್ಚುತ್ತಿರುವಂತಹ ಕೊರೋನಾ ಭೀತಿ ಸಂಕ್ರಾಂತಿ ಭವಿಷ್ಯ ಸೇರಿದಂತೆ ಹಲವು ವಿಚಾರದ ಬಗ್ಗೆ ಅವರು ಮಾತನಾಡಿದ್ದರು. ರಾಜ್ಯದಲ್ಲಿ ಈ ವರ್ಷ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ? ಸಮ್ಮಿಶ್ರ ಸರ್ಕಾರ ಏನಾದರೂ ಬರುತ್ತದ? ಹೀಗೆ ಎಲ್ಲಾ ಪ್ರಶ್ನೆಗಳಿಗೂ ಸಹ ಸ್ವಾಮೀಜಿಯವರು ಉತ್ತರವನ್ನು ಕೊಡುತ್ತಾರೆ.
ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಯಾವುದೇ ಕಾರಣಕ್ಕೂ ಬರುವುದಿಲ್ಲ ಎನ್ನುವ ಭವಿಷ್ಯವನ್ನು ನುಡಿದಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಸ್ವಾಮೀಜಿಯವರು ಮುಂದಿನ ಸಿಎಂ ಯಾರಾಗುತ್ತಾರೆ ಎನ್ನುವ ಸ್ಪಷ್ಟವಾದಂತಹ ಭವಿಷ್ಯವನ್ನು ಸಹ ನುಡಿದಿದ್ದಾರೆ. ಕರ್ನಾಟಕ ರಾಜಕೀಯ ವಿಷಯವಾಗಿ ಪ್ರತಿಕ್ರಿಯಿಸಿ ಎಲ್ಲಾ ಪಕ್ಷಗಳು
ಒಡೆಯುತ್ತದೆ ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ! ಇದೀಗ ಈ ಮಾತುಗಳು ನಿಜವಾಗುತ್ತಿದೆ. ಒಂದು ಪಕ್ಷಕ್ಕೆ ಮಾತ್ರ ರಾಜ್ಯದಲ್ಲಿ ಅಧಿಕಾರ ಇದು 2023ರ ವರ್ಷದ ಕುರಿತಾಗಿ ಕೋಡಿ ಮಠದ ಸ್ವಾಮೀಜಿಗಳಾಗಿರುವಂತಹ ಡಾಕ್ಟರ್ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ನೀಡಿರುವಂತಹ ಭವಿಷ್ಯವಾಗಿದೆ. ಇದೀಗ ಅರಸೀಕೆರೆ ತಾಲೂಕಿನ ಕೋಡಿ ಮಠಕ್ಕೆ ಸಿದ್ದರಾಮಯ್ಯ ಅವರು ಭೇಟಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಈ ಹಿಂದೆ ಕೋಡಿ ಮಠಕ್ಕೆ ಭೇಟಿ ನೀಡಿ ಭವಿಷ್ಯ ಕೇಳಿದ್ದರು ಎಂಬ ಸಂಗತಿ ರಾಜಕೀಯವಾಗಿ ದೇಶದಾದ್ಯಂತ ಸದ್ದು ಮಾಡಿತ್ತು. ಆ ಬಳಿಕ ರಾಜಕೀಯದ ಹಲವಾರು ಘಟಾನುಘಟಿಗಳು ಚುನಾವಣೆ ಪೂರ್ವ ಹಾಗೂ ನಂತರ ಭೇಟಿ ನೀಡಿದಂತಹ ಸಾಕಷ್ಟು ಉದಾಹರಣೆಗಳು ಇದೆ. ಹಾಗಾಗಿ ಕೋಡಿ ಮಠದ ಶ್ರೀಗಳು ಏನೇ ಭವಿಷ್ಯ ಹೇಳಿದರು ಕೂಡ ಅದು ಸುದ್ದಿಯಾಗು ತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.