ಪ್ರಧಾನಿ ಮೋದಿಯವರ ವಿಮಾನ ಒಳಗೆ ಏನೆಲ್ಲಾ ಇರುತ್ತೆ ಗೊತ್ತಾ ? ಒಳಗೆ ಯಾರೆಲ್ಲಾ ಇರ್ತಾರೆ ನೋಡಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮೋದಿ ಜೊತೆ ವಿಮಾನದಲ್ಲಿ ಯಾರೆಲ್ಲಾ ಇರುತ್ತಾರೆ…..?

ಪ್ರಧಾನಿ ನರೇಂದ್ರ ಮೋದಿ ಅವರು ಬಳಸುವಂತಹ ಏರ್ ಇಂಡಿಯಾ ಒನ್ ವಿಮಾನ ಹೇಗಿದೆ? ಈ ವಿಮಾನದ ಒಳಗಡೆ ಏನೆಲ್ಲಾ ಇರುತ್ತದೆ ಗೊತ್ತಾ? ಹಾಗೂ ಇದರ ಒಳಗಡೆ ಎಷ್ಟು ಕ್ಯಾಬಿನ್ ಇರುತ್ತದೆ? ಈ ವಿಮಾನ ಎಷ್ಟು ವೇಗವಾಗಿ ಹಾರಬಲ್ಲದು? ಈ ವಿಮಾನದ ಸೆಕ್ಯೂರಿಟಿ ಸಿಸ್ಟಮ್ ಹೇಗೆಲ್ಲ ಇರುತ್ತದೆ? ಹಾಗೂ ಮೋದಿಯವರು ಈ ಒಂದು ವಿಮಾನದಲ್ಲಿ ಸಂಚರಿಸುವಾಗ ಯಾರೆಲ್ಲಾ ಇವರ ಜೊತೆ ಇರುತ್ತಾರೆ?

ಹೀಗೆ ಮೋದಿ ಅವರು ಬಳಸುವಂತಹ ಏರ್ ಇಂಡಿಯ ಒನ್ ವಿಮಾನದ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಸಂಚರಿಸುವಂತಹ ಈ ಒಂದು ವಿಮಾನದಲ್ಲಿ ಸೆಕ್ಯೂರಿಟಿ ಸಿಸ್ಟಮ್ ಬಹಳ ದೊಡ್ಡದಾಗಿರುತ್ತದೆ ಎಂದೇ ಹೇಳಬಹುದು.

ಅದರಲ್ಲೂ ಈ ಒಂದು ವಿಮಾನದಲ್ಲಿ ಮೋದಿಯವರಿಗೆ ಸೆಕ್ಯೂರಿಟಿ ಸಿಸ್ಟಮ್ ಅದ್ಭುತವಾಗಿರುತ್ತದೆ. ಹೌದು ಯಾವುದೇ ಒಂದು ದೇಶದ ಮುಖ್ಯಸ್ಥರು ಅಂದರೆ ಪ್ರಧಾನಿ ಹಾಗೂ ರಾಷ್ಟ್ರಪತಿಗಳ ಮೇಲೆ ದಾಳಿ ನಡೆದರೆ ಇಡೀ ದೇಶಕ್ಕೆ ಒಂದು ರೀತಿಯ ಅಪಮಾನ ಆದಂತೆ. ದೇಶದ ಮುಖ್ಯಸ್ಥರನ್ನೇ ರಕ್ಷಿಸುವುದಕ್ಕೆ ಆಗಲಿಲ್ಲ ಇನ್ನು ಇವರು ಹೇಗೆ ಜನರನ್ನು ರಕ್ಷಿಸುತ್ತಾರೆ ಎಂದು ಇಡೀ ಜಗತ್ತೇ ಹೀಯಾಳಿಸಿ ಮಾತನಾಡುತ್ತದೆ.

ಹೀಗಾಗಿ ಅವರ ರಕ್ಷಣೆ ಬಹಳ ಮುಖ್ಯವಾಗಿರುತ್ತದೆ. ಈ ಹಿಂದೆ ಏರ್ ಇಂಡಿಯಾ 747 ಜಂಬು ಜೆಟ್ ನಂತಹ ವಿಮಾನಗಳಲ್ಲಿ ಪ್ರಧಾನಿ ಹಾಗೂ ರಾಷ್ಟ್ರಪತಿ ಪ್ರಯಾಣಿಸುತ್ತಿದ್ದರು. ಇದರಲ್ಲಿ ಎಲ್ಲಾ ರೀತಿಯ ವಿಶೇಷ ವಾದ ಸೌಲಭ್ಯಗಳು ಇದ್ದವು. ಆದರೆ ಇದರಲ್ಲಿ ಸೆಕ್ಯೂರಿಟಿಯ ಕೊರತೆ ಇತ್ತು. 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ಏರ್ ಇಂಡಿಯಾ ಬೋಯಿಂಗ್ 747 ವಿಮಾನ ಏರಿ ಬ್ರಿಗ್ ಶೃಂಗಸಭೆಗೆ ಬ್ರೆಜಿಲ್ ಗೆ ಹೋಗಿದ್ದರು.

ಮೋದಿ ಇದ್ದಂತಹ ವಿಮಾನ ಹೋಗಿದ್ದಂತಹ ಹಾದಿಯಲ್ಲೇ ಸ್ವಲ್ಪ ಸಮಯದಲ್ಲಿಯೇ ತೆರಳಿದಂತಹ ಮಲೇಶಿಯಾ ಏರ್ ಲೈನ್ಸ್ ನ ವಿಮಾನ ಒಂದನ್ನು ಯುಕ್ರೇನ್ ನ ಭಂಡು ಕೋರರು ಹೊಡೆದುರುಳಿಸಿ ದರು ಇದರಲ್ಲಿ 298 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಈ ಕ್ಷಿಪಣಿ ದಾಳಿಯನ್ನು ತಡೆಯುವಂತಹ ಸಾಮರ್ಥ್ಯ ಮೋದಿ ಇದ್ದಂತಹ ಜಂಬು 747 ವಿಮಾನದಲ್ಲಿಯೂ ಸಹ ಇರಲಿಲ್ಲ.

ಈ ಘಟನೆಯ ಬಳಿಕ ಭಾರತದ ಪ್ರಧಾನಿ ರಾಷ್ಟ್ರಪತಿಗೆ ಸುರಕ್ಷಿತ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಇರುವಂತಹ ವಿಮಾನದ ಬಗ್ಗೆ ಚರ್ಚೆ ಶುರುವಾಯಿತು. ಬೋಯಿಂಗ್ ಕಂಪನಿಯಿಂದ ವಿಮಾನ 2018ರಲ್ಲಿ ಅಮೇರಿಕಾದ ಬೋಯಿಂಗ್ ಕಂಪನಿಗೆ ಎರಡು ವಿಶೇಷವಾದಂತಹ ವಿಮಾನಗಳ ತಯಾರಿಕೆಗೆ ಆರ್ಡರ್ ನೀಡಲಾಯಿತು. ಅಮೆರಿಕಾದ ಟೆಕ್ಸಾಸ್ ನ ಡೆಲ್ಲಾಸ್ ನಲ್ಲಿ ಈ ವಿಮಾನ ನಿರ್ಮಾಣದ ಕಾರ್ಯ ಶುರುವಾಯಿತು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *