ತುಲಾ ರಾಶಿಯವರಿಗೆ ಭಾಗ್ಯದ ಬಾಗಿಲು ತೆರೆದಿದಿ ಇನ್ನು ಯಾವುದಕ್ಕೂ ಭಯ ಪಡುವ ಅಗತ್ಯ ಇಲ್ಲ..ಮೇ ತಿಂಗಳ ಫಲ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ತುಲಾ ರಾಶಿಯವರಿಗೆ ಭಾಗ್ಯದ ಬಾಗಿಲು ತೆರೆದಿದೆ…..!! ಇನ್ನು ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ…..!!

ತುಲಾ ರಾಶಿಯವರಿಗೆ ಮೇ ತಿಂಗಳು ಯಾವ ರೀತಿಯ ಗ್ರಹಗಳ ಬದಲಾವಣೆಯಿಂದ ಶುಭ ಫಲಗಳು ಬರುತ್ತದೆ ಹಾಗೆಯೇ ಯಾವ ಗ್ರಹಗಳ ಬದಲಾವಣೆಯಿಂದ ಅಶುಭ ಫಲಗಳು ಬರುತ್ತದೆ ಎನ್ನುವುದರ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಅದಕ್ಕೂ ಮೊದಲು ಈ ಒಂದು ತಿಂಗಳಿನಲ್ಲಿ ಯಾವ ರೀತಿಯ ಗ್ರಹಗಳ ಬದಲಾವಣೆ ಇರುತ್ತದೆ ಎಂದು ತಿಳಿಯೋಣ.

ನಿಮ್ಮ ರಾಶಿಯ ಅಧಿಪತಿ ಶುಕ್ರ ಭಾಗ್ಯಸ್ಥಾನಕ್ಕೆ ಬರುತ್ತಿದ್ದಾನೆ ಅಂದರೆ ಇದರಿಂದ ನಿಮಗೆ ಒಳ್ಳೆಯದೇ ಆಗುತ್ತದೆ ಎಂದು ಹೇಳಬಹುದು. ಅದರಲ್ಲೂ ಭಾಗ್ಯಸ್ಥಾನದಲ್ಲಿ ಯಾವುದೇ ಗ್ರಹಗಳಿದ್ದರೂ ಕೂಡ ಅವೆಲ್ಲವೂ ನಿಮಗೆ ಒಳ್ಳೆಯ ಫಲಗಳನ್ನು ಕೊಡುತ್ತದೆ ಅದರಲ್ಲೂ ಬಹಳ ಮುಖ್ಯವಾಗಿ ನಿಮ್ಮ ರಾಶ್ಯಾಧಿಪತಿಯೇ ನಿಮ್ಮ ಭಾಗ್ಯದಲ್ಲಿ ಇರುವುದ ರಿಂದ ತುಂಬಾ ಒಳ್ಳೆಯ ಫಲಗಳನ್ನು ಅವನಿಂದ ನಿರೀಕ್ಷಿಸಬಹುದು.

ಕುಜ ನೀಚ ಸ್ಥಾನಕ್ಕೆ ಹೋಗುತ್ತಾನೆ. ಹಾಗಾಗಿ ನೀವು ಕುಜನಿಂದ ಯಾವುದೇ ರೀತಿಯ ಫಲಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವು ದಿಲ್ಲ. ಅವರು ನಿಮಗೆ ಸ್ವಲ್ಪ ಮಟ್ಟಿಗೆ ಕೆಟ್ಟ ಪ್ರಭಾವವನ್ನು ಬೀರಬಹುದು. ಅದೇ ರೀತಿಯಾಗಿ ತುಲಾ ರಾಶಿಯವರಿಗೆ ಮತ್ತೊಂದು ಖುಷಿಯ ವಿಚಾರ ಏನು ಎಂದರೆ ನಿಮಗೆ ಗುರುವಿನ ಬಲ ಪ್ರಾರಂಭವಾಗಿದೆ. ಕಳೆದ ಎಪ್ರಿಲ್ 21ನೇ ತಾರೀಖಿನಿಂದಲೇ ನಿಮಗೆ ಗುರುವಿನ ಬಲ ಅದ್ಭುತವಾಗಿದ್ದು

ಇನ್ನು ಮುಂದಿನ ವರ್ಷದವರಿಗೂ ಸಹ ಗುರು ನಿಮ್ಮನ್ನು ಕೈಹಿಡಿದು ನಡೆಸುತ್ತಾನೆ ಅಂದರೆ ನಿಮಗೆ ಯಾವುದೇ ರೀತಿಯ ಸಂಕಷ್ಟ ಸಮಸ್ಯೆಗಳು ಎದುರಾದರೂ ಅವೆಲ್ಲವನ್ನು ಸಹ ಸರಿಪಡಿಸುತ್ತಾ ನಿಮ್ಮನ್ನು ಮುಂದೆ ನಡೆಸುತ್ತಾನೆ. ಹಾಗಾಗಿ ನೀವು ಯಾವುದಕ್ಕೂ ಕೂಡ ಭಯಪಡುವ ಅಗತ್ಯ ಇಲ್ಲ. ಯಾಕೆ ಎಂದರೆ ಮುಂದೆ ಗುರಿ ಇದ್ದಾಗ ಹಿಂದೆ ಗುರು ಇರಲೇಬೇಕಾಗುತ್ತದೆ. ಆದ್ದರಿಂದ ಅವರು ನಿಮ್ಮ ಜೊತೆ ಇರುವುದರಿಂದ ನೀವು ಭಯಪಡುವ ಅವಶ್ಯಕತೆ ಇಲ್ಲ.

ಅದೇ ರೀತಿಯಾಗಿ ಇದೇ 2 ನೇ ತಾರೀಖು ಭಾಗ್ಯ ಸ್ಥಾನಕ್ಕೆ ಶುಕ್ರ ಬರುವುದರಿಂದ ತುಂಬಾ ಒಳ್ಳೆಯ ಕೆಲಸ ಕಾರ್ಯಗಳು, ಮನೆಯಲ್ಲಿ ಶುಭ ಸಮಾರಂಭಗಳು, ನಿಮ್ಮ ಕೆಲಸದಲ್ಲಿ ಅಭಿವೃದ್ಧಿಯಾಗುವುದು, ಇವೆಲ್ಲವನ್ನೂ ಸಹ ಶುಕ್ರ ನಿಮಗೆ ನೆರವೇರಿಸುತ್ತಾನೆ. ಹಾಗೆಯೇ ಸಪ್ತಮಾಧಿಪತಿಯಾಗಿರುವಂತಹ ಕುಜ ನೀಚ ಸ್ಥಾನದಲ್ಲಿ ಇರುವುದರಿಂದ ಅವನಿಂದ ಯಾವುದೇ ರೀತಿಯ ಒಳ್ಳೆಯ ನಿರೀಕ್ಷೆಯನ್ನು ನೀವು ಪಡೆಯಲು ಸಾಧ್ಯವಿಲ್ಲ.

ಅದರಲ್ಲೂ ಈ ಒಂದು ಕಾರಣದಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಯೂ ಸಹ ಕೆಲವೊಂದಷ್ಟು ಕಲಹ ಮನಸ್ಥಾಪಗಳನ್ನು ಉಂಟುಮಾಡು ತ್ತಾನೆ ಎಂದೇ ಹೇಳಬಹುದು. ಹಾಗಾಗಿ ಸತಿಪತಿಯರಿಬ್ಬರೂ ಕೂಡ ನಿಮ್ಮ ಮಾತಿನಲ್ಲಿ ಬಹಳಷ್ಟು ಎಚ್ಚರಿಕೆಯಿಂದ ಇರುವುದು ಮುಖ್ಯ ಹಾಗೇನಾದರೂ ನಿಮ್ಮ ಮಾತಿನಲ್ಲಿ ತಾಳ್ಮೆ ಹಿಡಿದ ಇಲ್ಲದಿದ್ದರೆ ನಿಮ್ಮ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *