ಮನೆಯ ಮುಖ್ಯ ದ್ವಾರಕ್ಕೆ ಇದನ್ನು ಕಟ್ಟಿದರೆ ಹಣ ಹರಿದು ಬರುತ್ತೆ..ಈ ಕೆಲಸ ಮಾಡಿ ಸಾಕು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮನೆಯ ಮುಖ್ಯ ದ್ವಾರಕ್ಕೆ ಇದನ್ನು ಕಟ್ಟಿದರೆ ಹಣ ಹರಿದು ಬರುತ್ತೆ……!!

ಮನೆಯ ವಾಸ್ತುವಿನಲ್ಲಿ ಮನೆಯ ಮುಖ್ಯದ್ವಾರಕ್ಕೆ ಅತಿ ಮಹತ್ವದ ಸ್ಥಾನ ಇದೆ. ಮನೆಯ ವಾಸ್ತು ಶಾಸ್ತ್ರ ಆರಂಭವಾಗುವುದೆ ಇಲ್ಲಿಂದ. ಹೀಗಾಗಿ ಮೊದಲನೆಯದಾಗಿ ಇದರ ಬಗ್ಗೆ ಗಮನ ಹರಿಸಿ ನಂತರವಷ್ಟೇ ಉಳಿದ ಭಾಗಗಳತ್ತ ನೋಡಬೇಕು. ಈ ಹಿನ್ನೆಲೆಯಲ್ಲಿ ಮುಖ್ಯ ದ್ವಾರಕ್ಕೆ ಏನೆಲ್ಲ ವಾಸ್ತು ನಿಯಮಗಳು ಇವೆ ಅನ್ನುವಂತಹ ವಿವರ ಇಲ್ಲಿದೆ.

ಉತ್ತರ ದಿಕ್ಕು, ಉತ್ತರ ದಿಕ್ಕಿಗೆ ಮುಖ ಮಾಡಿದಂತಹ ಮನೆಗೆ ಮುಖ್ಯ ದ್ವಾರ ಯಾವಾಗಲೂ ಈಶಾನ್ಯ ದಿಕ್ಕಿಗೆ ಇರುವಂತೆ ನೋಡಿಕೊಳ್ಳಬೇಕು. ಯಾಕೆ ಎಂದರೆ ಪೂರ್ವದಿಂದ ಸೂರ್ಯನ ಬಿಸಿಲು ಹರಿಯುತ್ತಾ ಪಶ್ಚಿಮದ ಕಡೆಗೆ ಸಾಗುತ್ತದೆ. ಇದಲ್ಲದೆ ಸ್ವಲ್ಪ ಮಧ್ಯ ಭಾಗದಲ್ಲೂ ಬಾಗಿಲು ಮತ್ತು ಈಶಾನ್ಯ ಭಾಗದಲ್ಲಿ ಕಿಟಕಿಯನ್ನು ಅಳವಡಿಸಬಹುದು. ದಕ್ಷಿಣ ದಿಕ್ಕು ಮನೆ ದಕ್ಷಿಣಕ್ಕೆ ಮುಖ ಮಾಡಿದ್ದರೆ

ಆಗ್ನೇಯ ಭಾಗದಲ್ಲಿ ಬಾಗಿಲು ಇದ್ದರೆ ಶ್ರೇಯಸ್ಕರ. ಆದರೆ ನೈರುತ್ಯ ದಿಕ್ಕು ಅಥವಾ ಆದರೆ ಗೋಡೆಯ ಸರಿ ಮಧ್ಯಭಾಗದಲ್ಲಿ ಮಾತ್ರ ಮುಖ್ಯ ದ್ವಾರ ಇರಬಾರದು. ದಕ್ಷಿಣ ದಿಕ್ಕಿಗೆ ಮುಖ ಮಾಡಿ ಮುಖ್ಯ ದ್ವಾರ ಇದ್ದರೆ ಯಾವಾಗಲೂ ಉತ್ತರದಲ್ಲೂ ಕೂಡ ಒಂದು ಬಾಗಿಲು ಇರಲೇಬೇಕು. ಪೂರ್ವ ದಿಕ್ಕು ಪೂರ್ವಕ್ಕೆ ಮನೆ ಮುಖ ಮಾಡಿದ್ದರೆ ವಾಸ್ತು ಪ್ರಕಾರ ಈಶಾನ್ಯ ಭಾಗದಲ್ಲಿ

ಮುಖ್ಯ ದ್ವಾರ ಇರಬೇಕು ಇದರಿಂದ ಸಂಪತ್ತು ಆರೋಗ್ಯ ಮತ್ತು ನೆಮ್ಮದಿ ವೃದ್ಧಿಯಾಗುತ್ತದೆ. ಪಶ್ಚಿಮದಿಕ್ಕು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಮುಖ್ಯದ್ವಾರ ಇದ್ದರೆ ಯಾವಾಗಲೂ ವಾಯುವ್ಯ ಭಾಗದಲ್ಲಿ ಬಾಗಿಲು ಇರಲಿ. ವಾಸ್ತು ನಿಯಮದ ಪ್ರಕಾರ ಇದರಿಂದ ಮನೆ ನಿವಾಸಿಗಳಿಗೆ ಶ್ರೇಯಸ್ಸು ಆಗುತ್ತದೆ. ಬೇರೆ ಭಾಗಗಳು ಅಷ್ಟೇನು ಶ್ರೇಯಸ್ಕರವಲ್ಲ ಎಂದು ವಾಸ್ತು ಹೇಳುತ್ತದೆ. ದ್ವಾರ ಹೀಗಿರಲಿ, ಅಂದರೆ ಮುಖ್ಯದ್ವಾರವೂ ಇತರೆ ಬಾಗಿಲುಗಳಿಗಿಂತ

ಹೆಚ್ಚು ವಿಸ್ತಾರವಾಗಿರಲಿ ಎರಡು ಬಾಗಿಲು ಇರುವುದು ಶ್ರೇಯಸ್ಕರ. ಇಲ್ಲಿಗೆ ಅತ್ಯುತ್ತಮ ಗುಣಮಟ್ಟ ಇರುವಂತಹ ಮರವನ್ನು ಬಳಸಿ. ಬಾಗಲು ತೆರೆಯುವಾಗ ಮತ್ತು ಮುಚ್ಚುವಾಗ ಶಬ್ದ ಮಾಡದಿರಲಿ ಮನೆಯ ಮುಖ್ಯ ದ್ವಾರಕ್ಕೆ ಬೆಳಕು ಬೀಳಲಿ. ಬಾಗಿಲನ್ನು ಬೆಳಗುವಂತಹ ದೀಪಗಳು ಇರಲೇಬೇಕು. ಯಾವಾಗಲೂ ಮುಖ್ಯ ದ್ವಾರ ಸ್ವಚ್ಛವಾಗಿರಲಿ. ಸುಂದರವಾದಂತಹ ಮನೆಯ ಹೆಸರು ಇರಲಿ. ಇದರಿಂದ ಸಂತೋಷ, ಶ್ರೇಯಸ್ಸು ಮತ್ತು ಸಂಪತ್ತು ವೃದ್ಧಿಸುತ್ತದೆ.

ದ್ವಾರಕ್ಕೆ ಹೊಸ್ತಿಲು ಇರಲಿ. ಇದರಿಂದ ಸಂಪತ್ತು ನಾಶವಾಗುವುದು ತಪ್ಪುತ್ತದೆ. ಸುಂದರವಾದಂತಹ ಕಲಾಕೃತಿ ಮತ್ತು ಪೇಂಟಿಂಗ್ ಅನ್ನು ತೂಗುಹಾಕಿ. ಎತ್ತರ ಹೆಚ್ಚಿರಲಿ, ಮುಖ್ಯದ್ವಾರವು ಇತರೆ ಬಾಗಿಲುಗಳಿ ಗಿಂತ ಹೆಚ್ಚು ಎತ್ತರವನ್ನು ಹೊಂದಿರಬೇಕು ನೆಲಮಟ್ಟದಿಂದ ಎತ್ತರವಾಗಿ ಇರುವಂತೆ ಮಾಡಿ. ಅಂದರೆ ತಳಪಾಯ ನೆಲದಿಂದ ಒಂದೆರಡು ಮೆಟ್ಟಿಲಷ್ಟು ಮೇಲೆ ಇರಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *