ಸಿಂಹ ರಾಶಿ ಜೂನ್ ತಿಂಗಳಿನಲ್ಲಿ ಅದೃಷ್ಟ ಕೈ ಸೇರುತ್ತದೆ..ಸುಖ ನೆಮ್ಮದಿ ಹಣ ಹುಡುಕಿ ಬರಲಿದೆ…

ಸಿಂಹ ರಾಶಿ ಜೂನ್ 2023 ಮಾಸ ಭವಿಷ್ಯ…….||

WhatsApp Group Join Now
Telegram Group Join Now

ಮೊದಲನೆಯದಾಗಿ ಸಿಂಹ ರಾಶಿಯವರ ಮಾಸ ಭವಿಷ್ಯ ತಿಳಿದುಕೊಳ್ಳು ವುದಕ್ಕೂ ಮೊದಲು ಗ್ರಹಗಳ ಬದಲಾವಣೆ ಯಾವ ರೀತಿ ಇರುತ್ತದೆ ಎಂಬುದರ ಬಗ್ಗೆ ತಿಳಿಯೋಣ. 7ನೇ ತಾರೀಖು ಆರನೇ ತಿಂಗಳು 2023 ಕ್ಕೆ ಬುಧ ವೃಷಭ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ. ಹಾಗೆಯೇ 15ನೇ ತಾರೀಖು ರವಿ ಮಿಥುನ ರಾಶಿಯನ್ನು ಪ್ರವೇಶ ಮಾಡಿದರೆ 23 ನೇ ತಾರೀಖು ಬುಧ ಮಿಥುನ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ.

ಹಾಗೆಯೇ 30ನೇ ತಾರೀಖು ಕುಜ ಸಿಂಹ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ. ಈ ಬದಲಾವಣೆಯಾಗುತ್ತಿರುವಂತಹ ಗ್ರಹಗಳು ಮತ್ತು ಇವಾಗಲೇ ತಮ್ಮ ಸ್ಥಾನದಲ್ಲಿ ಸ್ಥಿತದಲ್ಲಿರುವಂತಹ ಗ್ರಹಗಳು ಸಿಂಹ ರಾಶಿಯವರಿಗೆ ಯಾವ ಯಾವ ಸ್ಥಾನದಲ್ಲಿ ಸಂಚಾರವನ್ನು ಮಾಡುತ್ತದೆ ಎನ್ನುವುದರ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ರವಿ 10 ಮತ್ತು 11ನೇ ಮನೆಯಲ್ಲಿ ಸಂಚಾರವನ್ನು ಮಾಡಿದರ

ಕುಜ 12 ಮತ್ತು 1ನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಹಾಗೆಯೇ ಬುಧ 9 10 ಮತ್ತು 11ನೇ ಮನೆಯಲ್ಲಿ ಸಂಚಾರವನ್ನು ಮಾಡಿದರೆ ಗುರು 9ನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಹಾಗೆಯೇ ಶುಕ್ರ 12ನೇ ಮನೆಯಲ್ಲಿ ಸಂಚಾರ ಮಾಡಿದರೆ, ಶನಿ 7ನೇ ಮನೆಯಲ್ಲಿ ಸಂಚಾರವನ್ನು ಮಾಡುತ್ತಾನೆ. ಇದರ ಜೊತೆ ರಾಹು 9 ಮತ್ತು ಕೇತು 3ನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ.

See also  ತುಲಾ ರಾಶಿ ಆಗಸ್ಟ್ 2024 ತಿಂಗಳ ಭವಿಷ್ಯ ಆಗಸ್ಟ್ ತಿಂಗಳಿನಲ್ಲಿ ಈ ಒಂದು ಪವಾಡ ನೋಡುವಿರಿ...

ಈ ಸಂಚಾರ ಮಾಡುವಂತಹ ಗ್ರಹಗಳಿಂದಾಗಿ ಸಿಂಹ ರಾಶಿಯವರಿಗೆ ಏನೇನು ಲಾಭಗಳು ಸಿಗುತ್ತವೆ ಹಾಗೆ ಏನೇನು ನಷ್ಟಗಳು ಸಿಗುತ್ತದೆ ಎಂದು ನೋಡುವುದಾದರೆ. ಅದಕ್ಕೂ ಮೊದಲು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ನೀವು ಯಾವುದೇ ರೀತಿಯ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಬೇಕು ಎಂದರೆ ನಿಮ್ಮ ಜಾತಕದ ಆಧಾರದ ಮೇಲೆ ನಿಮ್ಮ ಜಾತಕವನ್ನು ತೋರಿಸಿಕೊಳ್ಳುವುದರ ಮೂಲಕ

ನೀವು ನಿಮ್ಮ ಶುಭಫಲಗಳು ಹಾಗೆ ನಷ್ಟಗಳನ್ನು ತಿಳಿದುಕೊಳ್ಳಬಹುದು ಬದಲಿಗೆ ನಿಮಗೆ ಗ್ರಹಗಳ ಆಧಾರದ ಮೇಲೆ ಹೇಳುವುದಾದರೆ ಗೋಚಾರದ ಫಲಗಳನ್ನು ತಿಳಿದುಕೊಳ್ಳಬಹುದು. ಮೊದಲನೆಯದಾಗಿ ಸಿಂಹ ರಾಶಿಯವರಿಗೆ ಈ ತಿಂಗಳು ವಿಪರೀತವಾಗಿ ಧನಾಗಮನ ಎನ್ನುವುದು ಉಂಟಾಗುತ್ತದೆ. ಆದರೆ 12ನೇ ಮನೆಯಲ್ಲಿ ಅಂದರೆ ವ್ಯಯ ಸ್ಥಿತಿಯಲ್ಲಿ ಶುಕ್ರ ಇರುವುದರಿಂದ ನಿಮ್ಮಲ್ಲಿರುವಂತಹ ಹಣ ಎಲ್ಲವೂ ಸಹ ಒಂದಲ್ಲ ಒಂದು ಕಾರಣಕ್ಕೆ ಖರ್ಚಾಗುತ್ತಿರುತ್ತದೆ.

ಅದರಲ್ಲೂ ಅನಾರೋಗ್ಯ ಸಮಸ್ಯೆ ಉಂಟಾಗಿ ಆಸ್ಪತ್ರೆಗಳಿಗೆ ಹೆಚ್ಚಿನ ಹಣ ಖರ್ಚು ಮಾಡುವಂತಹ ಸನ್ನಿವೇಶಗಳು ಬರುತ್ತದೆ. ಹಾಗೆಯೇ ನಿಮ್ಮ ಸುಖ ಭೋಗಗಳಿಗಾಗಿ ಕೆಲವೊಂದಷ್ಟು ವಸ್ತುಗಳನ್ನು ಖರೀದಿ ಮಾಡುತ್ತೀರಿ. ಜೊತೆಗೆ ಹಣಕಾಸಿನ ಮೂಲಗಳು ಹೆಚ್ಚುತ್ತಾ ಹೋಗುತ್ತದೆ. ಹಾಗೆಯೇ ಶನಿಯ ದೃಷ್ಟಿ ನಿಮ್ಮ ರಾಶಿಯ ಮೇಲೆ ನೇರವಾಗಿ ಬೀಳುತ್ತಿರುವುದರಿಂದ ಒಂದು ರೀತಿಯ ಅಹಂಕಾರವನ್ನು ನಿಮಗೆ ತುಂಬುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">