ಖರ್ಗೆ ಮೊಮ್ಮಗಳು ಈಗ ಬ್ರಾಹ್ಮಣರ ಮನೆ ಸೊಸೆ……..!!
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಬಗ್ಗೆ ನಿಮಗೆಷ್ಟು ಗೊತ್ತು? ಇವರನ್ನು ಗಾಂಧಿ ಕುಟುಂಬದ ಕಟ್ಟಪ್ಪ ಎಂದು ಕರೆಯುವುದು ಯಾಕೆ? ಇವರ ಮಕ್ಕಳಿಗೂ ಹಾಗೂ ಗಾಂಧಿ ಕುಟುಂಬಕ್ಕೂ ಏನು ಸಂಬಂಧ? ಇವರ ಮಕ್ಕಳು ಏನು ಮಾಡುತ್ತಿದ್ದಾರೆ? ಇವರ ಮೊಮ್ಮಗಳು ಬ್ರಾಹ್ಮಣ ಕುಟುಂಬದ ಸೊಸೆಯಾಗಿದ್ದು ಹೇಗೆ? ಖರ್ಗೆ ಅವರ ಕ್ರಿಕೆಟ್ ಪ್ರೇಮ ಎಂತಹದ್ದು?
ಹೀಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಬಂಧ ಪಟ್ಟಂತೆ ಹಾಗೂ ಅವರ ಕುಟುಂಬಕ್ಕೆ ಸಂಬಂಧಪಟ್ಟಂತೆ ಯಾರಿಗೂ ಕೂಡ ತಿಳಿಯದೆ ಇರುವಂತಹ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮಲ್ಲಿಕಾರ್ಜುನ ಖರ್ಗೆ ಅವರ ಧರ್ಮಪತ್ನಿ ಯಾರು? ಅವರ ಮಕ್ಕಳ ಹೆಸರು ಏನು ಹೀಗೆ ಈ ವಿಚಾರವಾಗಿ ತಿಳಿದುಕೊಳ್ಳೋಣ.
ಮಲ್ಲಿಕಾರ್ಜುನ ಖರ್ಗೆ ಅವರ ಧರ್ಮಪತ್ನಿ ರಾಧಾಬಾಯಿ. ಮಲ್ಲಿಕಾರ್ಜು ನ ಖರ್ಗೆ ಅವರು 1968ರ ಮೇ 13ನೇ ತಾರೀಖಿನಂದು ರಾಧಾಬಾಯಿ ಎನ್ನುವವರನ್ನು ಮದುವೆಯಾದರೂ. ರಾಧಾಬಾಯಿ ಅವರು ಚಿತ್ತಾಪುರ ತಾಲೂಕಿನ ಗುಂಡಗುರ್ತಿ ದೊಡ್ಡಮನೆ ಕುಟುಂಬದವರಾಗಿದ್ದರು. ಖರ್ಗೆ ಅವರ ರಾಜಕೀಯ ಪಾತ್ರದಲ್ಲಿ ಅವರ ಪತ್ನಿ ರಾಧಾಬಾಯಿ ಅವರ ಪಾತ್ರವೂ ಸಹ ದೊಡ್ಡದಿದೆ. ಖರ್ಗೆ ಅವರಿಗಿಂತ ರಾಧಾಬಾಯಿ ಅವರ ಆಸ್ತಿ ಹೆಚ್ಚಾಗಿದ್ದು ಇವರು ತಮ್ಮದೇ ಕುಟುಂಬಗಳ ಸಂಸ್ಥೆಗಳ ಪೈಕಿ ಒಂದರಲ್ಲಿ ತಮ್ಮದೇ ಆದ ಶೇರನ್ನು ಹೊಂದಿದ್ದಾರೆ.
ಅಂದ ಹಾಗೆ ಖರ್ಗೆ ಕುಟುಂಬ ಟೆಕ್ನಾಲಜಿ, ಇನ್ವೆಸ್ಟ್ಮೆಂಟ್, ರಿಯಲ್ ಎಸ್ಟೇಟ್, ಕನ್ಸಲ್ಟಿಂಗ್ ಸಂಸ್ಥೆಗಳನ್ನು ಹೊಂದಿದೆ. ಖರ್ಗೆ ಅವರಿಗೆ ಮಕ್ಕಳು ಎಷ್ಟು? ಗಾಂಧಿ ಕುಟುಂಬಕ್ಕೂ ಮಕ್ಕಳಿಗೂ ಏನು ಸಂಬಂಧ? ಖರ್ಗೆ ಹಾಗೂ ರಾಧಾಬಾಯಿ ದಂಪತಿಗೆ ಐದು ಜನ ಮಕ್ಕಳಿದ್ದಾರೆ. ಅವರಲ್ಲಿ ಮೂವರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು.
ಖರ್ಗೆ ಅವರು ಗಾಂಧಿ ಕುಟುಂಬಕ್ಕೆ ಎಷ್ಟು ನಿಷ್ಟರಾಗಿದ್ದಾರೆ ಮತ್ತು ಎಷ್ಟು ಪ್ರೀತಿ ಇಟ್ಟಿದ್ದಾರೆ ಎಂದರೆ ಮಕ್ಕಳಿಗೆ ಇಟ್ಟಿರುವಂತಹ ಹೆಸರಿನಿಂದಲೇ ಗೊತ್ತಾಗುತ್ತದೆ. ತಮ್ಮ ಮಕ್ಕಳಿಗೆ ಪ್ರಿಯಾಂಕ ಖರ್ಗೆ, ರಾಹುಲ್ ಮಿಲಿಂದ್, ಪ್ರಿಯದರ್ಶಿನಿ, ಮತ್ತು ಜಯಶ್ರೀ ಎಂಬ ಹೆಸರನ್ನು ಇಟ್ಟಿದ್ದಾರೆ. ಪ್ರಿಯಾಂಕ ಎಂದರೆ ಪ್ರಿಯಾಂಕ ಗಾಂಧಿ. ರಾಹುಲ್ ಎಂದರೆ ರಾಹುಲ್ ಗಾಂಧಿಯ ಹೆಸರಾಗಿದೆ.
ಅದೇ ರೀತಿ ಪ್ರಿಯದರ್ಶಿನಿ ಎಂಬುವುದು ಇಂದಿರಾಗಾಂಧಿಯವರ ಮೊದಲಿನ ಹೆಸರಾಗಿತ್ತು. ಹೀಗೆ ಐವರು ಮಕ್ಕಳಲ್ಲಿ ಮೂರು ಮಕ್ಕಳಿಗೆ ಗಾಂಧಿ ಪರಿವಾರದ ಹೆಸರನ್ನು ಇಟ್ಟು ಗಾಂಧಿ ಕುಟುಂಬದ ಮೇಲೆ ಅಭಿಮಾನವನ್ನು ತೋರಿದರು ಖರ್ಗೆ. ಖರ್ಗೆ ಮಕ್ಕಳು ಈಗ ಏನು ಮಾಡುತ್ತಿದ್ದಾರೆ? ಪ್ರಿಯಾಂಕ್ ಖರ್ಗೆ ಅವರೊಬ್ಬರನ್ನು ಬಿಟ್ಟು ಉಳಿದವ ರೆಲ್ಲ ರಾಜಕೀಯದಿಂದ ಸಾರ್ವಜನಿಕರಿಂದ ದೂರ ಉಳಿದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.