ತಾಯಿ ಲಕ್ಷ್ಮಿಯು ಜೀವನದಲ್ಲಿ ಆಗಮಿಸುವ ಮುನ್ನ ನೀಡುವ ಸೂಚನೆಗಳು ಇವು..ನಿಮಗೂ ಈ 4 ಸೂಚನೆ ಸಿಕ್ಕಿದ್ರೆ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ತಾಯಿ ಲಕ್ಷ್ಮಿಯು ಜೀವನದಲ್ಲಿ ಆಗಮಿಸುವ ಮುನ್ನ ನೀಡುವ ಸೂಚನೆಗಳು….||

ಮನೆಯಲ್ಲಿ ಇದ್ದಕ್ಕಿದ್ದಂತೆ ಕಪ್ಪು ಇರುವೆಗಳು ಕಾಣಿಸಿದರೆ ಸದ್ಯದಲ್ಲೇ ಹಣಕಾಸಿನ ಸಮಸ್ಯೆಗಳು ಇದ್ದರೆ ಬಗೆ ಹರಿಯುತ್ತವೆ ಅನ್ನುವುದರ ಸೂಚನೆ ಕಪ್ಪು ಇರುವೆಗಳು ಮನೆಯ ಒಳಗೆ ಬರುವುದು ಶುಭಸೂಚಕ. ಮನೆಯಲ್ಲಿ ಪಕ್ಷಿಗಳು ಬಂದು ಗೂಡು ಕಟ್ಟಿದರೆ ಅದು ಶುಭ ಸೂಚಕ. ಶುಕ್ರವಾರದ ದಿನ ಮನೆಗೆ ಯಾರಾದರೂ ಹೂವುಗಳನ್ನು ತಂದು ಕೊಟ್ಟರೆ ಬೇಡ ಅನ್ನಬೇಡಿ.

ಅದು ಅತ್ಯಂತ ಶುಭವಾದದ್ದು ಸಾಕ್ಷಾತ್ ಲಕ್ಷ್ಮಿಯೇ ಮನೆಗೆ ಬಂದ ಹಾಗೆ.
ಬೆಳಿಗ್ಗೆ ಎದ್ದ ತಕ್ಷಣ ದೇವತಫೋಟೋವನ್ನು ನೋಡಿ ಮನೆಯಿಂದ ಹೊರಗೆ ಬಂದಾಗ ಯಾರಾದರೂ ಕಸಗುಡಿಸುವುದನ್ನು ನೋಡಿದರೆ ಅದು ಶುಭಸೂಚಕ. ಬೆಳಗ್ಗೆ ಎದ್ದ ತಕ್ಷಣಘಂಟೆಯ ಶಬ್ದ ಮತ್ತು ಶಂಕನಾದವು ಕೇಳಿಸಿದರೆ ಸಂಪತ್ತಿನ ಅಭಿವೃದ್ಧಿಯಾಗುತ್ತದೆ ಅನ್ನುವುದರ ಸಂಕೇತ.


ಮನೆಯ ಮುಂದೆ ಹಾಕಿದ ತುಳಸಿ ಗಿಡವು ಹಚ್ಚ ಹಸಿರಾಗಿ ಬೆಳೆದರೆ ಆ ಮನೆಯು ತುಳಸಿಗಿಡ ಬೆಳೆದ ಹಾಗೇ ಅಭಿವೃದ್ಧಿ ಅಗುತ್ತದೆ. ತುಳಸಿ ಗಿಡ ಹೆಚ್ಚಗಿ ಬೆಳೆದರೆ ಅದು ಶುಭ ಸೂಚನೆ. ಮನೆಯಲ್ಲಿ ಸದಾ ಹಲ್ಲಿಯು ಕಾಣಿಸಿದರೆ ಶುಭ ಅದರಲ್ಲೂ ಮನೆಯ ಒಂದೇ ಸ್ಥಳದಲ್ಲಿ ಮೂರು ಹಲ್ಲಿಗಳು ಕಾಣಿಸಿದರೆ ಅದು ಶುಭ ಸೂಚಕ. ಹಣದ ಆಗಮನ ಮನೆಗೆ ಆಗುತ್ತದೆ ಅನ್ನುವುದರ ಸೂಚನೆ.

ಮನೆಯಲ್ಲಿ ಜರಿಯು ಕಾಣಿಸಿದರೆ ಖಂಡಿತವಾಗಿ ಅದು ತಾಯಿ ಲಕ್ಷ್ಮಿ ದೇವಿಯ ಆಗಮನದ ಸೂಚನೆ ಇದರಿಂದ ಯಾವುದಾದರು ಒಂದು ಕಡೆಯಿಂದ ಖಂಡಿತ ಒಳ್ಳೆಯದು ಆಗುತ್ತದೆ. ಬೆಳಿಗ್ಗೆ ಎದ್ದಾಗ ಗೊಚಿ ಕಾಣಿಸಿದರೆ ಶುಭ ಏಕೆಂದರೆ ಗೂಬೆಯು ಲಕ್ಷ್ಮೀ ದೇವಿಯ ವಾಹನ ಗೂಬೇ ರಾತ್ರಿ ಮಾತ್ರ ಕಾಣಿಸುತ್ತೆ. ಹಗಲಿನಲ್ಲಿ ಕಾಣಿಸುವುದಿಲ್ಲ. ಸಾಮಾನ್ಯವಾಗಿ ಗೂಬೆಯು ಹಗಲಿನಲ್ಲಿ ಯಾರ ಕಣ್ಣಿಗೂ ಕಾಣಿಸುವು ದಿಲ್ಲ ಒಂದು ವೇಳೆ ಹಗಲಿನಲ್ಲಿ ಗೂಬೆ ಕಾಣಿಸಿದರೆ ಅದು ಅತ್ಯಂತ ಶುಭ.

ಗೋಮಾತೆಯು ಪದೇ ಪದೇ ಮನೆಯ ಮುಂದೆ ಬಂದು ನಿಂತರೆ ಶುಭ ಸಂಕೇತ. ಗೋಮಾತೆಯು ಪದೇಪದೇ ಮನೆಯಮುಂದೆ ಕಾಣಿಸಿ ಕೊಂಡರೆ ಅದಕ್ಕೆ ಫಲ ಆಹಾರಗಳನ್ನು ನೀಡಿ ಸಂತೃಪ್ತಿಗೊಳಿಸಿ, ಪೂಜೆ ಮಾಡುವ ಸಮಯದಲ್ಲಿ ದೇವರ ಮನೆಯಲ್ಲಿರುವ ಪುಷ್ಪಗಳು ಬಲ ಭಾಗದಲ್ಲಿ ಬಿದ್ದರೆ ಶುಭ ವಾದದ್ದು. ನೆನೆದ ಕಾರ್ಯಗಳು ಸಿದ್ಧಿಸುತ್ತದೆ. ಮುಸ್ಸಂಜೆ ಸಮಯದಲ್ಲಿ ಯಾರಾದರೂ ನಿಮಗೆ ತುಂಬಿದ ಬಿಂದಿಗೆ ಕೊಟ್ಟರೆ ಹಾಲು ಕೊಟ್ಟರೆ, ಸಿಹಿಪದಾರ್ಥಗಳನ್ನು ಕೊಟ್ಟರೆ ಇದು ಜೀವನದಲ್ಲಿ ಒಳ್ಳೆಯ ದಿನಗಳು ಬರುವುದರ ಸಂಕೇತ.

ಕೋತಿಯು ಮನೆಯ ಒಳ ನಡೆದು ಮನೆಯಲ್ಲಿರುವ ಆಹಾತ ಅಥವಾ ಫಲಗಳನ್ನು ಸೇವಿಸಿದರೆ ಶುಭ ಸೂಚನೆ. ಪೊರಕೆ ಆನೆ, ಗೂಬೆ, ಹಲ್ಲಿ, ಶಂಖನಾದ, ಮಕ್ಷತ್ರ, ಹೂವು, ಹೊಸ್ತಿಲು ಹಾಲು ಹಸು ಇವುಗಳು ಕನಸಿನಲ್ಲಿ ಕಾಣಿಸಿದರೆ ಸದ್ಯದಲ್ಲೇ ಧನ ಪ್ರಾಪ್ತಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *