ನೀವು ಶಿರಡಿಗೆ ಹೋದಾಗ ಈ 10 ಸ್ಥಳಗಳನ್ನು ಮಿಸ್ ಮಾಡ್ಕೊಬೇಡಿ..ಶಿರಡಿಯಲ್ಲಿ ನೋಡಲೆಬೇಕಾದ ಹತ್ತು ಸ್ಥಳಗಳು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಶಿರಡಿಯಲ್ಲಿ ನೋಡಲೇಬೇಕಾದಂತ ಪ್ರಮುಖ 10 ಸ್ಥಳಗಳು……!!

ಶಿರಡಿ ಇದು ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ ಜಿಲ್ಲೆಯಲ್ಲಿ ಇರುವಂತಹ ಒಂದು ಸಣ್ಣ ಗ್ರಾಮೀಣ ಪಟ್ಟಣ. ಸಾಯಿಬಾಬಾ ಎಂದು ಪ್ರೀತಿಯಿಂದ ಕರೆಯಲ್ಪಡುವ ಶ್ರೀ ಸಚ್ಚಿದಾನಂದ ಸದ್ಗುರು ಸಾಯಿನಾಥ್ ಮಹಾರಾಜ್ ಅವರಿಗೆ ಸೇರಿದಂತಹ ಪುಣ್ಯಕ್ಷೇತ್ರವೇ ಶಿರಡಿ. ಸಾಯಿ ಬಾಬಾ ಅವರ ಹೆಜ್ಜೆಯ ಗುರುತುಗಳು ಶಿರಡಿಯನ್ನು ಪವಿತ್ರ ಸ್ಥಳವನ್ನಾ ಗಿಸಿದೆ. ಸುಮಾರು 60 ವರ್ಷಗಳ ಕಾಲ

ಶಿರಡಿ ಕ್ಷೇತ್ರದಲ್ಲಿ ತಂದಿದ್ದು ಮನುಕುಲಕ್ಕೆ ಸೇವೆಯನ್ನು ಸಲ್ಲಿಸಿ ಅಮೂಲ್ಯವಾದಂತಹ ಬೋಧನೆಗಳನ್ನು ಜಗತ್ತಿಗೆ ಬೋಧಿಸಿ ದಂತಹ ಬಾಬಾ ರವರು ಆನಂತರ ಶಿರಡಿಯಲ್ಲಿಯೇ ಸಮಾಧಿ ಹೊಂದಿದರು. ಸಮಾಧಿಯ ನಂತರವೂ ಸಹ ತಾವು ಸಕ್ರಿಯ ರಾಗಿರುತ್ತೇವೆ ಎಂದು ಸ್ವತಹ ಬಾಬಾ ಅವರೇ ತಿಳಿಸಿದ್ದರು. ಇಂದಿಗೂ ಸಾಯಿಬಾಬಾ ಅವರ ಭಕ್ತಾದಿಗಳು ಅವರ ಉಪಸ್ಥಿತಿಯನ್ನು ಶಿರಡಿ ಕ್ಷೇತ್ರದಲ್ಲಿ ಅನುಭವಿಸುತ್ತಿ ರುತ್ತಾರೆ.

ದೇಶದ ನಾನಾ ಕಡೆಗಳಿಂದ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶಿರಡಿ ಕ್ಷೇತ್ರಕ್ಕೆ ಆಗಮಿಸಿ ಗುರುವಿನ ಕೃಪೆಗೆ ಪಾತ್ರರಾಗು ತ್ತಾರೆ. ಶಿರಡಿಯಲ್ಲಿ ಸಾಯಿಬಾಬಾ ಅವರ ಸಮಾಧಿ ಸ್ಥಳ ಮಾತ್ರ ವಲ್ಲದೆ ಸಾಯಿಬಾಬಾ ಅವರ ಜೀವನಕ್ಕೆ ಸಂಬಂಧಪಟ್ಟಂತಹ ಅನೇಕ ಸ್ಥಳಗಳು ಇವೆ. ಹಾಗಾದರೆ ಈ ದಿನ ಶಿರಡಿಯಲ್ಲಿ ಸಾಯಿಬಾಬಾ ಅವರ ಭಕ್ತಾದಿಗಳು ನೋಡಲೇಬೇಕಾದಂತಹ ಇನ್ನೂ ಹಲವಾರು ಸ್ಥಳಗಳು ಯಾವುವು ಹಾಗೂ ಅವುಗಳು ಎಲ್ಲಿದೆ.

ಹಾಗೂ ಆ ಜಾಗಕ್ಕೂ ಸಾಯಿಬಾಬಾ ಅವರಿಗೂ ಏನು ಸಂಬಂಧವಿದೆ ಹೀಗೆ ಈ ಎಲ್ಲಾ ವಿಚಾರವಾಗಿ ಕುರಿತಂತಹ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಚರ್ಚಿಸೋಣ. ಮೊದಲನೆಯದಾಗಿ ಸಾಯಿ ಮಂದಿರ ಅಥವಾ ಸಮಾಧಿ ಮಂದಿರ ಶಿರಡಿ ಕ್ಷೇತ್ರದ ಕೇಂದ್ರ ಭಾಗದಲ್ಲಿಯೇ ಸಾಯಿಬಾಬಾ ಅವರ ಸಮಾಧಿ ಮಂದಿರವಿದೆ. ಈ ಮಂದಿರವು ಮುಂಜಾನೆ 4 ಗಂಟೆಗೆ ತೆರೆದರೆ ರಾತ್ರಿ 11:00 ಗಂಟೆಗೆ ಮುಚ್ಚಲಾಗುತ್ತದೆ.

ಸಾಯಿಬಾಬಾ ಅವರ ಸಮಾಧಿ ಮಂದಿರವೂ ಸಾಯಿಬಾಬಾ ಅವರ ಸಮಾಧಿಯನ್ನು ಹೊಂದಿರುವಂತಹ ದೇಗುಲವಾಗಿದ್ದು ದೇಗುಲವನ್ನು ನಾಗ್ ಪುರಕ್ಕೆ ಸೇರಿದಂತಹ ಒಬ್ಬ ಶ್ರೀಮಂತ ಭಕ್ತ ಗೋಪಾಲ್ ರಾವ್ ಬೂಟಿ ಅವರು ನಿರ್ಮಿಸಿದ್ದಾರೆ. ಬಾಬಾ ಅವರ ಸಮಾಧಿ ಮಂದಿರವನ್ನು ಮೂಲತಃ ಮೂಲಧರರನ್ನು ಪ್ರತಿಷ್ಠಾಪಿಸುವ ಉದ್ದೇಶದಿಂದ ನಿರ್ಮಾಣ ಮಾಡಲಾಗಿತ್ತು. ದೇವಸ್ಥಾನದ ನಿರ್ಮಾಣ ಕಾಮಗಾರಿ ಜರುಗಿರುವಾಗ ಬೂಟಿ ಅವರಿಗೆ

ಸ್ವತಹ ಬಾಬಾ ಅವರೇ ಸಲಹೆಯನ್ನು ನೀಡುತ್ತಿದ್ದರು ಕಲ್ಲಿನಿಂದ ನಿರ್ಮಿಸಲಾಗಿರುವುದರಿಂದ ಇದನ್ನು ದಗಡಿವಾಡ ಎಂದು ಕರೆಯಲಾಗು ತ್ತದೆ. ದೇವಾಲಯ ನಿರ್ಮಾಣ ಕಾರ್ಯ ಇನ್ನೇನು ಮುಗಿಯುತ್ತಿದೆ ಎನ್ನುವ ಹಂತಕ್ಕೆ ತಲುಪುವಾಗ ಬಾಬಾ ಅವರ ಆರೋಗ್ಯ ಕೆಟ್ಟಿತು. 1918ರಲ್ಲಿ ಸಾಯಿಬಾಬಾ ಅವರು ಇಹಲೋಕ ತ್ಯಜಿಸಿದರು. ತದನಂತರ ಅವರನ್ನು ದಗಡಿವಾಡದಲ್ಲಿ ಮುರಳಿಧರರನ್ನು ಪ್ರತಿಷ್ಠಾಪಿಸಬೇಕಿದ್ದ ಸ್ಥಳದಲ್ಲಿಯೇ ಬಾಬಾ ಅವರನ್ನು ಸಮಾಧಿ ಮಾಡಲಾಯಿತು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *