ಹುಟ್ಟಿದ ತಿಂಗಳಿನ ಪ್ರಕಾರ ಮನಸ್ಥಿತಿ ಹಾಗೂ ಗುಣ ಸ್ವಭಾವ ಹೇಗಿರುತ್ತೆ ನೋಡಿ ..ಜನವರಿಯಿಂದ ಡಿಸೆಂಬರ್ ತನಕ.. » Karnataka's Best News Portal

ಹುಟ್ಟಿದ ತಿಂಗಳಿನ ಪ್ರಕಾರ ಮನಸ್ಥಿತಿ ಹಾಗೂ ಗುಣ ಸ್ವಭಾವ ಹೇಗಿರುತ್ತೆ ನೋಡಿ ..ಜನವರಿಯಿಂದ ಡಿಸೆಂಬರ್ ತನಕ..

ಹುಟ್ಟಿದ ತಿಂಗಳು ಅವರ ಮನಸ್ಥಿತಿ ಹೇಗಿರುತ್ತೆ ಎಂದು ತಿಳಿಸುತ್ತದೆ….||

WhatsApp Group Join Now
Telegram Group Join Now

ಶಾಸ್ತ್ರ ಪುರಾಣದ ಪ್ರಕಾರ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಯಾವು ದೇ ಒಂದು ಮಗು ಹುಟ್ಟಿದ ತಕ್ಷಣ ಆ ಮಗು ಹುಟ್ಟಿದಂತಹ ಸಮಯ, ಘಳಿಗೆ ಹಾಗೂ ಯಾವ ದಿನ ಹುಟ್ಟಿದೆ ಹೀಗೆ ಎಲ್ಲಾ ವಿಚಾರವಾಗಿ ಪ್ರತಿಯೊಬ್ಬರೂ ಕೂಡ ತಿಳಿದುಕೊಂಡಿರುತ್ತೇವೆ ಹಾಗೂ ಅವುಗಳನ್ನು ಸದಾ ಕಾಲ ನೆನಪಿರುವಂತೆ ಒಂದು ಕಡೆ ಬರೆದು ಇಟ್ಟುಕೊಳ್ಳುತ್ತೇವೆ.

ಏಕೆಂದರೆ ಅದು ಅವರ ಇಡೀ ಜೀವನ ಯಾವ ರೀತಿ ಇರುತ್ತದೆ ಹಾಗೂ ಯಾವ ಸಮಯದಲ್ಲಿ ಅವರಿಗೆ ಯಾವ ರೀತಿಯ ಪರಿಸ್ಥಿತಿಗಳು ಉಂಟಾ ಗುತ್ತದೆ ಹೀಗೆ ಅವರಿಗೆ ಸಂಬಂಧಿಸಿದಂತೆ ಹಲವಾರು ವಿಚಾರಗಳು ತಿಳಿಯುತ್ತದೆ ಯಾವುದೇ ಒಂದು ಮಗು ಹುಟ್ಟಿದ ತಕ್ಷಣ ಅವರ ಸಂಪೂರ್ಣ ವಾದಂತಹ ಮಾಹಿತಿಯನ್ನು ತಪ್ಪದೆ ಸಂಪೂರ್ಣವಾಗಿ ಬರೆದಿಟ್ಟುಕೊಂಡಿರುತ್ತಾರೆ.

ಹಾಗಾದರೆ ಈ ದಿನ ಯಾವ ತಿಂಗಳಿನಲ್ಲಿ ಜನಿಸಿದಂತಹ ವ್ಯಕ್ತಿಗಳು ಅವರು ತಮ್ಮ ಜೀವನದಲ್ಲಿ ಯಾವ ರೀತಿಯ ಮನಸ್ಥಿತಿಯನ್ನು ಹೊಂದಿರುತ್ತಾರೆ. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಮೊದಲನೆಯದಾಗಿ ಜನವರಿ ತಿಂಗಳಿನಲ್ಲಿ ಹುಟ್ಟಿದಂತಹ ವ್ಯಕ್ತಿಗಳು ಸೂಕ್ತ ಮನಸ್ಸುಳ್ಳವರಾಗಿರುತ್ತಾರೆ ಹಾಗೂ ಬುದ್ಧಿವಂತಿಕೆ ಹೊಂದಿರುತ್ತಾರೆ. ಹಾಗೆ ಫೆಬ್ರವರಿ ತಿಂಗಳಿನಲ್ಲಿ ಜನಿಸಿದಂತಹ ವ್ಯಕ್ತಿಗಳು ತಮ್ಮ ಶಿಕ್ಷಣದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಜೊತೆಗೆ ಬುದ್ಧಿವಂತರು ಸಹ ಆಗಿರುತ್ತಾರೆ.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಜೊತೆಗೆ ಅದರಿಂದ ಹೆಚ್ಚು ಖ್ಯಾತಿಯನ್ನು ಸಹ ಪಡೆದುಕೊಂಡಿರುತ್ತಾರೆ. ಇನ್ನು ಮಾರ್ಚ್ ನಲ್ಲಿ ಹುಟ್ಟಿದವರು ತಮ್ಮ ಸ್ವಭಾವದಲ್ಲಿ ಗರ್ಭವನ್ನು ಹೊಂದಿರುತ್ತಾರೆ ಹಾಗೆ ಯಾವುದಾದರೂ ಒಂದು ವಿಚಾರದಲ್ಲಿ ಹೆಮ್ಮೆ ಯನ್ನು ಪಡೆದುಕೊಳ್ಳುತ್ತಿರುತ್ತಾರೆ ಹಾಗೂ ಇವರು ರಾಜಕೀಯದಲ್ಲಿ ಹೆಚ್ಚು ಆಸಕ್ತಿಯನ್ನು ಸಹ ಹೊಂದಿರುತ್ತಾರೆ. ಹಾಗೆಯೇ ಏಪ್ರಿಲ್ ತಿಂಗಳಿನಲ್ಲಿ ಜನಿಸಿದವರಿಗೆ ಹೆಚ್ಚು ಕೋಪ ಹೊಂದಿರುತ್ತಾರೆ ಹಾಗೂ ಬುದ್ಧಿವಂತಿಕೆಯಲ್ಲಿ ಚುರುಕುತನ ಹಾಗೂ ಧೈರ್ಯವಂತರೂ ಸಹ ಆಗಿರುತ್ತಾರೆ.

ಮೇ ತಿಂಗಳಿನಲ್ಲಿ ಜನಿಸಿದವರು ಪ್ರಯಾಣ ಮಾಡುವುದರಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. ಇವರು ತ್ಯಾಗ ಮಾಡುವುದನ್ನು ಇಷ್ಟಪಡುತ್ತಾರೆ ಹಾಗೂ ಬುದ್ಧಿವಂತರು ಸಹ ಆಗಿರುತ್ತಾರೆ. ಇನ್ನು ಜೂನ್ ತಿಂಗಳಿನಲ್ಲಿ ಹುಟ್ಟಿದವರು ಚುರುಕುತನ ಬುದ್ದಿವಂತಿಕೆ ಹೊಂದಿರುತ್ತಾರೆ ಹಾಗೆಯೇ ಆತುರವೂ ಸಹ ಇವರನ್ನು ಕೆಲವೊಮ್ಮೆ ಸಂಕಷ್ಟಕ್ಕೆ ಗುರಿ ಮಾಡಬಹುದು. ಜುಲೈನಲ್ಲಿ ಹುಟ್ಟಿದವರು ಒಂದು ರೀತಿಯ ಕಷ್ಟ ಜೀವಿಗಳು ಎಂದೇ ಹೇಳಬಹುದು ಕಷ್ಟಪಟ್ಟು ಕೆಲಸ ಮಾಡುತ್ತಾರೆ.

ಹಾಗೆಯೇ ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದವರು ಸಮಯಕ್ಕೆ ಹೆಚ್ಚು ಗೌರವವನ್ನು ಕೊಡುತ್ತಾರೆ ಹಾಗೆಯೇ ತಮ್ಮದೇ ಆದಂತಹ ಸ್ವಂತ ಬುದ್ಧಿವಂತಿಕೆಯನ್ನು ಸ್ವಂತ ಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತಾರೆ. ಸೆಪ್ಟೆಂಬರ್ ನಲ್ಲಿ ಹುಟ್ಟಿದವರು ಸಹ ಚುರುಕುತನ ಆತುರವನ್ನು ಹೊಂದಿರುತ್ತಾರೆ ಅಕ್ಟೋಬರ್ ನಲ್ಲಿ ಹುಟ್ಟಿದವರು ಎಲ್ಲರನ್ನು ಆಕರ್ಷಿಸುವಂತಹ ಗುಣ ಹೊಂದಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">