ಸುಬ್ರಹ್ಮಣ್ಯ ಸ್ವಾಮಿಯ ತಲೆಯ ಮೇಲೆ ವಿಷ ಹಾಕಿದರೆ ಅಮೃತವಾಗಿ ಬದಲಾಗುತ್ತೆ..ನೀವೆ ನೋಡಿ ಕಣ್ಣಾರೆ

ಸುಬ್ರಹ್ಮಣ್ಯ ಸ್ವಾಮಿಯ ತಲೆಯ ಮೇಲೆ ವಿಷ ಹಾಕಿದರೆ ಅಮೃತವಾಗಿ ಬದಲಾಗುತ್ತೆ..! ಭಕ್ತರ ಮುಂದೆ ನಡೆಯುತ್ತೆ ಈ ಪವಾಡ….||

WhatsApp Group Join Now
Telegram Group Join Now

ಈ ದಿನ ನಾವು ಹೇಳಲು ಹೊರಟಿರುವಂತಹ ದೇವಸ್ಥಾನದ ಹೆಸರು ಅರುಲ್ಮಿಗು ದಂಡ ಯುದ್ಧ ಪಾಣಿ ಮುರುಗನ್ ಸ್ವಾಮಿ ದೇವಸ್ಥಾನ, ಕೆಲವೊಂದಷ್ಟು ಜನರಿಗೆ ಈ ದೇವಸ್ಥಾನದ ಪರಿಚಯ ಇರಬಹುದು. ಆದರೆ ಕೆಲವೊಂದಷ್ಟು ಜನರಿಗೆ ಇದರ ಪರಿಚಯವೂ ಸಹ ಇರುವುದಿಲ್ಲ ಇದನ್ನು ನೋಡಿಯೂ ಸಹ ಇರುವುದಿಲ್ಲ.

ಹಾಗಾದರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ ಈ ದೇವಸ್ಥಾನದಲ್ಲಿ ಯಾವ ರೀತಿಯಾದಂತಹ ಅದ್ಭುತ ಪವಾಡಗಳು ನಡೆಯುತ್ತದೆ. ಹಾಗೆ ಈ ದೇವಸ್ಥಾನಕ್ಕೆ ಹೋಗುವಂತಹ ಸಂಪೂರ್ಣವಾದ ವಿಳಾಸ ಹೇಗೆ? ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿಯೋಣ. ಈ ದೇವಸ್ಥಾನ ಯಾವುದು? ನಮ್ಮ ಪಕ್ಕದ ರಾಜ್ಯವಾದ ತಮಿಳುನಾಡಿನಲ್ಲಿ.

ಸಾಮಾನ್ಯವಾಗಿ ದೇವರ ಶಿಲೆಯನ್ನು ಸಾಲಿಗ್ರಾಮ ಶಿಲೆ, ಪಂಚಲೋಹ ಶಿಲೆ, ಅಥವಾ ಕಲ್ಲಿನಿಂದ ತಯಾರು ಮಾಡಿರುತ್ತಾರೆ. ಆದರೆ ಈಗ ನಾವು ಹೇಳಲು ಹೊರಟಿರುವಂತಹ ಈ ಒಂದು ದೇವಸ್ಥಾನದಲ್ಲಿ ನೆಲೆಸಿರುವo ತಹ ಶಿಲೆಯು 9 ವಿಷಗಳನ್ನು ಸೇರಿಸಿ ತಯಾರು ಮಾಡಿರುವ ಶಿಲೆ. ದೇವಸ್ಥಾನದಲ್ಲಿ ನೆಲೆಸಿರುವಂತಹ ಮುರುಗನ್ ದೇವರಿಗೆ ಅಭಿಷೇಕ ಮಾಡಿದಂತಹ ತೀರ್ಥವನ್ನು ತೆಗೆದುಕೊಂಡರೆ ಯಾವುದೇ ರೋಗ ಇದ್ದರೂ ಅದು ಸಂಪೂರ್ಣವಾಗಿ ಗುಣಮುಖವಾಗುತ್ತದೆ.

ಈ ದೇವಸ್ಥಾನಕ್ಕೆ ಹೋಗುವಂತಹ ವಿಳಾಸ ನೋಡುವುದಾದರೆ. ಮೊದಲು ಕರ್ನಾಟಕದ ನೆರೆ ರಾಜ್ಯವಾದ ತಮಿಳುನಾಡಿನಲ್ಲಿ ಇರುವ ಕೊಯಮತ್ತೂರ್ ನಗರಕ್ಕೆ ಮೊದಲು ಹೋಗಬೇಕು. ಅಲ್ಲಿಂದ ನೀವು 15 ಕಿ.ಮೀ ಪ್ರಯಾಣ ಮಾಡಿದರೆ ಮಲು ಮಿಂಚಂ ಪಟ್ಟಿ ಎಂಬ ಹಳ್ಳಿ ಸಿಗುತ್ತದೆ. ಇದೇ ಹಳ್ಳಿಯಲ್ಲಿ ನೆಲೆಸಿರುವ ಅರುಲ್ಮಿಗು ದಂಡ ಯುದ್ಧ ಪಾಣಿ ಮುರುಗನ್ ಸ್ವಾಮಿ ದೇವಸ್ಥಾನ.

ಒಂದು ಸರ್ವೆಯ ಪ್ರಕಾರ ಪ್ರಪಂಚದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ಕೊಟ್ಟಿರುವಂತಹ ದೇವಸ್ಥಾನ ಯಾವುದು ಎಂದರೆ ಅದ್ಯಾವುದು ಅಲ್ಲ ಈ ದಿನ ನಾವು ಹೇಳಲು ಹೊರಟಿರುವಂತಹ ಅರುಲ್ಮಿಗು ದಂಡ ಯುದ್ಧ ಪಾಣಿ ಮುರುಗನ್ ಸ್ವಾಮಿ ದೇವಸ್ಥಾನ. ಹೌದು ಈ ದೇವಸ್ಥಾನವು ಮುರುಗನ್ ಪಳನಿ ಬೆಟ್ಟದ ಮೇಲೆ ಇದೆ. ಈ ಒಂದು ಬೆಟ್ಟವನ್ನು ಮೇಲು ಪರ್ವತದ ಒಂದು ಭಾಗವೆಂದು ಪುರಾವೆಯಲ್ಲಿ ಉಲ್ಲೇಖಿಸಲಾಗಿದೆ.

ಶಿವ ಪರಮಾತ್ಮರೂ ಸಹ ಈ ಬೆಟ್ಟದ ಮೇಲೆ ಬಂದು ತಪಸ್ಸು ಮಾಡಿ ಹೋಗಿದ್ದರು ಎಂದು ಹೇಳುತ್ತಾರೆ. ಈ ದೇವಸ್ಥಾನದಲ್ಲಿ ನೆಲೆಸಿರುವುದು ಮುರುಗನ್ ದೇವರು ಮುರುಗನ್ ದೇವರು ಎಂದರೆ ಬೇರೆ ಯಾರು ಅಲ್ಲ ಸುಬ್ರಹ್ಮಣ್ಯ ಸ್ವಾಮಿ ದೇವರು. ವರ್ಷಕ್ಕೆ ಏನಿಲ್ಲ ಅಂದರೂ ಸುಮಾರು 1 ಕೋಟಿ 50 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]