26 ವರ್ಷದ ಈ ಯುವಕ ಈಗ ನಡೆದಾಡುವ ದೇವರು ಯೂಟ್ಯೂಬ್ ಫೇಸ್ಬುಕ್ ಎಲ್ಲಿ ನೋಡಿದರು ಇವರದ್ದೆ ವಿಡಿಯೋ..

ಏನಿದು ಎಕ್ಸಿಟ್ ಪೋಲ್ ಇವರು ಹೇಳಿದ್ದು ನಿಜವಾಗುತ್ತಾ ಇದನ್ನು ಹೇಗೆ ನಡೆಸುತ್ತಾರೆ ಗೊತ್ತಾ…..?

WhatsApp Group Join Now
Telegram Group Join Now

ನೆನ್ನೆಯಷ್ಟೇ ವಿಧಾನ ಸಭೆಯ ವೋಟಿಂಗ್ ಮುಗಿದಿದೆ ಎಲ್ಲರೂ ಕೂಡ ಚುನಾವಣೆಯ ರಿಸಲ್ಟ್ ನ ತವಕದಲ್ಲಿ ಇದ್ದಾರೆ. ಈ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವಂತಹ ಎಕ್ಸಿಟ್ ಪೋಲ್ ಗಳ ಸಮೀಕ್ಷಾ ವರದಿ ಇದೀಗ ಎಲ್ಲಾ ಕಡೆ ಕೌತುಕವನ್ನು ಮೂಡಿಸಿದೆ. ಯಾವ ಪಕ್ಷ ಈ ಬಾರಿ ಬಹುಮತದೊಂದಿಗೆ ಮೇಲೆ ಬರಬಹುದು ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.

ಮಾಧ್ಯಮಗಳಲ್ಲಿ ಈ ಸಲವೂ ಸಹ ಎಲ್ಲಾ ಸಲಗಳ ಹಾಗೆ ಎಕ್ಸಿಟ್ ಪೋಲ್ ಗಳ ಸಮೀಕ್ಷಾ ವರದಿ ಜೋರಾಗಿಯೇ ಇದೆ. ಇದೀಗ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬರುತ್ತದೆ ಎಂದು ಹತ್ತರಲ್ಲಿ ಎಂಟು ಸಮೀಕ್ಷೆಗಳು ವರದಿಯನ್ನು ಮಾಡಿದೆ. ಆದರೆ ಈಗ ವಿಷಯ ಅದಲ್ಲ ಈ ಎಕ್ಸಿಟ್ ಫೋಲ್ ಗಳು ಎಂದರೆ ಏನು.

ಇವು ಹೇಗೆ ಕೆಲಸ ಮಾಡುತ್ತವೆ ಹಾಗೂ ಯಾವ ಅಧಿಕೃತದ ಆಧಾರದ ಮೇಲೆ ಇವು ಯಾವ ಪಕ್ಷಕ್ಕೆ ಎಷ್ಟು ಸೀಟ್ ಸಿಗುತ್ತದೆ ಅಂತ ವರದಿ ಮಾಡುತ್ತವೆ ಎನ್ನುವಂತಹ ಗೊಂದಲ ಅನೇಕರಲ್ಲಿ ಇದೆ ಎಕ್ಸೆಟ್ ಪೋಲ್ ಎಂಬುದು ಬಹಳ ಕುತೂಹಲಕಾರಿ ವಿಚಾರ. ಹಾಗಾದರೆ ಬನ್ನಿ ಈ ದಿನ ಈ ವಿಚಾರಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳೋಣ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟ ಎಕ್ಸಿಟ್ ಪೋಲ್ ಅಥವಾ ಚುನಾವಣೆ ಸಮೀಕ್ಷೆ ಕಡೆಗೆ ಎಲ್ಲರ ಗಮನ ಕೇಂದ್ರೀಕೃತವಾಗಿರು ವಂತಹ ಸಂಗತಿ ಇದೀಗ ನಿಮಗೂ ಕೂಡ ಗೊತ್ತು. ಹೀಗಾಗಿ ಇಂತಹ ಸಮಯದಲ್ಲಿ ಎಲ್ಲರಿಗೂ ಕೂಡ ಎಕ್ಸಿಟ್ ಪೋಲ್ ಗಳ ಫಲಿತಾಂಶಗಳ ಕಡೆಗೆ ಹೆಚ್ಚು ಕುತೂಹಲ ಇರುತ್ತದೆ. ಎಕ್ಸಿಟ್ ಪೋಲ್ ಎಂದರೆ ಬೇರೆ ಯಾವುದು ಅಲ್ಲ ಅದು ಕೂಡ ಒಂದು ಸಮೀಕ್ಷೆ.

ಚುನಾವಣೆ ನಡೆಯುತ್ತಿರುವಂತಹ ನಿರ್ದಿಷ್ಟ ಪ್ರದೇಶ ಅಥವಾ ರಾಜ್ಯದ ಮತದಾರರಿಂದ ಅಭಿಪ್ರಾಯವನ್ನು ನಡೆಸಿ ಸಂಗ್ರಹಿಸುವಂತಹ ಸಮೀಕ್ಷೆ ಇದು. ಈ ಸಮೀಕ್ಷೆಯನ್ನು ಮತದಾನೋತ್ತರ ಸಮೀಕ್ಷೆ ಚುನಾವಣೋ ತ್ತರ ಸಮೀಕ್ಷೆ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಮತದಾರರು ಚುನಾವಣೆಯಲ್ಲಿ ಮತವನ್ನು ಚಲಾಯಿಸಿದ ನಂತರ ಇದನ್ನು ಮಾಡ ಲಾಗುತ್ತದೆ. ಸರಳವಾಗಿ ಹೇಳುವುದಾದರೆ ಅವರು ಮತ ಚಲಾಯಿಸಿದ ನಂತರ ಅವರು ಯಾವ ಪಕ್ಷವನ್ನು ಬೆಂಬಲಿಸುತ್ತಾರೆ ಮತ್ತು

ಯಾವ ಅಭ್ಯರ್ಥಿಗೆ ಮತವನ್ನು ಹಾಕಿದ್ದಾರೆ ಎಂದು ಮತದಾರರನ್ನು ಕೇಳುವಂತಹ ಪ್ರಕ್ರಿಯೆಯೇ ಇದು. ಈಗ ಈ ಸಮೀಕ್ಷೆಯನ್ನು ಯಾರು ನಡೆಸುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರವನ್ನು ನೋಡುವುದಾದರೆ ಈ ಎಕ್ಸಿಟ್ ಪೋಲ್ ಗಳನ್ನು ಯಾವುದೇ ಸರ್ಕಾರಿ ಸಂಸ್ಥೆಗಳು ನಡೆಸುವು ದಿಲ್ಲ ಸಾಮಾನ್ಯವಾಗಿ ಕೆಲವು ಮಾಧ್ಯಮ ಸಂಸ್ಥೆಗಳ ಸಹಯೋಗ ದೊಂದಿಗೆ ಸಮೀಕ್ಷೆ ಮಾಡುವಂತಹ ಖಾಸಗಿ ಸಂಸ್ಥೆಗಳು ಇಂತಹ ಎಕ್ಸಿಟ್ ಪೋಲ್ ಗಳನ್ನು ನಡೆಸುತ್ತವೆ ಎಂಬುದನ್ನು ಇಲ್ಲಿ ಮತದಾರರು ತಿಳಿದುಕೊಂಡಿರಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]