ನೂತನ ಮುಸ್ಲಿಂ ಎಂ ಎಲ್ ಎ ಗಳು ಹೆಚ್ಚು ಮತ ಯಾರಿಗೆ ಸಿಕ್ತು ಗೊತ್ತಾ ? ಹೇಗಿದ್ದಾರೆ ನೋಡಿ ಹೊಸ ಶಾಸಕರು

ಹೊಸ ಮುಸ್ಲಿಂ ಶಾಸಕರು ಹೇಗಿದ್ದಾರೆ ನೋಡಿ……!!

WhatsApp Group Join Now
Telegram Group Join Now

ಎಂಎಲ್ಎ ಎಂದರೆ ಎಲ್ಲ ಜಾತಿ ಧರ್ಮದವರು ಸಹ ಇರುತ್ತಾರೆ. ಈ ಸಲ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 9 ಮುಸ್ಲಿಮರು ಗೆದ್ದು ಎಂಎಲ್ಎ ಆಗಿದ್ದಾರೆ. ಹಾಗಾದರೆ ಕರ್ನಾಟಕದ ನೂತನ ಮುಸ್ಲಿಂ ಶಾಸಕರು ಯಾರು? ಅವರು ಎಷ್ಟು ಅಂತರದಿಂದ ಗೆದ್ದಿದ್ದಾರೆ ಎನ್ನುವುದನ್ನು ಈ ದಿನ ತಿಳಿಯೋಣ. ಮೊದಲನೆಯದಾಗಿ ಜಮೀರ್ ಅಹ್ಮದ್ ಖಾನ್.

ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತೊಮ್ಮೆ ಎಲೆಕ್ಷನ್ ಎಂಬ ಪರೀಕ್ಷೆಯಲ್ಲಿ ಪಾಸ್ ಆಗಿ ಎಂಎಲ್ಎ ಆಗಿದ್ದಾರೆ. ಇವರು ಬಿಜೆಪಿಯ ಭಾಸ್ಕರ್ ರಾವ್ ಅವರ ವಿರುದ್ಧ ಬರೋಬ್ಬರಿ 53 ಸಾವಿರ ವೋಟ್ ಗಳಿಂದ ಗೆದ್ದಿದ್ದಾರೆ. ಎರಡನೆಯದಾಗಿ ತನ್ವೀರ್ ಸೇಟ್ ಮೈಸೂರು ಜಿಲ್ಲೆಯ ನರಸಿಂಹ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಟ್ ಕೂಡ ಮತ್ತೊಮ್ಮೆ ಗೆದ್ದಿದ್ದಾರೆ.

ಇವರು ಬಿಜೆಪಿಯ ಸತೀಶ್ ಸಂದೇಶ್ ಸ್ವಾಮಿ ಅವರ ವಿರುದ್ಧ ಬರೋಬ್ಬರಿ 31 ಸಾವಿರ ವೋಟ್ ಗಳಿಂದ ಗೆದ್ದಿದ್ದಾರೆ. ಇನ್ನು ಮೂರನೆಯದಾಗಿ ರಿಜ್ವಾನ್ ಅರ್ಷದ್ ಬೆಂಗಳೂರಿನ ಶಿವಾಜಿನಗರ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅವರು ಮತ್ತೊಮ್ಮೆ ಗೆದ್ದು ಎಂಎಲ್ಎ ಆಗಿದ್ದಾರೆ. ಇವರು ಬಿಜೆಪಿಯ ಚಂದ್ರ ಎನ್ ವಿರುದ್ಧ ಬರೋಬ್ಬರಿ 23 ಸಾವಿರ ವೋಟ್ ಗಳಿಂದ ಗೆದ್ದಿದ್ದಾರೆ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಇನ್ನು ನಾಲ್ಕನೆಯದಾಗಿ ಯುಟಿ ಖಾದರ್ ಮಂಗಳೂರು ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಯುಟಿ ಖಾದರ್ ಅವರು ಮತ್ತೊಮ್ಮೆ ಗೆದ್ದು ಎಂಎಲ್ಎ ಆಗಿದ್ದಾರೆ. ಇವರು ಬಿಜೆಪಿಯ ಸತೀಶ್ ಕುಂಪಲ ವಿರುದ್ಧ ಬರೋಬ್ಬರಿ 22,000 ವೋಟ್ ಗಳಿಂದ ಗೆದ್ದಿದ್ದಾರೆ. ಐದನೆಯದಾಗಿ ರಹೀಂ ಖಾನ್ ಬೀದರ್ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ರಹೀಮ್ ಖಾನ್ ಅವರು ಮತ್ತೊಮ್ಮೆ ಗೆದ್ದು ಎಂಎಲ್ಎ ಆಗಿದ್ದಾರೆ.

ಇವರು ಜೆಡಿಎಸ್ ನ ಸೂರ್ಯಕಾಂತ ನಾಗಮಾರಪಳ್ಳಿ ವಿರುದ್ಧ 10 ಸಾವಿರ ವೋಟ್ ಗಳಿಂದ ಗೆದ್ದಿದ್ದಾರೆ. ಆರನೇಯದಾಗಿ ಎನ್ ಎ ಹ್ಯಾರಿಸ್ ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರು ಮತ್ತೊಮ್ಮೆ ಗೆದ್ದು ಎಂಎಲ್ಎ ಆಗಿದ್ದಾರೆ. ಇವರು ಬಿಜೆಪಿಯ ಕೆ ಶಿವಕುಮಾರ್ ವಿರುದ್ಧ 7 ಸಾವಿರ ವೋಟ್ ಗಳಿಂದ ಗೆದ್ದಿದ್ದಾರೆ.

ಏಳನೆಯದಾಗಿ ಖನೀಝ್ ಫಾತಿಮಾ ಕಲಬುರಗಿ ಉತ್ತರ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕಿ ಖನೀಝ್ ಫಾತಿಮಾ ಅವರು ಕೂಡ ಮತ್ತೊಮ್ಮೆ ಗೆದ್ದಿದ್ದಾರೆ. ಈ ಮೂಲಕ ರಾಜ್ಯದ ಏಕೈಕ ಮುಸ್ಲಿಂ ಮಹಿಳಾ ಎಂಎಲ್ಎ ಎನಿಸಿಕೊಂಡಿದ್ದಾರೆ. ಇವರು ಬಿಜೆಪಿಯ ಚಂದು ಪಾಟೀಲ್ ವಿರುದ್ಧ 2 ಸಾವಿರ ವೋಟ್ ಗಳಿಂದ ಗೆದ್ದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">