ವೃಷಭ ರಾಶಿ ರೋಹಿಣಿ ನಕ್ಷತ್ರ ರಹಸ್ಯಗಳು……!!
ನಮ್ಮಲ್ಲಿ ಪ್ರತಿಯೊಬ್ಬರಿಗೂ ಕೂಡ ಹಲವಾರು ರೀತಿಯ ನಕ್ಷತ್ರಗಳು ಇದ್ದು ಅವರ ಹೆಸರುಗಳ ಆಧಾರದ ಮೇಲೆ ಅವರು ಹುಟ್ಟಿದ ದಿನಾಂಕದ ಆಧಾರದ ಮೇಲೆ ಅವರ ನಕ್ಷತ್ರಗಳು ಇರುತ್ತದೆ. ಅದೇ ರೀತಿಯಾಗಿ ಈ ದಿನ ರೋಹಿಣಿ ನಕ್ಷತ್ರದ ಬಗ್ಗೆ ಯಾವ ಕೆಲವೊಂದಷ್ಟು ಒಳ್ಳೆಯ ವಿಚಾರಗಳು ಇದೆ. ಅದರಲ್ಲೂ ರೋಹಿಣಿ ನಕ್ಷತ್ರದ ಉತ್ತಮವಾದಂತಹ ಗುಣಗಳು ಏನು.
ಈ ನಕ್ಷತ್ರದವರು ಯಾವ ರೀತಿಯ ಗುಣ ಸ್ವಭಾವವನ್ನು ಹೊಂದಿರು ತ್ತಾರೆ, ಅದರಲ್ಲೂ ಶ್ರೀ ಕೃಷ್ಣ ಪರಮಾತ್ಮನ ನಕ್ಷತ್ರವಾಗಿರುವಂತಹ ರೋಹಿಣಿ ನಕ್ಷತ್ರ ಬಹಳ ಅದ್ಭುತವಾದಂತಹ ವಿಚಾರಗಳನ್ನು ಒಳ ಗೊಂಡಿದೆ. ಹಾಗಾದರೆ ಈ ದಿನ ರೋಹಿಣಿ ನಕ್ಷತ್ರಕ್ಕೆ ಸಂಬಂಧಪಟ್ಟಂತೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ರೋಹಿಣಿ ನಕ್ಷತ್ರ ಹೊಂದಿದವರ ವ್ಯಕ್ತಿಯ ಜೀವನದಲ್ಲಿ ಯಾವ ರೀತಿಯಾದಂತಹ ಗುಣಲಕ್ಷಣಗಳು ಇರುತ್ತದೆ.
ಅಂದರೆ ಅವರು ತಮ್ಮ ಜೀವನದಲ್ಲಿ ಯಾವ ರೀತಿಯ ಕೆಲವೊಂದು ವಿಚಾರಗಳನ್ನು ರಹಸ್ಯವಾಗಿ ಇಟ್ಟುಕೊಂಡಿರುತ್ತಾರೆ. ಹೀಗೆ ಈ ವಿಚಾರ ವಾಗಿ ಸಂಬಂಧಿಸಿದಂತೆ ಯಾರಿಗೂ ತಿಳಿಯದೆ ಇರುವಂತಹ ಕೆಲವೊಂದ ಷ್ಟು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಈ ನಕ್ಷತ್ರದ ವ್ಯಕ್ತಿಗಳು ಯಾವುದೇ ಸ್ಥಳಕ್ಕೆ ಹೋದರು ಎಲ್ಲೇ ಹೋದರು ಅವರು ತಮ್ಮ ವ್ಯಕ್ತಿತ್ವವನ್ನು ಬಿಟ್ಟು ಕೊಡದೆ ತಮ್ಮ ವ್ಯಕ್ತಿತ್ವವೇ ಹೆಚ್ಚು ಎನ್ನುವ ಹಾಗೆ ನಡೆದುಕೊಳ್ಳುವುದೇ ಇವರ ಬಹಳ ಮುಖ್ಯವಾದಂತಹ ವಿಷಯವಾಗಿದೆ.
ಈ ನಕ್ಷತ್ರದ ವ್ಯಕ್ತಿಗಳು ಶ್ರೀ ಕೃಷ್ಣನ ಪರಮ ಭಕ್ತರಾಗಿರುತ್ತಾರೆ ಇದನ್ನು ನೀವು ನಿಮ್ಮ ಸುತ್ತಮುತ್ತ ಇರುವವರನ್ನು ಗಮನಿಸಿದರೆ ತಿಳಿಯುತ್ತದೆ. 27 ನಕ್ಷತ್ರಗಳು ಕೂಡ ಚಂದ್ರನ ಹೆಂಡತಿಯರು ಅದರಲ್ಲಿ ಈ ರೋಹಿಣಿ ಎನ್ನುವವಳು ಮೊದಲನೇಯವಳು. ಇದರ ಸಂಕೇತ ಎತ್ತಿನ ಬಂಡಿ. ಇದು ಆ ವ್ಯಕ್ತಿ ತನ್ನ ಜೀವನದಲ್ಲಿ ಹಂತ ಹಂತವಾಗಿ ಬೆಳೆಯುವುದನ್ನು ಸೂಚಿಸುತ್ತದೆ.
ಈ ನಕ್ಷತ್ರದ ನಾಲ್ಕು ಪಾದಗಳು ಸೇರುವುದು ವೃಷಭ ರಾಶಿಯಲ್ಲಿ. ರೋಹಿಣಿ ಎಂಬ ಹೆಸರಿನ ಅರ್ಥವೇ ಕೆಂಪು. ಇದು ಉಗ್ರ ಕೋಪವನ್ನು ಸಹ ಹೊಂದಿರಬಹುದು. ಈ ನಕ್ಷತ್ರದಲ್ಲಿ ಹುಟ್ಟಿದವರು ಯಾವ ರೀತಿ ಇರುತ್ತಾರೆ ಎಂದು ನೋಡುವುದಾದರೆ ತೆಳ್ಳಗಿನ ಮೈಕಟ್ಟು, ಮಧ್ಯಮ ಎತ್ತರ, ದೊಡ್ಡ ವಿಶೇಷವಾದಂತಹ ಕಾಂತಿ ಇದೆ ಎನ್ನುವಂತಹ ಕಣ್ಣುಗಳು. ದಪ್ಪನಾಗಿರುವಂತಹ ಕೆಳ ತುಟಿ ಹಾಗು ಯಾವಾಗಲೂ ಸಹ ನಗುಮುಖ ಹೊಂದಿರುತ್ತಾರೆ.
ಹಾಗಾದರೆ ಇವರ ಮಾನಸಿಕ ಲಕ್ಷಣ ಗುಣ ಹೇಗಿರುತ್ತದೆ ಎಂದರೆ ಇವರು ಸತ್ಯವಂತರು, ಇವರು ಯಾರ ಬಗ್ಗೆಯೂ ಹೆಚ್ಚು ಮಾತನಾಡುವುದಕ್ಕೆ ಇಷ್ಟಪಡುವುದಿಲ್ಲ ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಜೀವನವನ್ನು ನಡೆಸುತ್ತಿರುತ್ತಾರೆ. ಇವರು ತಮ್ಮ ಮಾತಿನಲ್ಲಿ ಬಹಳಷ್ಟು ಹಿಡಿತವನ್ನು ಇಟ್ಟುಕೊಂಡಿರುತ್ತಾರೆ ಜೊತೆಗೆ ಹೆಚ್ಚು ತಾಳ್ಮೆಯನ್ನು ಹೊಂದಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.