ಸೋಮವಾರ ಜನಿಸಿದವರು ಈ 2 ರಾಜಯೋಗ ಹೊತ್ತು ಹುಟ್ಟಿರುತ್ತಾರೆ..ಸೋಮವಾರ ಜನಿಸಿದವರ ಗುಣ ಸ್ವಭಾವ ನೋಡಿ

ಸೋಮವಾರ ಜನಿಸಿದವರು ಈ ಎರಡು ರಾಜಯೋಗ ಹೊತ್ತು ಹುಟ್ಟಿರುತ್ತಾರೆ…….!!

WhatsApp Group Join Now
Telegram Group Join Now

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಹುಟ್ಟಿದ ದಿನವು ನಮ್ಮ ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ನಮ್ಮ ಜೀವನದ ದಿಕ್ಕು ಮತ್ತು ಸ್ಥಿತಿಯನ್ನೂ ನಿರ್ಧರಿಸುವಲ್ಲಿ ನಮ್ಮ ಜನ್ಮ ದಿನಾಂಕ ದೊಡ್ಡ ಪಾತ್ರವನ್ನೇ ವಹಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀವು ಸೋಮವಾರದಂದು ಹುಟ್ಟಿದರೆ ಸೋಮ ಎಂದರೆ ಚಂದ್ರನಿಂದ ಪ್ರಭಾವಿತರಾಗಿರುತ್ತೀರಿ.

ಸೋಮವಾರ ಶಿವನಿಗೆ ಅತ್ಯಂತ ಪ್ರಿಯವಾದ ದಿನ ಸೋಮವಾರದ ದಿನ ಜನಿಸಿದಂತವರ ಮೇಲೆ ಚಂದ್ರನ ಪ್ರಭಾವ ತುಂಬಾ ಹೆಚ್ಚಾಗಿ ಇರುತ್ತದೆ. ಈ ಜನರು ಚಂದ್ರನಂತೆಯೇ ಶಾಂತವಾಗಿ ಇರುತ್ತಾರೆ. ಆದರೆ ಚಂದ್ರನು ಆಗಾಗ ಏರಿಳಿತಗೊಳ್ಳುವುದರಿಂದ ಸೋಮವಾರದಂದು ಜನಿಸಿದಂತ ವರ ಆಲೋಚನೆಗಳು ಕೂಡ ಬದಲಾಗುತ್ತಲೇ ಇರುತ್ತದೆ. ಹೀಗೆ ಈ ದಿನ ಜನಿಸಿದಂತವರ ಇನ್ನೂ ಹಲವಾರು ಮಾಹಿತಿ ಈ ಕೆಳಗಿನಂತೆ ಇದೆ.

ಸೋಮವಾರ ಹುಟ್ಟಿದಂತವರ ಅದೃಷ್ಟ ಸಂಖ್ಯೆ 2 ಮತ್ತು ಅದೃಷ್ಟದ ಬಣ್ಣ ಬಿಳಿ ಬಣ್ಣ ಅದೃಷ್ಟದ ದಿನ ಸೋಮವಾರ ಶುಕ್ರವಾರ ಮತ್ತು ಭಾನುವಾರ ಆಗಿರುತ್ತದೆ. ಸೋಮವಾರ ಹುಟ್ಟಿದವರ ಸ್ವಭಾವ ಯಾವ ರೀತಿ ಇರುತ್ತದೆ ಎಂದರೆ ಇವರು ಯಾವಾಗಲೂ ಹಸನ್ಮುಖಿಯಾಗಿ ಇರುತ್ತಾರೆ. ಯಾವುದೇ ರೀತಿಯ ಕಷ್ಟಗಳು ಬಂದರೂ ಕೂಡ ಅದನ್ನು ಎದುರಿಸುವಂತಹ ತಾಕತ್ತು ಶಕ್ತಿ ಇವರಲ್ಲಿ ಇರುತ್ತದೆ.

ಅಷ್ಟೇ ಅಲ್ಲದೆ ಇವರು ಹೆಚ್ಚು ಬುದ್ಧಿವಂತರು ಸಹ ಆಗಿರುತ್ತಾರೆ ಹಾಗೂ ಕಲಾತ್ಮಕ ವ್ಯಕ್ತಿತ್ವವು ಕೂಡ ಇವರದಾಗಿರುತ್ತದೆ. ಇವರ ಬುದ್ಧಿವಂತಿಕೆ ಯಿಂದ ಇವರು ತಮ್ಮ ಜೀವನದಲ್ಲಿ ತುಂಬಾ ಯಶಸ್ಸನ್ನು ಗಳಿಸುತ್ತಾರೆ. ಸೋಮವಾರದ ದಿನ ಚಂದ್ರನ ದಿನ ಎಂದು ಹೇಳಲಾಗುತ್ತದೆ. ಹಾಗಾಗಿ ಇವರು ಕುಳ್ಳಗಿರುತ್ತಾರೆ ಎಂದು ಹೇಳಬಹುದು. ಮತ್ತು ದೊಡ್ಡ ಕಣ್ಣು ಗಳನ್ನು ಹೊಂದಿರುತ್ತಾರೆ. ಸೋಮವಾರ ಹುಟ್ಟಿದವರು 9, 12, 27 ರ ವಯಸ್ಸಿನಲ್ಲಿ.

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

ಚಿಕ್ಕ ಪುಟ್ಟ ಸಮಸ್ಯೆಗಳನ್ನು ಎದುರಿಸಿರುತ್ತಾರೆ. ಆದರೆ ಇವೆಲ್ಲವನ್ನೂ ಸಹ ಧೈರ್ಯವಾಗಿ ಎದುರಿಸಿ ಜೀವನವನ್ನು ಸುಗಮವಾಗಿ ನಡೆಸುತ್ತಾರೆ. ಸೋಮವಾರ ಹುಟ್ಟಿದ ಪುರುಷರು ಹೆಣ್ಣು ಮಕ್ಕಳಿಗೆ ಗೌರವ ಕೊಡುವಂತಹ ಗುಣವನ್ನು ಹೊಂದಿರುತ್ತಾರೆ. ಹೆಣ್ಣು ಮಕ್ಕಳ ಜೊತೆ ಮಾತನಾಡುವಾಗ ಗೌರವ ಕೊಟ್ಟು ಮಾತನಾಡುವಂಥ ವ್ಯಕ್ತಿತ್ವ ಇವರದಾಗಿರುತ್ತದೆ. ಸೋಮವಾರ ಹುಟ್ಟಿದವರ ಭವಿಷ್ಯ ಯಾವ ರೀತಿ ಇರುತ್ತದೆ ಎಂದರೆ.

ಇವರಿಗೆ ಬಿಳಿ ಬಣ್ಣದಿಂದ ಅದೃಷ್ಟ ಸಿಗುತ್ತದೆ ಹಾಗಾಗಿ ಯಾವುದೇ ಕೆಲಸ ಕಾರ್ಯಗಳಿಗೆ ಹೋಗುವಾಗ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿಕೊಂಡು ಹೋದರೆ ಯಶಸ್ಸು ಸಿಗುತ್ತದೆ. ಸೋಮವಾರ ಹುಟ್ಟಿದವರ ಮ್ಯಾರೇಜ್ ಲೈಫ್ ಲವ್ ಲೈಫ್ ಹೇಗಿರುತ್ತದೆ ಎಂದು ನೋಡುವುದಾದರೆ ಇವರು ಯಾವುದೇ ವ್ಯಕ್ತಿಯನ್ನು ಪ್ರೀತಿಸುವಾಗ ಹಾಗೂ ಮದುವೆಯಾಗುವಾಗ ತುಂಬ ಯೋಚನೆಯನ್ನು ಮಾಡಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">