ಜನರಲ್ ಹಾಸ್ಟೆಲ್ ನಿಂದ ವಿಧಾನಸೌಧಕ್ಕೆ ಡಿಕೆ ಶಿವಕುಮಾರ್ ಬಂದದ್ದು ಹೇಗೆ ಗೊತ್ತಾ…….??
ಈಗ ರಾಜ್ಯದ ನೂತನ ಸಿಎಂ ಯಾರಾಗಲಿದ್ದಾರೆ ಎಂಬ ಚರ್ಚೆ ಅತ್ಯಂತ ಬಿರುಸಿನಿಂದ ಸಾಗಿವೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿರುವಂತಹ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಈ ಇಬ್ಬರ ನಡುವೆ ಸಿಎಂ ಸೀಟ್ ಗಾಗಿ ತೀವ್ರ ಸ್ಪರ್ಧೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕನಕಪುರ ಬಂಡೆ ಎಂದೇ ಹೆಸರಾಗಿರುವಂತಹ ರಾಜಕೀಯ ಬಲಾಡ್ಯರು ಎಂದೇ ಕರೆಸಿಕೊಂಡಂತಹ.
ಮಾನ್ಯ ಡಿಕೆ ಶಿವಕುಮಾರ್ ಅವರ ರೋಚಕ ಸಂಗತಿಗಳ ಕುರಿತಾಗಿ ಹಾಗೂ ಅವರ ವೈಯಕ್ತಿಕ ಜೀವನದ ಕುರಿತಾಗಿ ಹಾಗೂ ಅವರು ಹೇಗೆ ರಾಜಕೀಯಕ್ಕೆ ಪಾದರ್ಪಣೆಯನ್ನು ಮಾಡಿದರು ಹಾಗೂ ಅವರ ಹಿನ್ನೆಲೆ ಏನು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಇಂಟರೆಸ್ಟಿಂಗ್ ಮಾಹಿತಿಗಳ ಬಗ್ಗೆ ಈ ದಿನ ತಿಳಿಯುತ್ತಾ ಹೋಗೋಣ.
ಡಿಕೆ ಶಿವಕುಮಾರ್ ರಾಜ್ಯದ ಕೆಪಿಸಿಸಿ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ಪೂರ್ಣ ಹೆಸರು ದೊಡ್ಡಾಲ ಹಳ್ಳಿ ಕೆಂಪೇಗೌಡ ಶಿವಕುಮಾರ್ ಇವರು 1962ರ ಮೇ 15ನೇ ತಾರೀಖಿ ನಂದು ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಗೆ ಹಿರಿಯ ಮಗನಾಗಿ ಜನಿಸುತ್ತಾರೆ. ಇವರಿಗೆ ಡಿಕೆ ಸುರೇಶ್ ಎಂಬ ಕಿರಿಯ ಸಹೋದರ ಹಾಗೂ ಒಬ್ಬ ಕಿರಿಯ ಸಹೋದರಿ ಸಹ ಇದ್ದಾರೆ.
ಇನ್ನು ಇವರ ಜನ್ಮಸ್ಥಳ ಈಗಿನ ರಾಮನಗರದ ಕನಕಪುರ ತಾಲೂಕು. ಈ ಹಿಂದೆ ಇದು ಬೆಂಗಳೂರು ನಗರದ ಗ್ರಾಮಾಂತರದ ಭಾಗವಾಗಿತ್ತು. ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ಬೆಳೆಸಿದ ರಾಜ್ಯದ ಯುವ ವಿದ್ಯಾರ್ಥಿಯ ನಾಯಕರುಗಳ ಪೈಕಿ ಈ ಡಿಕೆಶಿ ಅವರ ಹೆಸರು ಕೂಡ ಪ್ರಮುಖವಾದ ದ್ದು. ಆರಂಭದಿಂದಲೂ ಕೂಡ ರಾಜಕೀಯದ ಬದುಕಿನಲ್ಲಿ ಆಸಕ್ತಿಯನ್ನು ಇಟ್ಟುಕೊಂಡಂತಹ ಇವರು ತಾವು ವಿದ್ಯಾರ್ಥಿಯಾಗಿದ್ದಾಗಲೇ.
ರಾಜಕೀಯದ ಬದುಕಿಗೆ ಇಳಿದಿದ್ದರು. ಒಕ್ಕಲಿಗ ಸಮುದಾಯದವರಾ ದಂತಹ ಇವರು 1977ರಲ್ಲಿ ಬೆಂಗಳೂರಿನ ವಿದ್ಯಾವರ್ಧಕ ಶಾಲೆಯಲ್ಲಿ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಮುಗಿಸುತ್ತಾರೆ. ಮುಂದೆ ಅವರು 1980ರ ಹೊತ್ತಿಗೆ ಶ್ರೀ ವೀರೇಂದ್ರ ಪಾಟೀಲ್ ಪಿಯು ಹಾಗೂ ತಮ್ಮ ಪಿಯು ಶಿಕ್ಷಣವನ್ನು ಮುಗಿಸಿದಂತಹ ಇವರು. ಮುಂದೆ ಬೆಂಗಳೂರಿನ ಎಸ್ ಜೆ ಆರ್ ಸಿ ಕಾಲೇಜ್ ನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪೂರೈಸುತ್ತಾರೆ.
ವಿದ್ಯಾರ್ಥಿಯಾಗಿದ್ದಾಗಲೇ ಇವರು ರಾಜಕೀಯವಾಗಿ ಸಕ್ರಿಯವಾಗಿ ದ್ದರು. ಆಗ ಕಾಂಗ್ರೆಸ್ ನ ಘಟಕವಾಗಿದಂತಹ NSUI ಎಂಬ ಸಂಘ ಇತ್ತು ಈ ಸಂಘಕ್ಕೂ ಡಿಕೆಶಿ ಅವರು ಸೇರುತ್ತಾರೆ. ವಿದ್ಯಾರ್ಥಿ ಸಮೂಹದಲ್ಲಿ ಗುರುತಿಸಿಕೊಂಡಿದ್ದಂತಹ ಡಿಕೆಶಿ ಅವರು ಯುವಕರನ್ನು ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳ ಕಡೆಗೆ ಹುರಿದುಂಬಿಸುವಂತೆ ಕೆಲಸವನ್ನು ಮಾಡುತ್ತಾ ಮುಂದೆ NSUI ನ ಬೆಂಗಳೂರಿನ ಘಟಕಕ್ಕೆ ಇವರು ಅಧ್ಯಕ್ಷರು ಕೂಡ ಆದರೂ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.