ಮಂಗಳವಾರ ಜನಿಸಿದವರನ್ನು ಎದುರು ಹಾಕಿಕೊಳ್ಳಬೇಡಿ..ಮಂಗಳವಾರ ಜನಿಸಿದವರ ಗುಣಸ್ವಭಾವ ಹೇಗಿರುತ್ತೆ ನೋಡಿ » Karnataka's Best News Portal

ಮಂಗಳವಾರ ಜನಿಸಿದವರನ್ನು ಎದುರು ಹಾಕಿಕೊಳ್ಳಬೇಡಿ..ಮಂಗಳವಾರ ಜನಿಸಿದವರ ಗುಣಸ್ವಭಾವ ಹೇಗಿರುತ್ತೆ ನೋಡಿ

ಮಂಗಳವಾರ ಜನಿಸಿದವರನ್ನು ಎದುರು ಹಾಕಿಕೊಳ್ಳಬೇಡಿ……!!

WhatsApp Group Join Now
Telegram Group Join Now

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಏಳು ದಿನಗಳು ತಮ್ಮದೇ ಆದ ಪ್ರತ್ಯೇಕ ಗ್ರಹವನ್ನು ಹೊಂದಿದೆ. ವಾರದ ಪ್ರತಿಯೊಂದು ದಿನವನ್ನು ಬೇರೆ ಬೇರೆ ಗ್ರಹಗಳು ಆಳುತ್ತದೆ. ಸೋಮವಾರದ ಗ್ರಹವು ಚಂದ್ರ ಮತ್ತು ಮಂಗಳವಾರದ ಗ್ರಹವು ಮಂಗಳ ಹಾಗೆಯೇ ಪ್ರತಿದಿನವೂ ತನ್ನದೇ ಆದ ಪ್ರತ್ಯೇಕ ಗ್ರಹವನ್ನು ಹೊಂದಿದೆ ಇದು ಈ ದಿನಗಳಂದು ಜನಿಸಿದವರ ಜನಗಳ ಮೇಲೆ ಪರಿಣಾಮ ಬೀರುತ್ತದೆ.

ಈ ವಾರಗಳು ನಮ್ಮ ವ್ಯಕ್ತಿತ್ವದ ಮೇಲೆ ಬಲವಾದ ಪ್ರಭಾವ ಬೀರುತ್ತದೆ. ಹೀಗಾಗಿ ಗ್ರಹಗಳ ಪ್ರಭಾವದಿಂದ ನಮ್ಮ ನಡವಳಿಕೆಯು ಒಬ್ಬರಿಗಿಂತ ಒಬ್ಬರದ್ದು ಭಿನ್ನವಾಗಿರುತ್ತದೆ. ಹಾಗಾದರೆ ಈ ದಿನ ಮಂಗಳವಾರದ ದಿನ ಜನಿಸಿದಂತಹ ವ್ಯಕ್ತಿಯ ಗುಣಲಕ್ಷಣಗಳು ಅವರ ಸ್ವಭಾವಗಳು ಏನು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ.

ಮಂಗಳವಾರದಂದು ಜನಿಸಿದಂತಹ ವ್ಯಕ್ತಿಗಳು ತುಂಬಾ ಧೈರ್ಯಶಾಲಿ ಮತ್ತು ಗಡಿಬಿಡಿಯ ಸ್ವಭಾವವನ್ನು ಹೊಂದಿರುತ್ತಾರೆ. ಇವರಿಗೆ ಸವಾಲುಗಳನ್ನು ಎದುರಿಸುವುದು ಎಂದರೆ ಬಹಳ ಇಷ್ಟ. ಆದರೆ ಈ ಜನರು ಹೆಚ್ಚು ಕೋಪಕ್ಕೆ ಒಳಗಾಗುತ್ತಾರೆ. ಈ ವ್ಯಕ್ತಿಗಳು ತಮ್ಮ ಕೆಲಸದ ಬಗ್ಗೆ ತುಂಬಾ ಗಂಭೀರವಾಗಿ ಇರುತ್ತಾರೆ. ಇವರು ಶುದ್ಧ ಹೃದಯ ಮತ್ತು ಶುದ್ಧ ಆಲೋಚನೆಗಳನ್ನು ಹೊಂದಿರುತ್ತಾರೆ. ಇವರು ಎಲ್ಲದರಲ್ಲಿಯೂ ಸಹ ದೌರ್ಬಲ್ಯಗಳನ್ನು ಹುಡುಕುವುದಕ್ಕೆ ಪ್ರಯತ್ನಿಸುತ್ತಾರೆ ಮತ್ತು ಕೆಲವೊಮ್ಮೆ ಹಿಂಸಾತ್ಮಕ ವ್ಯಕ್ತಿಗಳಾಗುತ್ತಾರೆ.

See also  ಈ ಹಣ್ಣಿನ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರ ಹಾಕಿದಾಗ ಶುಕ್ರ ದೆಶೆ ಬರಲಿದೆ..ಹಣದ ಹೊಳೆ ಹರಿಯುತ್ತದೆ..

ಕೆಲವೊಮ್ಮೆ ಈ ವ್ಯಕ್ತಿಗಳು ಸಣ್ಣ ವಿಷಯದ ಬಗ್ಗೆಯೂ ಹಾಸ್ಯ ಮಾಡಿದರೆ ಸಹಿಸುವುದಿಲ್ಲ. ಇವರ ಸಕಾರಾತ್ಮಕ ಗುಣ ಅಂದರೆ ತಮ್ಮ ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳುವುದು. ಮತ್ತು ತಮ್ಮ ಉದ್ಯೋಗ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುವುದು. ಮಂಗಳವಾರ ದಂದು ಜನಿಸಿದವರಿಗೆ ಅಡುಗೆ ಮಾಡುವುದರಲ್ಲಿ ಆಸಕ್ತಿ ಇರುವುದಿಲ್ಲ. ಅಡುಗೆ ಮಾಡುವುದು ಎಂದರೆ ಒಂದು ಶಿಕ್ಷೆಯ ಹಾಗೆ ಭಾವಿಸುತ್ತಾರೆ.

ಈ ಜನರು ಹೆಚ್ಚಾಗಿ ಸಂತೋಷವಾಗಿ ಇರುತ್ತಾರೆ. ಇವರು ಸಣ್ಣ ಸುಳ್ಳನ್ನೂ ಸಹ ಸಹಿಸುವುದಿಲ್ಲ. ಸತ್ಯ ಹೇಳುವಂತಹ ವ್ಯಕ್ತಿಗಳಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಮತ್ತು ದುಷ್ಟರ ಬಗ್ಗೆ ತಮ್ಮ ಅಸಹನೆ ಯನ್ನು ಬಹುಬೇಗನೆ ಹೊರಹಾಕುತ್ತಾರೆ. ಮಂಗಳವಾರ ಜನಿಸಿದ ವ್ಯಕ್ತಿಗಳ ಉತ್ತಮ ಲಕ್ಷಣ ಏನು ಎಂದರೆ ಇವರು ಉತ್ತಮ ನಿರ್ಧಾರ ವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಈ ವ್ಯಕ್ತಿಗಳು ದೊಡ್ಡ ಸಮಸ್ಯೆಯನ್ನು ತುಂಬಾ ಬೇಗನೆ ಪರಿಹರಿಸುತ್ತಾರೆ.

ಇವರ ವ್ಯಕ್ತಿತ್ವವು ತುಂಬಾ ಆಕರ್ಷಕವಾಗಿರುತ್ತದೆ. ಮತ್ತು ಸದಾ ನ್ಯಾಯದ ಕಡೆಗೆ ಇರುತ್ತಾರೆ. ಕಷ್ಟದ ಸವಾಲುಗಳನ್ನು ತೆಗೆದುಕೊಳ್ಳುವು ದರ ಮೂಲಕ ವೃತ್ತಿ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಾರೆ. ಈ ಮೂಲಕ ಇತರರನ್ನು ಸುಲಭವಾಗಿ ಸೆಳೆದುಕೊಳ್ಳುವಂತಹ ಗುಣವನ್ನು ಹೊಂದಿರುತ್ತಾರೆ. ಇವರು ಸದಾ ಕಾಲ ಹೊಸದನ್ನು ಕಲಿಯುವುದರ ಬಗ್ಗೆ ಆಸಕ್ತಿ ತೋರುತ್ತರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">