ಕರೆಂಟ್ ಬಿಲ್ ಕಟ್ಟಲ್ಲ ಎಂದ ಯುವಕರು ಉತ್ತರ ಕೊಟ್ಟ ಪಬ್ಲಿಕ್ ಟಿವಿ ರಂಗಣ್ಣ..ಡಿಕೆಶಿ VS ಸಿದ್ದು ಯಾರಾಗ್ತಾರೆ ಸಿಎಂ

ಕರೆಂಟ್ ಬಿಲ್ ಕಟ್ಟಲ್ಲ ಎಂದ ಯುವಕರು….|| ಉತ್ತರ ಕೊಟ್ಟ ರಂಗಣ್ಣ …|| ಡಿಕೆಶಿ v/s ಸಿದ್ದು…||

WhatsApp Group Join Now
Telegram Group Join Now

ಈಗ ಕೆಲವೇ ದಿನಗಳ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣೆಯು ಮುಗಿದ್ದಿದ್ದು ಈ ಬಾರಿ ಸಿಎಂ ಯಾರಾಗುತ್ತಾರೆ ಎನ್ನುವಂತಹ ಗೊಂದಲ ದಲ್ಲಿಯೇ ಇನ್ನೂ ಹಲವಾರು ಜನ ಇದ್ದಾರೆ. ಹೌದು ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚಿನ ವೋಟ್ ಗಳನ್ನು ಪಡೆದುಕೊಂಡು.

ಕಾಂಗ್ರೆಸ್ ಗೆದ್ದಿದ್ದು ಈಗ ಕಾಂಗ್ರೆಸ್ ಪಕ್ಷದಲ್ಲಿಯೇ ಇರುವಂತಹ ಕೆಪಿಸಿಸಿ ಅಧ್ಯಕ್ಷ ರಾಗಿರುವಂತಹ ಡಿಕೆ ಶಿವಕುಮಾರ್ ಇದ್ದು ಇದರ ಜೊತೆ ಸಿದ್ದ ರಾಮಯ್ಯ ಅವರು ಸಹ ಇದ್ದಾರೆ. ಈಗ ಇವರಿಬ್ಬರ ನಡುವೆ ಗುದ್ದಾಟ ಪ್ರಾರಂಭವಾಗಿದ್ದು ಈ ಬಾರಿ ಸಿಎಂ ಯಾರಾಗುತ್ತಾರೆ ಎನ್ನುವಂತಹ ಗೊಂದಲದಲ್ಲಿ ಪ್ರತಿಯೊಬ್ಬರೂ ಸಹ ಇದ್ದಾರೆ.

ಹೌದು ಈ ಬಾರಿ ಯಾವುದೇ ರೀತಿಯಾದಂತಹ ಸಮ್ಮಿಶ್ರ ಸರಕಾರ ಬರದೆ ಅತಿಹೆಚ್ಚಿನ ಮತಗಳನ್ನು ಪಡೆದುಕೊಂಡು ಒಂದೇ ಬಾರಿ ಕಾಂಗ್ರೆ ಸ್ ಪಕ್ಷ ಗೆದ್ದಿದ್ದು ಈ ಬಾರಿ ಸಿಎಂ ಪಟ್ಟಕ್ಕೆ ಕಾಂಗ್ರೆಸ್ ನಲ್ಲಿರುವಂತಹ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ ಅದೇ ರೀತಿಯಾಗಿ ಈ ಬಾರಿ ಡಿಕೆ ಶಿವಕುಮಾರ್ ಆಗುತ್ತಾರ ಅಥವಾ ಸಿದ್ದರಾಮಯ್ಯ ಆಗುತ್ತಾರ ಎನ್ನುವುದೇ ಈಗ ಸಂಶಯ ಅದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದಲ್ಲಿ ಇರುವಂತಹ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು.

ಈ ಬಾರಿ ಜನರು ನಮ್ಮ ಪಕ್ಷವನ್ನು ಗೆಲ್ಲಿಸಿದರೆ ನಾವು ಜನರಿಗೆ 200 ಯೂನಿಟ್ ಕರೆಂಟ್ ಉಚಿತವಾಗಿ ಕೊಡುತ್ತೇವೆ, ಹಾಗೆ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣ ಕೊಡುತ್ತೇವೆ, ಜೊತೆಗೆ ನಿರುದ್ಯೋಗ ಯುವಕ ಯುವತಿಯರಿಗೆ ಇಂತಿಷ್ಟು ಹಣವನ್ನು ಕೊಡುತ್ತೇವೆ ಎನ್ನುವ ಭರವಸೆಯನ್ನು ನೀಡಿದ್ದರು. ಆದರೆ ಈ ಒಂದು ವಿಷಯವಾಗಿ ಈಗ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಪರಿಸ್ಥಿತಿ ಬಂದಿದೆ.

ಹೌದು ಈಗ ಕಾಂಗ್ರೆಸ್ ಪಕ್ಷ ಗೆದ್ದಿದ್ದು ಈ ಒಂದು ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷದವರು ನೀಡಿದಂತಹ ಭರವಸೆಯನ್ನು ಈಡೇರಿಸುವಂತೆ ಅಂದರೆ ಅವರು ಕೊಟ್ಟಿರುವಂತಹ ಭರವಸೆಯನ್ನು ಪರಿಪೂರ್ಣವಾಗಿ ಸುವಂತೆ ಜನರು 200ಯೂನಿಟ್ ಕರೆಂಟ್ ಉಚಿತವಾಗಿ ಕೊಡಬೇಕು ಅಂದರೆ ನಾವು ಯಾವುದೇ ರೀತಿಯಾದಂತಹ ಕರೆಂಟ್ ಬಿಲ್ ಕಟ್ಟುವುದಿಲ್ಲ ಎನ್ನುವಂತಹ ವಿಷಯವನ್ನು ಹೇಳುತ್ತಿದ್ದಾರೆ.

ಹೌದು ಈ ಒಂದು ಘಟನೆಯು ಚಿತ್ರದುರ್ಗದ ಜಾಲಿ ಕಟ್ಟೆಯಲ್ಲಿರು ವಂತಹ ಗ್ರಾಮಸ್ಥರು ಪಟ್ಟು ಹಿಡಿದು ಕುಂತಿದ್ದಾರೆ. ನಾವು ಇನ್ನೂ ಯಾವುದೇ ರೀತಿಯ ಕರೆಂಟ್ ಬಿಲ್ ಪಾವತಿ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷದವರು ಈ ಒಂದು ಆದೇಶವನ್ನು ಹೊರಡಿಸಿದ್ದರು ಆದ್ದರಿಂದ ನಾವು ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ವಿಚಾರ ಈಗ ಸದ್ಯ ಎಲ್ಲೆಡೆ ಸುದ್ದಿಯಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]